ಯುವಜನತೆಯ ಜೂಬಿಲಿ: ಜಗತ್ತಿನಲ್ಲಿ ಶಾಂತಿ ನಿರ್ಮಿಸುವತ್ತ ಒಂದು ಹೆಜ್ಜೆ
ಕೀಲ್ಸ್ ಗುಸ್ಸಿ
ಪ್ರಭಾವಿಗಳ ಜೂಬಿಲಿ ಮತ್ತು ಯುವಜನತೆಯ ಜೂಬಿಲಿಯು ಭರವಸೆಯ ಜೂಬಿಲಿ ವರ್ಷದ ಕಾರ್ಯಕ್ರಮಗಳ ಕಾರ್ಯಸೂಚಿಯಲ್ಲಿ ಮುಂದಿನದು. ಜುಲೈ 28 ರಿಂದ ಆಗಸ್ಟ್ 3 ರವರೆಗೆ ನಡೆಯುವ ಕಾರ್ಯಕ್ರಮಗಳಿಗೆ ಮುಂಚಿತವಾಗಿ, ಸುವಾರ್ತಾಬೋಧನೆಗಾಗಿ ಡಿಕ್ಯಾಸ್ಟರಿಯ ಪ್ರೊ-ಪ್ರಿಫೆಕ್ಟ್ ಮಹಾಧರ್ಮಾಧ್ಯಕ್ಷರಾದ ರಿನೋ ಫಿಸಿಚೆಲ್ಲಾರವರು, ಈ ಜೂಬಿಲಿಯನ್ನು ರೂಪಿಸುವ ಬಹುಸಾಂಸ್ಕೃತಿಕ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಎತ್ತಿ ತೋರಿಸಿದರು.
ಬಹುಶಃ ವರ್ಷದ ಅತ್ಯಂತ ನಿರೀಕ್ಷಿತ ಕ್ಷಣ ಎಂದು ವಿವರಿಸಿದ ಮಹಾಧರ್ಮಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಯುವಕರು ಶಾಶ್ವತ ನಗರಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.
ವಾರವಿಡೀ ಸುಮಾರು 146 ದೇಶಗಳನ್ನು ಪ್ರತಿನಿಧಿಸಲಾಗುವುದು, ಅದರಲ್ಲಿ 78% ಯುರೋಪಿನ ದೇಶಗಳಿಂದ ಬರುತ್ತವೆ. ಉಳಿದ 22% ಜನರು ಇರಾಕ್, ದಕ್ಷಿಣ ಸುಡಾನ್ ಮತ್ತು ಲೆಬನಾನ್‌ನಂತಹ ಸಂಘರ್ಷ ಎದುರಿಸುತ್ತಿರುವ ದೇಶಗಳ ಕೆಲವು ಯುವಜನತೆಯು ಸೇರಿದಂತೆ ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ.
ಮೂಲಭೂತವಾಗಿ, ಈ ಆಚರಣೆಯ ಕ್ಷಣ, ಈ ಸಂತೋಷದ ಕ್ಷಣ, ಪ್ರಪಂಚದಾದ್ಯಂತದ ಎಲ್ಲಾ ಯುವಜನತೆಯ ಅಪ್ಪುಗೆಯನ್ನು ಅವರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಇದು ನಿಜವಾದ ಶಾಂತಿಯ ಕ್ಷಣವನ್ನು ಮತ್ತು ಜಗತ್ತಿನಲ್ಲಿ ಶಾಂತಿಯನ್ನು ನಿರ್ಮಿಸುವತ್ತ ಒಂದು ಹೆಜ್ಜೆಯನ್ನು ಸಂಕೇತಿಸುವ ಒಂದು ಸೂಚಕವಾಗಿದೆ ಎಂದು ಮಹಾಧರ್ಮಾಧ್ಯಕ್ಷರಾದ ಫಿಸಿಚೆಲ್ಲಾರವರು ವಿವರಿಸಿದರು.
ವಿಶ್ವಾಸ, ವಿನೋದ, ಸ್ನೇಹದ ತೀವ್ರವಾದ ವಾರ.
ವಾರಪೂರ್ತಿ ನಡೆಯುವ ಜೂಬಿಲಿಯು"ನಗರದೊಂದಿಗೆ ಸಂವಾದ" ದೊಂದಿಗೆ ಪ್ರಾರಂಭವಾಗುತ್ತದೆ. ಮಂಗಳವಾರ, ಬುಧವಾರ ಮತ್ತು ಗುರುವಾರ ರೋಮ್‌ನ ಸುತ್ತಮುತ್ತಲಿನ ವಿವಿಧ ಚೌಕಗಳಲ್ಲಿ ನಡೆಯುವ 70 ಕಾರ್ಯಕ್ರಮಗಳಾಗಿವೆ. ಈ ಕಾರ್ಯಕ್ರಮಗಳನ್ನು ವಿವಿಧ ಸಂಘಗಳು, ಗುಂಪುಗಳು ಮತ್ತು ಧರ್ಮಾಧ್ಯಕ್ಷರುಗಳ ಸಮ್ಮೇಳನಗಳು ಆಯೋಜಿಸುತ್ತವೆ.
ಉದಾಹರಣೆಗೆ, ಡಕ್ ಇನ್ ಆಲ್ಟಮ್ ನಾಟಕ ತಂಡವು ನಗರದ ಬೀದಿಗಳಲ್ಲಿ ಸಂಚರಿಸಿ ಲಿಸಿಯುಕ್ಸ್ ನ ಸಂತ ಥೆರೇಸ್ ರವರ ಜೀವನದ ಕುರಿತು ನಾಟಕೀಯ ಕೃತಿಯನ್ನು ಪ್ರದರ್ಶಿಸುತ್ತದೆ. ಅಂತರರಾಷ್ಟ್ರೀಯ ಕಾರಿತಾಸ್, ಕಾರಿತಾಸ್‌ನ ಕಾರ್ಯಾಚರಣೆಯಲ್ಲಿ ತೊಡಗಿರುವ ಯುವಜನರ ವೀಡಿಯೊಗಳೊಂದಿಗೆ ಸಂವಾದಾತ್ಮಕ ನಕ್ಷೆಯೊಂದಿಗೆ ಸ್ಟ್ಯಾಂಡ್ ಅನ್ನು ಹೊಂದಿರುತ್ತದೆ. ಮಾತೆ ಮೇರಿಯ ಬಿಸಿಯೂಟ ಸಹ ಹಾಜರಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಮಕ್ಕಳ ಬಡತನದ ಚಕ್ರವನ್ನು ಮುರಿಯಲು ಅವರು ಮಾಡುವ ಕೆಲಸದ ಬಗ್ಗೆ ಚರ್ಚಿಸುತ್ತದೆ.
ಸ್ಥಳೀಯ ಸಮಯ ಸಂಜೆ 7ಗಂಟೆಗೆ ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿಅಧಿಕೃತ ಸ್ವಾಗತ ದಿವ್ಯಬಲಿಪೂಜೆಯೊಂದಿಗೆ ದಿನದ ಅಂತ್ಯ ಕೊನೊಗೊಳ್ಳಲಿದೆ.