ಜ್ಯೂಬಿಲಿಯ ಧರ್ಮೋಪದೇಶಕರು 115 ದೇಶಗಳ ಯಾತ್ರಿಕರನ್ನು ಒಟ್ಟುಗೂಡಿಸುತ್ತಾರೆ
ವ್ಯಾಟಿಕನ್ ಸುದ್ದಿ
ಸೆಪ್ಟೆಂಬರ್ 26ರಿಂದ 28ರವರೆಗೆ ಧರ್ಮೋಪದೇಶಕರ ಜ್ಯೂಬಿಲಿಯ ದಿನವನ್ನು ಆಚರಿಸಲು ವಿಶ್ವದಾದ್ಯಂತದ ಧರ್ಮೋಪದೇಶಕರನ್ನು ರೋಮ್‌ನಲ್ಲಿ ಒಟ್ಟುಗೂಡುತ್ತಿದ್ದಾರೆ. ಇಟಲಿ, ಸ್ಪೇನ್, ಪೋರ್ಚುಗಲ್, ಫ್ರಾನ್ಸ್, ಪೋಲೆಂಡ್, ಉಕ್ರೇನ್, ಯುನೈಟೆಡ್ ಸ್ಟೇಟ್ಸ್, ಅರ್ಜೆಂಟೀನಾ, ಬ್ರೆಜಿಲ್, ಪರಾಗ್ವೆ, ಮೆಕ್ಸಿಕೊ, ಪೆರು, ಕೊಲಂಬಿಯಾ, ಫಿಲಿಪೈನ್ಸ್, ಭಾರತ ಮತ್ತು ಆಸ್ಟ್ರೇಲಿಯಾದಾದ್ಯಂತ 115 ದೇಶಗಳಿಂದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯಾತ್ರಿಕರು ರೋಮ್‌ಗೆ ಆಗಮಿಸುತ್ತಿದ್ದಾರೆ. ಜ್ಯೂಬಿಲಿ ಕಾರ್ಯಕ್ರಮಗಳು ಪ್ರತಿದಿನ ಧರ್ಮೋಪದೇಶಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ, ಎಲ್ಲಾ ವಯಸ್ಸಿನ ಮತ್ತು ಜೀವನದ ಹಂತಗಳ ಜನರಿಗೆ ವಿಶ್ವಾಸವನ್ನು ಬೋಧಿಸುವವರಿಗೆ ಸಮರ್ಪಿತವಾಗಿದೆ. ಅವರು ಧರ್ಮಕ್ಷೇತ್ರದ ಮತ್ತು ರಾಷ್ಟ್ರೀಯ ಧರ್ಮೋಪದೇಶಕರ ಕಚೇರಿಗಳು ಮತ್ತು ಅವರ ತಾಯ್ನಾಡಿನ ಧರ್ಮಾಧ್ಯಕ್ಷೀಯ ಸಮ್ಮೇಳನಗಳನ್ನು ಪ್ರತಿನಿಧಿಸುತ್ತಾರೆ.
ಶುಕ್ರವಾರ ಬೆಳಿಗ್ಗೆ ಧರ್ಮೋಪದೇಶಕರು ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರಕ್ಕೆ ತಮ್ಮ ತೀರ್ಥಯಾತ್ರೆಗಳನ್ನು ಪ್ರಾರಂಭಿಸುವುದರೊಂದಿಗೆ ಜ್ಯೂಬಿಲಿಯ ದಿನದ ಆಚರಣೆಯನ್ನು ಪ್ರಾರಂಭಿಸಿದರು. ದಿನದ ನಂತರ ಸಂಜೆ ಮಹಾದೇವಾಲಯದ ಒಳಗೆ ಸುವಾರ್ತಾಬೋಧನೆಗಾಗಿ ಡಿಕಾಸ್ಟರಿ ಪ್ರೊ-ಪ್ರಿಫೆಕ್ಟ್ ಮಹಾಧರ್ಮಾಧ್ಯಕ್ಷರಾದ ರಿನೋ ಫಿಸಿಚೆಲ್ಲಾರವರ ಅಧ್ಯಕ್ಷತೆಯಲ್ಲಿ ಪ್ರಾರ್ಥನಾ ಜಾಗರಣೆ ನಡೆಯಲಿದೆ. ಎಮ್ಮೌಸ್‌ಗೆ ಹೋಗುವ ದಾರಿಯಲ್ಲಿ ಶಿಲುಬೆ-ಹಾದಿಯ ಮಾದರಿಯನ್ನು ಕೇಂದ್ರೀಕರಿಸುವ (ಲೂಕ 24:13-33a) ಪ್ರಾರ್ಥನೆಯ ಎರಡನೇ ಭಾಗದಲ್ಲಿ, ಇಟಲಿ, ಮೊಜಾಂಬಿಕ್ ಮತ್ತು ಮೆಕ್ಸಿಕೋದ ಮೂವರು ಧರ್ಮೋಪದೇಶಕರು ತಮ್ಮ ಸ್ಥಳೀಯ ಸಮುದಾಯಗಳಲ್ಲಿ ತಮ್ಮ ವೈಯಕ್ತಿಕ ಸೇವೆಯ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
ಸೆಪ್ಟೆಂಬರ್ 27ರ ಶನಿವಾರದಂದು, ಧರ್ಮೋಪದೇಶಕರು ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿ ವಿಶ್ವಗುರು XIV ಲಿಯೋರವರೊಂದಿಗೆ ಜ್ಯೂಬಿಲಿಯ ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ, ಅವರು ಅವರನ್ನು ಸ್ವಾಗತಿಸಲಿದ್ದಾರೆ. ಮಧ್ಯಾಹ್ನ 4:00 ಗಂಟೆಗೆ ಧರ್ಮೋಪದೇಶಕರು ಮಧ್ಯ ರೋಮ್‌ನ ವಿವಿಧ ಧರ್ಮಸಭೆಗಳಲ್ಲಿ ತಮ್ಮ ಧರ್ಮಾಧ್ಯಕ್ಷರುಳೊಂದಿಗೆ ಭಾಷಾ ಗುಂಪುಗಳಲ್ಲಿ ಧರ್ಮೋಪದೇಶಕರುಗಾಗಿ ಒಟ್ಟುಗೂಡುತ್ತಾರೆ. ಇವು ಇಟಾಲಿಯದ, ಇಂಗ್ಲಿಷ್, ಪೋರ್ಚುಗೀಸ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಪೋಲಿಷ್ ಭಾಷೆಗಳಲ್ಲಿ ನಡೆಯಲಿವೆ.
ಸೆಪ್ಟೆಂಬರ್ 28ರ ಭಾನುವಾರದಂದು ಧರ್ಮೋಪದೇಶಕರು ಸಂತ ಪೇತ್ರರ ಮಹಾದೇವಾಲಯದಲ್ಲಿ ಬೆಳಿಗ್ಗೆ 10:00 ಗಂಟೆಗೆ ವಿಶ್ವಗುರು XIV ಲಿಯೋರವರ ಅಧ್ಯಕ್ಷತೆಯಲ್ಲಿ ಸಾಮೂಹಿಕ ದಿವ್ಯ-ಬಲಿಪೂಜೆಯೊಂದಿಗೆ ಜ್ಯೂಬಿಲಿಯ ಆಚರಣೆಯು ಮುಕ್ತಾಯಗೊಳ್ಳಲಿದೆ, ಈ ಸಮಯದಲ್ಲಿ ಅವರು 39 ಹೊಸ ಧರ್ಮೋಪದೇಶಕರನ್ನು ನಿಯೋಜಿಸಲಿದ್ದಾರೆ. ಇಟಲಿ, ಸ್ಪೇನ್, ಇಂಗ್ಲೆಂಡ್, ಪೋರ್ಚುಗಲ್, ಬ್ರೆಜಿಲ್, ಮೆಕ್ಸಿಕೊ, ಭಾರತ, ದಕ್ಷಿಣ ಕೊರಿಯಾ, ಪೂರ್ವ ಟಿಮೋರ್, ಯುನೈಟೆಡ್ ಅರಬ್ ಎಮಿರೇಟ್ಸ್, ಫಿಲಿಪೈನ್ಸ್, ಯುನೈಟೆಡ್ ಸ್ಟೇಟ್ಸ್, ಮೊಜಾಂಬಿಕ್, ಬ್ರೆಜಿಲ್, ಪೆರು ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಂದ ಬಂದಿರುವ ಧರ್ಮೋಪದೇಶಕರ ಸಾಮಾನ್ಯ ಸೇವಾಕಾರ್ಯದ ಅಭ್ಯರ್ಥಿಗಳು, ಅವರ ವಿಶೇಷ ದೈವಕರೆಯ ಸಂಕೇತವಾಗಿ ವಿಶ್ವಗುರುವಿನಿಂದ ಶಿಲುಬೆಯನ್ನು ಸ್ವೀಕರಿಸಲ್ಪಡುತ್ತಾರೆ.