ಹುಡುಕಿ

ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಕೊಲಂಬಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಗುಸ್ತಾವೊ ಪೆಟ್ರೋ ಉರೆಗೊರವರನ್ನು ಬರಮಾಡಿಕೊಂಡರು. ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಕೊಲಂಬಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಗುಸ್ತಾವೊ ಪೆಟ್ರೋ ಉರೆಗೊರವರನ್ನು ಬರಮಾಡಿಕೊಂಡರು.  (ANSA)

ಜಗದ್ಗುರು ಲಿಯೋರವರು ಕೊಲಂಬಿಯಾ ಗಣರಾಜ್ಯದ ಅಧ್ಯಕ್ಷರನ್ನು ಭೇಟಿಯಾದರು.

ಗುರುವಾರ, ವ್ಯಾಟಿಕನ್‌ನಲ್ಲಿ ನಡೆದ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು ಕೊಲಂಬಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಗುಸ್ತಾವೊ ಪೆಟ್ರೊ ಉರೆಗೊರವರನ್ನು ಆತ್ಮೀಯವಾಗಿ ಸ್ವಾಗತಿಸಿ ಭೇಟಿಯಾದರು.

ವ್ಯಾಟಿಕನ್ ವರದಿ

ಇಂದು ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಕೊಲಂಬಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಗುಸ್ತಾವೊ ಪೆಟ್ರೊ ಉರೆಗೊರವರನ್ನು ಭೇಟಿಯಾದರು.

ಅನಂತರ, ಅಧ್ಯಕ್ಷರು ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಹಾಗೂ ರಾಜ್ಯಗಳೊಂದಿಗಿನ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ವಿಭಾಗದ ಬಹುಪಕ್ಷೀಯ ವಲಯದ ಉಪಕಾರ್ಯದರ್ಶಿಯಾದ ಮಾನ್ಯ ಡೇನಿಯಲ್ ಪಾಚೊರವರೊಂದಿಗೆ ರಾಜ್ಯ ಕಾರ್ಯದರ್ಶಾಲಯದಲ್ಲಿ ಮಾತುಕತೆ ನಡೆಸಿದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಮಾತುಕತೆಗಳು "ಸೌಹಾರ್ದಯುತ" ವಾತಾವರಣದಲ್ಲಿ ನಡೆದವು. ಅಲ್ಲದೆ, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಕೊಲಂಬಿಯಾ ನಡುವಿನ ಉತ್ತಮ ಸಂಬಂಧಗಳ ಬಗ್ಗೆ ಪರಸ್ಪರ ತೃಪ್ತಿ ವ್ಯಕ್ತಪಡಿಸಲಾಯಿತು.

ಚರ್ಚೆಗಳು "ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವಲ್ಲಿ ಧರ್ಮ ಸಭೆ ಹಾಗೂ ರಾಜ್ಯದ ನಡುವೆ ನಡೆಯುತ್ತಿರುವ ಸಕಾರಾತ್ಮಕ ಮತ್ತು ನಿರಂತರ ಸಹಕಾರ"ದ ಮನೋಭಾವದಿಂದ ಕೂಡಿದ್ದವು ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತಿಳಿಸಿತು.

ಇದಲ್ಲದೆ, ಕೊಲಂಬಿಯಾ ಮತ್ತು ಆ ಪ್ರದೇಶದ ಸಾಮಾಜಿಕ-ರಾಜಕೀಯ ಪರಿಸ್ಥಿತಿಯ ಕುರಿತೂ ಮಾತುಕತೆ ನಡೆಯಿತು. ವಿಶೇಷವಾಗಿ, ಸಂಘರ್ಷಗಳ ಪರಿಣಾಮಗಳು, ಅಂತರರಾಷ್ಟ್ರೀಯ ಸಂಘಟಿತ ಅಪರಾಧ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಗಮನ ಹರಿಸಲಾಯಿತು.

02 ಜುಲೈ 2026, 16:34