ಮಾನವ ಭ್ರಾತೃತ್ವದ ಕುರಿತಾದ ವಿಶ್ವ ಸಭೆ
ರಾಬರ್ಟೊ ಪಗ್ಲಿಯಾಲೊಂಗಾ
ಪಿಯಾಝಾ ಸ್ಯಾನ್ ಪಿಯೆಟ್ರೋ ನಿಯತಕಾಲಿಕೆಯ ನಿರ್ದೇಶಕ ಧರ್ಮಗುರು ಎಂಜೊ ಫಾರ್ಚುನಾಟೊರವರು ಸಂಯೋಜಿಸಿದ "ನ್ಯೂಸ್ ಜಿ20" ದುಂಡುಮೇಜಿಗಾಗಿ ಸಂವಹನ ಮತ್ತು ಮಾಹಿತಿ ಪ್ರಪಂಚದ ಪ್ರತಿನಿಧಿಗಳು - ಅಂತರರಾಷ್ಟ್ರೀಯ ಮಾಧ್ಯಮ ಜಾಲಗಳ ನಿರ್ದೇಶಕರು ಮತ್ತು ಸಿಇಒಗಳು - ರೋಮ್‌ನಲ್ಲಿ ಈ ಸಭೆಯಲ್ಲಿ ಒಟ್ಟುಗೂಡಿದರು. ಈ ಕಾರ್ಯಕ್ರಮವು ಸೆಪ್ಟೆಂಬರ್ 12 ಶುಕ್ರವಾರದಂದು ರೋಮ್‌ನ ಕ್ಯಾಪಿಟೋಲಿನ್ ಬೆಟ್ಟದಲ್ಲಿರುವ ಸಲಾ ಡೆಲ್ಲಾ ಪ್ರೊಟೊಮೊಟೆಕಾದಲ್ಲಿ ನಡೆಯಿತು.
ಭಾಗವಹಿಸುವವರು ಯುದ್ಧ ಮತ್ತು ಸಂಘರ್ಷದ ಸಮಯದಲ್ಲಿ ಪಾರದರ್ಶಕತೆ ಮತ್ತು ಮಾಹಿತಿಯ ಸ್ವಾತಂತ್ರ್ಯ ಸೇರಿದಂತೆ ಹಲವಾರು ವಿಷಯಗಳನ್ನು ಉದ್ದೇಶಿಸಿ ಮಾತನಾಡಿದರು: ವಿಶ್ವಗುರು XIV ಲಿಯೋರವರು ಹೇಳಿದಂತೆ "ಪದಗಳನ್ನು ನಿಶ್ಯಸ್ತ್ರಗೊಳಿಸಲು ಮತ್ತು ಜಗತ್ತನ್ನು ನಿಶ್ಯಸ್ತ್ರಗೊಳಿಸಲು" ಸತ್ಯಗಳ ನೈಜತನವು ಅತ್ಯಗತ್ಯ ಅಂಶವಾಗಿದೆ, ಇದರಿಂದ ಕಥೆ ಹೇಳುವಿಕೆ ಮತ್ತು ನಿರೂಪಣೆ ಮತ್ತೊಮ್ಮೆ ಶಾಂತಿ, ಸಂವಾದ ಮತ್ತು ಭ್ರಾತೃತ್ವವನ್ನು ಪೂರೈಸಬಹುದು. ಅನಿಯಂತ್ರಿತ ಸಾಮಾಜಿಕ ಮಾಧ್ಯಮ, ಅಲ್ಗಾರಿದಮ್‌ಗಳು, ಕ್ಲಿಕ್‌ಬೈಟ್ ಘೋಷಣೆಗಳು ಮತ್ತು ಆನ್‌ಲೈನ್ ದ್ವೇಷಿಗಳಿಂದ ದ್ವೇಷ ಮತ್ತು ಹಿಂಸೆಯ ಅತಿರೇಕದ ಅಭಿವ್ಯಕ್ತಿಗಳು ಪ್ರಾಬಲ್ಯ ಹೊಂದಿರುವ ಈ ಯುಗದಲ್ಲಿ, ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಸಾಮರ್ಥ್ಯ, ಆಳವಾದ ವರದಿ ಮಾಡುವಿಕೆ ಮತ್ತು ವಿಶ್ವಾಸಾರ್ಹತೆಯ ಮೌಲ್ಯವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಅವರು ಚರ್ಚಿಸಿದರು.
ನಮ್ಮ ಕಾಲದ ಮೂರು ಸ್ತಂಭಗಳು: ಸತ್ಯ, ಸ್ವಾತಂತ್ರ್ಯ, ಘನತೆ
ಕಾರ್ಯಾಗಾರವನ್ನು ಉದ್ಘಾಟಿಸುತ್ತಾ, ಧರ್ಮಗುರು ಫಾರ್ಚುನಾಟೊರವರು ನಮ್ಮ ಕಾಲದಲ್ಲಿ ಇನ್ನು ಮುಂದೆ ಲಘುವಾಗಿ ಪರಿಗಣಿಸಲಾಗದ ಮೂರು "ಸ್ತಂಭಗಳನ್ನು" ವಿವರಿಸಿದರು: ಸತ್ಯ, ಸ್ವಾತಂತ್ರ್ಯ ಮತ್ತು ಘನತೆ. ಸತ್ಯವನ್ನು "ತುಂಬಾ ಹೆಚ್ಚಾಗಿ ಕುಶಲತೆಯಿಂದ ಮತ್ತು ಶೋಷಣೆಗೆ ಒಳಪಡಿಸಲಾಗುತ್ತಿದೆ" ಮತ್ತು ಸ್ವಾತಂತ್ರ್ಯವನ್ನು "ಗಾಯಗೊಳಿಸಲಾಗುತ್ತಿದೆ" ಎಂದು ಅವರು ಹೇಳಿದರು, ಏಕೆಂದರೆ ವಿಶ್ವದಾದ್ಯಂತದ ಅನೇಕ ದೇಶಗಳಲ್ಲಿ "ಪತ್ರಕರ್ತರನ್ನು ಮೌನಗೊಳಿಸಲಾಗುತ್ತದೆ, ಕಿರುಕುಳ ನೀಡಲಾಗುತ್ತಿದೆ ಅಥವಾ ಕೊಲ್ಲಲಾಗಿತ್ತಿದೆ". ಆದರೂ "ಪತ್ರಿಕಾ ಸ್ವಾತಂತ್ರ್ಯವು ನಾಗರಿಕರಿಗೆ ಖಾತರಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯಾಗಿರಬೇಕು." ಇಂದು, ಧರ್ಮಗುರು ಫಾರ್ಚುನಾಟೊರವರು ಮುಂದುವರಿಸುತ್ತಾ, ನಮಗೆ ಅನೇಕ 'ಗಣ್ಯರು' ಇದ್ದಾರೆ ಆದರೆ ಕಡಿಮೆ ಘನತೆ ಇದೆ: ಜನರು ದ್ವೇಷ ಮತ್ತು ಮಾನನಷ್ಟ ಅಭಿಯಾನಗಳಿಗೆ ಗುರಿಯಾಗುತ್ತಾರೆ, ಇದನ್ನು ಹೆಚ್ಚಾಗಿ ಕಂಪ್ಯೂಟರ್ ಪರದೆಯ ಹಿಂದೆ ಉದ್ದೇಶಪೂರ್ವಕವಾಗಿ ಆಯೋಜಿಸಲಾಗುತ್ತದೆ.
ಧ್ವನಿಯಿಲ್ಲದವರಿಗೆ ಧ್ವನಿ ನೀಡುವುದು
ಇತ್ತೀಚೆಗೆ ದುರ್ಬಲಗೊಂಡಿರುವ ಎಲ್ಲದರ ಬಗ್ಗೆ ಹಂಚಿಕೊಂಡ ಮಾತುಗಳು ಮತ್ತು ಸ್ವೀಕರಿಸಿದ ಸಂಗತಿಗಳ ಸಾಮಾನ್ಯ ನೆಲೆ ಅತ್ಯಗತ್ಯ ಮತ್ತು ಪ್ರಮುಖವಾಗಿದೆ: ಮಾತುಕತೆ ನಡೆಸುವ ಸಾಮರ್ಥ್ಯ, ರಾಜಿ ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಆದ್ದರಿಂದ ಶಾಂತಿಯನ್ನು ಪುನಃಸ್ಥಾಪಿಸುವುದು ಎಂದು ಲೆ ಮಾಂಡೆಯ ನಿರ್ದೇಶಕ ಜೆರೋಮ್ ಫೆನೊಗ್ಲಿಯೊರವರು ಪ್ರತಿಧ್ವನಿಸಿದರು. ಇದಕ್ಕೆ, ಕೀನ್ಯಾ ಮೂಲದ ನೇಷನ್ ಮೀಡಿಯಾ ಗ್ರೂಪ್‌ನ ನಿರ್ದೇಶಕ ಜೋ ಅಗೆಯೊರವರು, ಯುದ್ಧದ ಭೀಕರತೆಯಿಂದ ಪ್ರಭಾವಿತರಾದ ಲಕ್ಷಾಂತರ ಜನರಂತೆ, ಸಾಮಾನ್ಯವಾಗಿ ಕೇಳಿರದ ಮಾನವೀಯತೆಯ ಕಥೆಗಳನ್ನು ಹೇಳುವ ಮಹತ್ವವನ್ನು ಸೇರಿಸಿದರು.
“ಸೇವೆ" ಎಂಬ ಪದವನ್ನು ಕೇಂದ್ರಕ್ಕೆ ಮರಳಿ ತರುವುದು
ಆರ್‌ಎಐನ ಸಿಮೋನಾ ಆಗ್ನೆಸ್ ರವರು ಮತ್ತು ಯುರೋಪಿನ ಬ್ರಾಡ್‌ಕಾಸ್ಟಿಂಗ್ ಒಕ್ಕೂಟ (ಇಬಿಯು) ಮಂಡಳಿಯ ಸದಸ್ಯೆ ಸೇವೆಯ ಕಲ್ಪನೆಯ ಸುತ್ತ ಪತ್ರಿಕೋದ್ಯಮವನ್ನು ಇತ್ತೀಚಿನದಕ್ಕೆ ತರುವ ಅಗತ್ಯವನ್ನು ಒತ್ತಿ ಹೇಳಿದರು: ಆಗ ಮಾತ್ರ ನಾವು ವ್ಯಕ್ತಿಯ ಅನನ್ಯ ಮತ್ತು ಪುನರಾವರ್ತಿಸಲಾಗದ ಘನತೆಯನ್ನು ಗುರುತಿಸಬಹುದು. ಒಂದು ಸಮುದಾಯದ ಸೇವೆಯಲ್ಲಿರುವುದು ಎಂದರೆ ವಾಸ್ತವವನ್ನು ಸರಿಯಾಗಿ ಅರ್ಥೈಸಲು ಸಾಧನಗಳನ್ನು ಒದಗಿಸುವುದು. ವೈವಿಧ್ಯತೆಯ ಶ್ರೀಮಂತಿಕೆಯನ್ನು ಪ್ರತಿನಿಧಿಸುವುದು, ದುರ್ಬಲರನ್ನು ರಕ್ಷಿಸುವುದು. ಇದರರ್ಥ ನಾವು ಒಬ್ಬರನ್ನೊಬ್ಬರು ಗುರುತಿಸುವ ಮತ್ತು ಸ್ವೀಕರಿಸುವ ಭ್ರಾತೃತ್ವವನ್ನು ನಿರ್ಮಿಸುವುದು.
ಗ್ಯಾಂಬೆಟ್ಟಿ: ಮಾನವೀಯತೆಯಲ್ಲಿ ಬೆಳೆಯಲು ಭ್ರಾತೃತ್ವ ನಿರ್ಮಾಣ
ಅಂತಿಮವಾಗಿ, ಸಂತ ಪೇತ್ರರ ಮಹಾದೇವಾಲಯದ ಮಹಾಯಾಜಕ ಕಾರ್ಡಿನಲ್ ಮೌರೊ ಗ್ಯಾಂಬೆಟ್ಟಿರವರು ಪ್ರಬಲವಾದ ಜ್ಞಾಪನೆಯೊಂದಿಗೆ ಮುಕ್ತಾಯಗೊಳಿಸಿದರು: “ನಾವು ಭ್ರಾತೃತ್ವವನ್ನು ನಿರ್ಮಿಸುತ್ತೇವೆ ಮತ್ತು ಪರಸ್ಪರ ಸಹೋದರ ಸಹೋದರಿಯರಾಗಿ ನಮ್ಮನ್ನು ಗುರುತಿಸುತ್ತೇವೆ, ನಾವು ಮಾನವೀಯತೆಯಲ್ಲಿ ಬೆಳೆಯುತ್ತೇವೆ ಮತ್ತು ಪ್ರತಿಯಾಗಿ ಜಗತ್ತಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯು ಜಗತ್ತಿಗೆ ಉಡುಗೊರೆ ಎಂದು ತಿಳಿದುಕೊಳ್ಳುತ್ತೇವೆ.