ಹುಡುಕಿ

ಪಾದಯಾತ್ರೆಯ ಭೇಟಿಗಾಗಿ ಜಗದ್ಗುರು XIVನೇ ಲಿಯೋರವರು ಲ್ಯಾಂಪೆಡುಸಾಗೆ ಆಗಮಿಸಿದ್ದಾರೆ. ಪಾದಯಾತ್ರೆಯ ಭೇಟಿಗಾಗಿ ಜಗದ್ಗುರು XIVನೇ ಲಿಯೋರವರು ಲ್ಯಾಂಪೆಡುಸಾಗೆ ಆಗಮಿಸಿದ್ದಾರೆ. 

ಜಗದ್ಗುರು ಲಿಯೋರವರು ಲಾಂಪೆಡುಸಾಗೆ ಆಗಮಿಸಿದರು.

ಜಗದ್ಗುರು XIV ನೇ ಲಿಯೋರವರು ಶನಿವಾರ ಬೆಳಿಗ್ಗೆ ದಕ್ಷಿಣ ಇಟಲಿಯ ಲಾಂಪೆಡುಸಾ ದ್ವೀಪಕ್ಕೆ ಆಗಮಿಸಿ ತಮ್ಮ ಧರ್ಮಾಧ್ಯಕ್ಷೀಯ ಭೇಟಿಯನ್ನು ಆರಂಭಿಸಿದರು. ಈ ದ್ವೀಪವು ಆಫ್ರಿಕಾದಿಂದ ಸಮುದ್ರ ಮಾರ್ಗವಾಗಿ ಯುರೋಪ್‌ಗೆ ಪ್ರಯಾಣಿಸುವ ವಲಸಿಗರ ಪ್ರಮುಖ ಆಗಮನ ಕೇಂದ್ರವಾಗಿ ಪ್ರಸಿದ್ಧವಾಗಿದೆ.

ವ್ಯಾಟಿಕನ್ ವರದಿ

ಜುಲೈ 4, ಶನಿವಾರ ಬೆಳಿಗ್ಗೆ 8:54ಕ್ಕೆ, ಜಗದ್ಗುರು XIVನೇ ಲಿಯೋರವರು  ಲಾಂಪೆಡುಸಾ ದ್ವೀಪಕ್ಕೆ ಆಗಮಿಸುವ ಮೂಲಕ ತಮ್ಮ ಧರ್ಮಾಧ್ಯಕ್ಷೀಯ ಭೇಟಿಯನ್ನು ಆರಂಭಿಸಿದರು. ದಕ್ಷಿಣ ಇಟಲಿಯ ಈ ದ್ವೀಪವು ಉತ್ತರ ಆಫ್ರಿಕಾದಿಂದ ಯುರೋಪಿಗೆ ಸಾಗುವ ವಲಸೆ ಮಾರ್ಗಗಳ ಪ್ರಮುಖ ಕೇಂದ್ರವಾಗಿದೆ.

ಜಗದ್ಗುರುಗಳು ಮೊದಲಿಗೆ ದ್ವೀಪದ ಸ್ಮಶಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ವಿಶೇಷ ಸಮಾಧಿ ಪ್ರದೇಶವೂ ಇದೆ. ಬಳಿಕ, ಯುರೋಪ್ ತಲುಪುವ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡ ವಲಸಿಗರ ಸ್ಮರಣಾರ್ಥ ನಿರ್ಮಿಸಲಾದ “ಗೇಟ್‌ವೇ ಟು ಯುರೋಪ್” ಸ್ಮಾರಕಕ್ಕೆ ತೆರಳಲಿದ್ದಾರೆ.

ಅನಂತರ ಅವರು ಫವಾಲೋರೊ ಬಂದರುಗೆ ಭೇಟಿ ನೀಡಿ, ಕೆಲವು ವಲಸಿಗರನ್ನು ಭೇಟಿಯಾಗಲಿದ್ದು, ಆ ಬಂದರಿಗೆ ಜಗದ್ಗುರು ಫ್ರಾನ್ಸಿಸ್ ರವರ ಹೆಸರನ್ನು ಸಮರ್ಪಿಸುವ ಸ್ಮಾರಕ ಫಲಕಕ್ಕೆ ಆಶೀರ್ವಾದ ನೀಡಲಿದ್ದಾರೆ. ಈ ಭೇಟಿ, 2013ರ ಜುಲೈ 8ರಂದು ರೋಮಿನ ಹೊರಗೆ ತಮ್ಮ ಮೊದಲ ಧರ್ಮಾಧ್ಯಕ್ಷೀಯ ಭೇಟಿಯಾಗಿ ಲಾಂಪೆಡುಸಾಕ್ಕೆ ಆಗಮಿಸಿದ್ದ ಜಗದ್ಗುರು ಫ್ರಾನ್ಸಿಸ್ ರವರ ಐತಿಹಾಸಿಕ ಭೇಟಿಯನ್ನು ನೆನಪಿಸುತ್ತದೆ.

ಕೊನೆಯಲ್ಲಿ, ರೋಮಿಗೆ ಮರಳುವ ಮೊದಲು ಜಗದ್ಗುರು XIVನೇ ಲಿಯೋರವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ಸ್ಥಳೀಯ ಆಡಳಿತಾಧಿಕಾರಿಗಳು, ಮಕ್ಕಳು ಹಾಗೂ ಸ್ವಯಂಸೇವಕರನ್ನು ಭೇಟಿಯಾಗಿ ಶುಭಾಶಯ ಕೋರಲಿದ್ದಾರೆ.

ಅವರು ಮಧ್ಯಾಹ್ನ 12:30ಕ್ಕೆ ಲಾಂಪೆಡುಸಾದಿಂದ ನಿರ್ಗಮಿಸಿ, ಮಧ್ಯಾಹ್ನ 1:45ಕ್ಕೆ ರೋಮಿಗೆ ತಲುಪಲಿದ್ದಾರೆ.

04 ಜುಲೈ 2026, 16:28