ಭಾರತದಲ್ಲಿ ಮಹಾಧರ್ಮಾಧ್ಯಕ್ಷರಾದ ಗಲ್ಲಾಘರ್: ಪೂಜ್ಯ ಮಾರ್ ಇವಾನಿಯೋಸ್ ರವರು ನಮ್ಮನ್ನು ಪವಿತ್ರತೆಗೆ ಕರೆಯುತ್ತಾರೆ
ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಪೂಜ್ಯ ಮಹಾಧರ್ಮಾಧ್ಯಕ್ಷರಾದ ಮಾರ್ ಇವಾನಿಯೋಸ್ ರವರು ತಮ್ಮ ಸಹೋದರರನ್ನು ಕ್ರಿಸ್ತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು, ದೈನಂದಿನ ಜೀವನದಲ್ಲಿ ಪವಿತ್ರತೆಯನ್ನು ಹುಡುಕಲು ಮತ್ತು ಇತರರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಿದರು.
ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಲ್ಲಾಘರ್ ರವರು ಮಂಗಳವಾರ ತಮ್ಮ ವಾರದ ಭಾರತ ಪ್ರವಾಸದ ಸಂದರ್ಭದಲ್ಲಿ ವಾರ್ಷಿಕ ಮಾರ್ ಇವಾನಿಯೋಸ್ ರವರ ಆಚರಣೆಯ ದಿವ್ಯಬಲಿಪೂಜೆಯ ಸಂದರ್ಭದಲ್ಲಿ ಈ ವಿಷಯವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಡಿನಲ್ ಬಸೆಲಿಯೋಸ್ ಕ್ಲೀಮಿಸ್ ರವರು, ಮಲಂಕರ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರು - ಕ್ಯಾಥೋಲಿಕೋಸ್ ಮತ್ತು ತಿರುವನಂತಪುರದ ಪ್ರಧಾನ ಮಹಾಧರ್ಮಾಧ್ಯಕ್ಷರು ಸೇರಿದಂತೆ ಧರ್ಮಸಭೆಯ ನಾಯಕರ ನೇತೃತ್ವದಲ್ಲಿ ಪ್ರಾರ್ಥನೆಗಳು, ದೈವಾರಾಧನಾ ವಿಧಿಗಳು ಮತ್ತು ಮೇಣದಬತ್ತಿಯ ಪ್ರಾರ್ಥನಾ ಜಾಗರಣೆಗಳು ನಡೆಯುತ್ತವೆ.
ಪೂಜ್ಯ ಮಹಾಧರ್ಮಾಧ್ಯಕ್ಷರಾದ ಮಾರ್ ಇವಾನಿಯೋಸ್ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿದ್ದಾರೆ
ಪೂಜ್ಯ ಮಹಾಧರ್ಮಾಧ್ಯಕ್ಷರಾದ ಗಲ್ಲಾಘರ್ ರವರು ತಮ್ಮ ಪ್ರಬೋಧನೆಯಲ್ಲಿ, ತಮ್ಮ ಮುಂದೆ ನಿಂತು, ನಿಮ್ಮ ಆತ್ಮೀಯ ಶುಭಾಶಯಗಳನ್ನು ಕಳುಹಿಸಲು ನನ್ನನ್ನು ಕೇಳಿಕೊಂಡರು. ಅವರ ಪವಿತ್ರ ವಿಶ್ವಗುರುಗಳ ಲಿಯೋರವರ ಶುಭಾಶಯಗಳು ಮತ್ತು ಪ್ರೇಷಿತ ಆಶೀರ್ವಾದವನ್ನು ಪ್ರತಿಯೊಬ್ಬರಿಗೂ ತಿಳಿಸಿದ್ದು ಆಳವಾದ ಕೃತಜ್ಞತೆಯಾಗಿದೆ ಎಂದು ಹೇಳಿದರು.
\ಪ್ರೇಷಿತ ಥೋಮಸ್ ರವರ ಕಾಲದಿಂದಲೂ ವಿಶ್ವಾಸದ ಉತ್ಸಾಹವನ್ನು ಹೆಮ್ಮೆಯಿಂದ ಕಾಪಾಡುವ ತಿರುವನಂತಪುರದಲ್ಲಿ ಈ ಪವಿತ್ರ ಸಭೆಗೆ ಸ್ವಾಗತಿಸಲಾಗುತ್ತಿರುವುದು ನಿಜಕ್ಕೂ ಗೌರವವಾಗಿದೆ, ಎಂದು ಮಹಾಧರ್ಮಾಧ್ಯಕ್ಷರಾದ ಗಲ್ಲಾಘರ್ ರವರು ಹೇಳಿದರು. ಪೂಜ್ಯ ಮಹಾಧರ್ಮಾಧ್ಯಕ್ಷರಾದ ಮಾರ್ ಇವಾನಿಯೋಸ್ ರವರ ಹಬ್ಬದಂದು ಈ ಪವಿತ್ರ ದಿವ್ಯಬಲಿಪೂಜೆಯನ್ನು ಅರ್ಪಿಸಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಗೌರವ.