ಪೋಪ್: ದೀನತೆ ಹಾಗೂ ಪ್ರಾರ್ಥನೆಯಲ್ಲಿ ಧರ್ಮಾಧ್ಯಕ್ಷರು ಕ್ರಿಸ್ತರನ್ನು ಅನುಕರಿಸಬೇಕು
ಕಳೆದ ವರ್ಷ ನೇಮಕಗೊಂಡು ಅಭ್ಯಂಗಿತರಾಗಿರುವ ಧರ್ಮಧ್ಯಕ್ಷರುಗಳನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು 14ನೇ ಲಿಯೋ ಅವರು ಧರ್ಮಧ್ಯಕ್ಷರುಗಳು ಜನರ ವಿಶ್ವಾಸದ ಸೇವಕರಾಗಿರಬೇಕು ಹಾಗೂ ಧರ್ಮಸಭೆಯು ಕಳುಹಿಸುವ ಸದಾ ಎಚ್ಚರದಿಂದಿರುವ ಕುರಿಗಾಹಿಗಳಾಗಬೇಕು ಎಂದು ಹೇಳಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಕಳೆದ ವರ್ಷ ನೇಮಕಗೊಂಡು ಅಭ್ಯಂಗಿತರಾಗಿರುವ ಧರ್ಮಧ್ಯಕ್ಷರುಗಳನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು 14ನೇ ಲಿಯೋ ಅವರು ಧರ್ಮಧ್ಯಕ್ಷರುಗಳು ಜನರ ವಿಶ್ವಾಸದ ಸೇವಕರಾಗಿರಬೇಕು ಹಾಗೂ ಧರ್ಮಸಭೆಯು ಕಳುಹಿಸುವ ಸದಾ ಎಚ್ಚರದಿಂದಿರುವ ಕುರಿಗಾಹಿಗಳಾಗಬೇಕು ಎಂದು ಹೇಳಿದ್ದಾರೆ.
ಕಳೆದು ವರ್ಷ ನೇಮಕಗೊಂಡು ಅಭ್ಯರ್ಥಿಯಾಗಿರುವ ಹಲವಾರು ಧರ್ಮಧ್ಯಕ್ಷರುಗಳು ಇಂದು ರೋಮ್ ನಗರದಲ್ಲಿ ಮುಂದುವರೆದ ತರಬೇತಿ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದು ತದನಂತರ ವಿಶ್ವಗುರು ಪೋಪ್ ಅವರನ್ನು ಭೇಟಿ ಮಾಡಿದ್ದಾರೆ.
ಇವರನ್ನು ಉದ್ದೇಶಿಸಿ ಮಾತನಾಡಿರುವ ವಿಶ್ವಗುರುಗಳು ನೀವು ಪಡೆದುಕೊಂಡಿರುವ ಹುಡುಗರೆಯು ನಿಮ್ಮದಲ್ಲ ಬದಲಿಗೆ ಶುಭ ಸಂದೇಶವನ್ನು ಸಾರುವುದು ಅದರ ಧ್ಯೇಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಧರ್ಮಧ್ಯಕ್ಷರ ಸೇವೆಯ ಕುರಿತು ಮುಂದುವರೆದು ಮಾತನಾಡಿದ ಅವರು, ಧರ್ಮಧ್ಯಕ್ಷರು ನಾಯಕರಲ್ಲ ಬದಲಿಗೆ ಜನತೆಯ ವಿಶ್ವಾಸದ ಸೇವಕರು ಎಂದು ಹೇಳಿದರು.
11 ಸೆಪ್ಟೆಂಬರ್ 2025, 17:43