ಹುಡುಕಿ

ಪೋಲಿಷ್ ಯಾತ್ರಾರ್ಥಿಗಳು ಜಾಸ್ನಾ ಗೋರಾದಲ್ಲಿ ಒಗ್ಗೂಡಿ, ಪೋಲಿಷ್ ರಾಷ್ಟ್ರದ 'ಜಾಸ್ನಾ ಗೋರಾ ಪ್ರತಿಜ್ಞೆ'ಗಳನ್ನು ನವೀಕರಿಸಿದರು. ಪೋಲಿಷ್ ಯಾತ್ರಾರ್ಥಿಗಳು ಜಾಸ್ನಾ ಗೋರಾದಲ್ಲಿ ಒಗ್ಗೂಡಿ, ಪೋಲಿಷ್ ರಾಷ್ಟ್ರದ 'ಜಾಸ್ನಾ ಗೋರಾ ಪ್ರತಿಜ್ಞೆ'ಗಳನ್ನು ನವೀಕರಿಸಿದರು.  (© Krzysztof Świertok / BPJG)

ಜಗದ್ಗುರಗಳು : ಕಮ್ಯುನಿಸ್ಟ್ ಆಡಳಿತದ ಕಾಲದಲ್ಲಿ ಪೋಲೆಂಡ್‌ ಮರಿಯಮ್ಮನವರಿಗೆ ಮಾಡಿದ ಪ್ರತಿಜ್ಞೆಯನ್ನು ಸ್ಮರಿಸಿದರು.

1956ರಲ್ಲಿ ಮೊದಲ ಬಾರಿಗೆ ಮಾಡಲಾದ ಜಾಸ್ನಾ ಗೋರಾ ಪ್ರತಿಜ್ಞೆಗಳನ್ನು 70 ವರ್ಷಗಳ ಬಳಿಕ ಪುನರುಚ್ಚರಿಸಲು ಸೇರಿರುವ ಪೋಲಿಷ್ ತೀರ್ಥಯಾತ್ರಿಕರನ್ನು ಸ್ವಾಗತಿಸಿದ ಜಗದ್ಗುರು XIVನೇ ಲಿಯೋರವರು, ಆ ಪ್ರತಿಜ್ಞೆಗಳು ನೀಡುವ ನೈತಿಕ ನವೀಕರಣದ ಕರೆಯು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

“ಪೋಲೆಂಡ್‌ನ ಸಹೋದರ ಸಹೋದರಿಯರಿಗೆ ನಾನು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಚೆನ್ಸ್ಟೊಹೊವಾದಲ್ಲಿ ಸಮಾವೇಶಗೊಂಡಿರುವವರೊಂದಿಗೆ ನಾನು ಆತ್ಮೀಯವಾಗಿ ಒಂದಾಗಿದ್ದೇನೆ” ಎಂದು ಜಗದ್ಗುರು XIVನೇ ಲಿಯೋರವರು ಬುಧವಾರದ ಸಾಮಾನ್ಯ ದರ್ಶನದಲ್ಲಿ ಹೇಳಿದರು.

ಯುದ್ಧೋತ್ತರ ಪೋಲೆಂಡ್‌ನ ಧರ್ಮ ಸಭೆಯ ಇತಿಹಾಸದಲ್ಲಿನ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದಾದ ಜಾಸ್ನಾ ಗೋರಾ ಪ್ರತಿಜ್ಞೆಗಳನ್ನು ಜಗದ್ಗುರುಗಳು ಸ್ಮರಿಸಿದರು. ಕಮ್ಯುನಿಸ್ಟ್ ಆಡಳಿತದ ಸಂದರ್ಭದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಪೋಲಿಷ್ ಜನರ ಆಧ್ಯಾತ್ಮಿಕ ಅಸ್ಮಿತೆಯ ಪ್ರಮುಖ ರಕ್ಷಕರಲ್ಲಿ ಧರ್ಮ ಸಭೆಯು ಒಂದಾಗಿತ್ತು.

ಪೋಲೆಂಡ್‌ನ ಕಮ್ಯುನಿಸ್ಟ್ ಅಧಿಕಾರಿಗಳ ಬಂಧನದಲ್ಲಿದ್ದಾಗ ಕಾರ್ಡಿನಲ್ ಸ್ಟೆಫಾನ್ ವಿಜಿನ್‌ಸ್ಕಿ ಅವರು ಈ ಪ್ರತಿಜ್ಞೆಗಳ ಪಠ್ಯವನ್ನು ರಚಿಸಿದ್ದರು. ಅದನ್ನು ಮೊದಲ ಬಾರಿಗೆ ಸುಮಾರು 5 ಲಕ್ಷ ವಿಶ್ವಾಸಿಗಳ ಸಮ್ಮುಖದಲ್ಲಿ ವಾಚಿಸಲಾಯಿತು.

“ಮಾನವ ಜೀವದ ರಕ್ಷಣೆ, ವಿವಾಹ ಮತ್ತು ಕುಟುಂಬದ ಕಾಳಜಿ, ಹಾಗೂ ಮಕ್ಕಳು ಮತ್ತು ಯುವಜನರ ಶಿಕ್ಷಣದ ಮೂಲಕ ಸಮಾಜದ ನೈತಿಕ ನವೀಕರಣಕ್ಕಾಗಿ ಅವುಗಳಲ್ಲಿ ಅಡಕವಾಗಿರುವ ಕಾರ್ಯಕ್ರಮವು, ನ್ಯಾಯ ಮತ್ತು ಸಹೋದರತ್ವದ ನಿರ್ಮಾಣಕ್ಕೆ ನಿರಂತರವಾಗಿ ಸ್ಫೂರ್ತಿ ನೀಡಲಿ” ಎಂದು ಪವಿತ್ರ ಪಿತೃ ಹೇಳಿದರು.

ಪ್ರಧಾನ ಧರ್ಮಾಧ್ಯಕ್ಷರು ಬಂಧನದಲ್ಲಿದ್ದಾಗ ಪ್ರತಿಜ್ಞೆಗಳನ್ನು ರಚಿಸಿದರು

ಈ ಮಾತುಗಳ ಹಿಂದೆ ಆ ಪ್ರತಿಜ್ಞೆಗಳು ರೂಪುಗೊಂಡ ಕಥೆಯಿದೆ. 1956ರಲ್ಲಿ ಪೋಲೆಂಡ್‌ನ ಪ್ರಧಾನ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಸ್ಟೆಫಾನ್ ವಿಜಿನ್‌ಸ್ಕಿ ಅವರನ್ನು ಕಮ್ಯುನಿಸ್ಟ್ ಅಧಿಕಾರಿಗಳು ಸುಮಾರು ಮೂರು ವರ್ಷಗಳ ಕಾಲ ಬಂಧನದಲ್ಲಿಟ್ಟಿದ್ದರು.

ಬಂಧನದಲ್ಲಿದ್ದ ಅವಧಿಯಲ್ಲಿ, ಮೊದಲು ದ್ವಿತೀಯ ಮಹಾಯುದ್ಧದ ದುರಂತದಿಂದಲೂ, ನಂತರ ಕಮ್ಯುನಿಸ್ಟ್ ಆಡಳಿತದ ದಮನದಿಂದಲೂ ಗಾಯಗೊಂಡಿದ್ದ ಸಮಾಜಕ್ಕೆ ನೈತಿಕ ನವೀಕರಣದ ಅಗತ್ಯವಿದೆ ಎಂಬ ದೃಢನಂಬಿಕೆಗೆ ಅವರು ಬಂದರು.

ಪೋಲಿಷ್ ಜನರು ಏನು ಪ್ರತಿಜ್ಞೆ ಮಾಡಿದರು?

ಪೋಲಿಷ್ ಜನರು ದೇವರು, ಶಿಲುಬೆ ಮತ್ತು ಸುವಾರ್ತೆಗೆ ನಿಷ್ಠರಾಗಿರುವುದಾಗಿ; ಮಾನವ ಜೀವವನ್ನು ರಕ್ಷಿಸುವುದಾಗಿ; ವಿವಾಹ ಮತ್ತು ಕುಟುಂಬದ ಸ್ಥಿರತೆಯನ್ನು ಕಾಪಾಡುವುದಾಗಿ; ಹಾಗೂ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ನೀಡುವುದಾಗಿ ಪ್ರತಿಜ್ಞೆ ಮಾಡಿದರು.

ಅವರು ಮದ್ಯಪಾನಾಸಕ್ತಿ, ಅಜಾಗರೂಕತೆ ಮತ್ತು ಅಪವ್ಯಯದ ವಿರುದ್ಧ ಹೋರಾಡುವುದಕ್ಕೂ, ಪ್ರಾಮಾಣಿಕ ಪರಿಶ್ರಮ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುವುದಕ್ಕೂ ಬದ್ಧರಾದರು.

“ದ್ವೇಷ, ಹಿಂಸೆ ಮತ್ತು ಶೋಷಣೆ”ಗಳಿಂದ ಮುಕ್ತವಾದ ಪೋಲೆಂಡ್‌ ನಿರ್ಮಾಣದ ಆಶಯವೂ ಈ ಪ್ರತಿಜ್ಞೆಗಳಲ್ಲಿ ವ್ಯಕ್ತವಾಗಿತ್ತು. ಅಲ್ಲಿ ಪರಿಶ್ರಮದ ಫಲವನ್ನು ಎಲ್ಲರೂ ಹಂಚಿಕೊಳ್ಳಬೇಕು; ಯಾರೂ “ಹಸಿದವರಾಗಲಿ, ನಿರಾಶ್ರಿತರಾಗಲಿ ಅಥವಾ ಕಣ್ಣೀರಿಡುವವರಾಗಲಿ” ಇರಬಾರದು ಎಂಬ ಆಶಯವನ್ನೂ ಅವು ಒಳಗೊಂಡಿದ್ದವು.

ಎಪ್ಪತ್ತು ವರ್ಷಗಳ ಬಳಿಕ ಜಗದ್ಗುರು XIVನೇ ಲಿಯೋರವರು ಈ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದರು. ಸ್ವಾತಂತ್ರ್ಯವನ್ನು ಕಸಿದುಕೊಂಡು ಬಂಧನದಲ್ಲಿದ್ದಾಗ ಪ್ರಧಾನ ಧರ್ಮಾಧ್ಯಕ್ಷರು ರೂಪಿಸಿದ ಈ ಕಾರ್ಯಕ್ರಮವು ನ್ಯಾಯ ಮತ್ತು ಸಹೋದರತ್ವದ ನಿರ್ಮಾಣಕ್ಕೆ ನಿರಂತರವಾಗಿ ಸ್ಫೂರ್ತಿ ನೀಡಬೇಕು ಎಂದು ಜಗದ್ಗುರುಗಳು ಒತ್ತಿಹೇಳಿದರು.

26 ಆಗಸ್ಟ್ 2026, 17:38