ಹುಡುಕಿ

Funerali S.E. Mons. Novatus Rugambwa Funerali S.E. Mons. Novatus Rugambwa  (@VATICAN MEDIA)

ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯಲ್ಲಿ ಮಹಾಧರ್ಮಾಧ್ಯಕ್ಷರಾದ ರುಗಂಬವಾರವರಿಗೆ ಕಾರ್ಡಿನಲ್ ಪರೋಲಿನ್ ರವರಿಗೆ ಗೌರವ ಸಲ್ಲಿಸಿದರು

ಪವಿತ್ರ ಪೀಠಾಧಿಕಾರಿಯ ರಾಜತಾಂತ್ರಿಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಹಾಧರ್ಮಾಧ್ಯಕ್ಷರಾದ ನೊವಾಟಸ್ ರುಗಾಂಬ್ವಾರವರ ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯ ಅಧ್ಯಕ್ಷತೆಯನ್ನು ಕಾರ್ಡಿನಲ್ ವಿದೇಶಾಂಗ ಕಾರ್ಯದರ್ಶಿ ಪಿಯೆಟ್ರೊ ಪರೋಲಿನ್ ರವರು ವಹಿಸುತ್ತಾರೆ.

ಸಿಸ್ಟರ್ ಕ್ರಿಸ್ಟೀನ್ ಮಾಸಿವೊ ಸಿಪಿಎಸ್

ಸಂತ ಪೇತ್ರರ ಮಹಾದೇವಾಲಯದಲ್ಲಿ ನಡೆದ ಸಾಂಭ್ರಮಿಕ ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯಲ್ಲಿ, ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು, ಮಹಾಧರ್ಮಾಧ್ಯಕ್ಷರಾದ ನೊವಾಟಸ್ ರುಗಾಂಬ್ವಾರವರಿಗೆ ಗೌರವ ಸಲ್ಲಿಸಿದರು. ಇವರ ದಶಕಗಳ ರಾಜತಾಂತ್ರಿಕ ಸೇವೆ ಮತ್ತು ಸಂತಾಪದ ಮೂಲಕ ವಿಶ್ವಾಸದ ಅಂತಿಮ ಸಾಕ್ಷಿಯನ್ನು ನೆನಪಿಸಿಕೊಂಡರು.

ದೀರ್ಘಕಾಲದ ಅನಾರೋಗ್ಯದ ನಂತರ ಮಹಾಧರ್ಮಾಧ್ಯಕ್ಷರಾದ ರುಗಾಂಬ್ವಾರವರು ಸೆಪ್ಟೆಂಬರ್ 16 ರಂದು ನಿಧನರಾದರು.

1957ರಲ್ಲಿ ತಂಜಾನಿಯಾದ ಬುಕೊಬಾದಲ್ಲಿ ಜನಿಸಿದ ಇವರು 1986ರಲ್ಲಿ ಯಾಜಕರಾಗಿ ದೀಕ್ಷೆ ಸ್ವೀಕರಿಸಿದರು ಮತ್ತು 1991 ರಿಂದ ಪವಿತ್ರ ಪೀಠಾಧಿಕಾರಿಯ ರಾಜತಾಂತ್ರಿಕ ಸೇವೆಯಲ್ಲಿ ಸೇವೆ ಸಲ್ಲಿಸಿದರು. ಅವರ ದೈವಕರೆಯ ಅಭ್ಯಂಗಿತ ಜೀವನದ ಸೇವೆಯು ಲತೀನ್ ಅಮೆರಿಕ, ಆಫ್ರಿಕಾ, ಏಷ್ಯಾ ಮತ್ತು ಓಷಿಯಾನಿಯಾದಲ್ಲಿನ ನಿಯೋಜನೆಗಳನ್ನು ಒಳಗೊಂಡಂತೆ ನಾಲ್ಕು ಖಂಡಗಳಲ್ಲಿ ವ್ಯಾಪಿಸಿತು, ಅಂಗೋಲಾ, ಸಾವೊ ಟೋಮ್ ಮತ್ತು ಪ್ರಿನ್ಸಿಪೆ, ಹೊಂಡುರಾಸ್ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಪ್ರೇಷಿತ ರಾಯಭಾರಿಯಾಗಿ ಮತ್ತು ಪೆಸಿಫಿಕ್ ದ್ವೀಪಗಳಿಗೆ ಪ್ರೇಷಿತ ಪ್ರತಿನಿಧಿಯಾಗಿ ಅವರ ಅವರ ನಿಸ್ವಾರ್ಥ ಸೇವೆಯ ಪಾತ್ರವು ಉತ್ತುಂಗೇರಿತು.

ಸಂತ ಪೇತ್ರರ ಮಹಾದೇವಾಲಯದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಕಾರ್ಡಿನಲ್ ಪರೋಲಿನ್, ಮಹಾಧರ್ಮಾಧ್ಯಕ್ಷರಾದ ರುಗಾಂಬ್ವಾರವರನ್ನು ಆಳವಾದ ಆಂತರಿಕ ಜೀವನ, ಪಾಲನಾ ಸೇವೆಯ ಸಂವೇದನೆ ಮತ್ತು ರಾಜತಾಂತ್ರಿಕ ಬುದ್ಧಿವಂತಿಕೆಯ ವ್ಯಕ್ತಿ ಎಂದು ಬಣ್ಣಿಸಿದರು, ಅವರು ತಾವು ಪಡೆದ ಉಡುಗೊರೆಗಳಿಗೆ ಯಾವುದೇ ಹಿಂಜರಿಕೆಯಿಲ್ಲದೆ ಪ್ರತಿಕ್ರಿಯಿಸಿದರು.

ಅವರ ರಾಜತಾಂತ್ರಿಕ ಸೇವೆಯು ಕೇವಲ ರಾಜಕೀಯವಲ್ಲ ಬದಲಾಗಿ ಜನರು ಮತ್ತು ರಾಷ್ಟ್ರಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯ ಸೇತುವೆಗಳನ್ನು ನಿರ್ಮಿಸುವ ಅವರ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಿದ ಪಾಲನಾ ಸೇವೆಯಲ್ಲಿ ಆಳವಾಗಿ ಬೇರೂರಿದೆ ಎಂದು ಕಾರ್ಡಿನಲ್ ಪರೋಲಿನ್ ರವರು ಗಮನಿಸಿದರು.

ಹಲವು ವರ್ಷಗಳ ಸೇವೆಯ ನಂತರ ಕಾರ್ಡಿನಲ್ ರವರು ಹೇಳಿದರು, ಪ್ರಭುವು ಆತನಿಂದ ಇನ್ನೂ ಹೆಚ್ಚಿನ ಬೇಡಿಕೆಯ ಕೊಡುಗೆಯನ್ನು ಕೇಳಿದನು. ಅದು ಧರ್ಮಸಭೆಯ ಪವಿತ್ರೀಕರಣಕ್ಕಾಗಿ ಕ್ರಿಸ್ತನೊಂದಿಗೆ ಒಕ್ಕೂಟದಲ್ಲಿ ಬಳಲುವುದಾಗಿದೆ.

ಮಹಾಧರ್ಮಾಧ್ಯಕ್ಷರಾದ ರುಗಾಂಬ್ವಾರವರ ಕೊನೆಯ ತಿಂಗಳುಗಳನ್ನು ಅವರು ಮೌನ ಸಾಕ್ಷಿಯ ಸಮಯವೆಂದು ಬಣ್ಣಿಸಿದರು, ಆ ಸಮಯದಲ್ಲಿ ಅವರ ವಿಶ್ವಾಸವು ಅಚಲವಾಗಿ ಉಳಿಯಿತು ಮತ್ತು ಅವರ ನೋವು ಇತರರಿಗೆ ಕೃಪೆಯ ಮೂಲವಾಯಿತು.

ಸಂತ ಪೌಲರು ರೋಮನ್ನರಿಗೆ ಬರೆದ ಪತ್ರದ ವಾಕ್ಯಗಳನ್ನು ಉಲ್ಲೇಖಿಸುತ್ತಾ, ಕಾರ್ಡಿನಲ್ ಪರೋಲಿನ್ ರವರು ಈಗಿನ ಕಾಲದ ನೋವುಗಳು ಬಹಿರಂಗಪಡಿಸಬೇಕಾದ ಮಹಿಮೆಗೆ ಹೋಲಿಸಲು ಯೋಗ್ಯವಾಗಿಲ್ಲ ಎಂದು ಅಲ್ಲಿದ್ದವರಿಗೆ ನೆನಪಿಸಿದರು. ದಿವಂಗತ ಮಹಾಧರ್ಮಾಧ್ಯಕ್ಷರಾದ ರುಗಾಂಬ್ವಾರವರು ಈಗ ದೇವರ ಮುಂದೆ ನಿಂತಿರುವುದು ಲೌಕಿಕ ಪ್ರಶಂಸೆಗಳೊಂದಿಗೆ ಅಲ್ಲ, ಬದಲಾಗಿ ಸೇವೆ, ನಮ್ರತೆ ಮತ್ತು ಪ್ರೀತಿಯಲ್ಲಿ ಬದುಕಿದ ಅಭ್ಯಂಗಿತ ಸೇವೆಯ ಜೀವನದ ಅರ್ಪಣೆಯೊಂದಿಗೆ ಎಂದು ಅವರು ಒತ್ತಿ ಹೇಳಿದರು. ಮಹಾಧರ್ಮಾಧ್ಯಕ್ಷರಾದ ರುಗಂಬವಾರವರು ಎಲ್ಲಕ್ಕಿಂತ ಹೆಚ್ಚಾಗಿ, ಅವರ ಶಾಂತ ಸ್ಥಿರತೆಯು ಅವರ ಮಾತುಗಳು ಮತ್ತು ಉಪಸ್ಥಿತಿಗೆ ತೂಕವನ್ನು ನೀಡಿದ ಸಾಕ್ಷಿಯಾಗಿದ್ದರು ಎಂದು ಅವರು ಗಮನಿಸಿದರು.

ವಿಶ್ವಗುರು ಮಹಾನ್‌ ಸಂತ ಲಿಯೋರವರನ್ನು ಉಲ್ಲೇಖಿಸಿ, ಕಾರ್ಡಿನಲ್ ಪರೋಲಿನ್, ಮಹಾಧರ್ಮಾಧ್ಯಕ್ಷರಾದ ರುಗಂಬವಾರವರು ನಿಜವಾದ "ಶಾಂತಿಯ ನಿರ್ವಾಹಕ" ಮತ್ತುಪ್ರಭುವಿನ ದ್ರಾಕ್ಷಾ ತೋಟದಲ್ಲಿ ನಿಷ್ಠಾವಂತ ಸೇವಕರಾಗಿದ್ದ ಅವರು ಈಗ ದೇವರ ಶಾಶ್ವತ ಶಾಂತಿಯಲ್ಲಿ ವಿಶ್ರಾಂತಿ ಪಡೆಯಲಿ ಎಂದು ಪ್ರಾರ್ಥನೆಯೊಂದಿಗೆ ಕೊನೆಗೊಳಿಸಿದರು.

ಅಂತ್ಯಕ್ರಿಯೆಯಲ್ಲಿ ವ್ಯಾಟಿಕನ್ ಅಧಿಕಾರಿಗಳು, ರಾಜತಾಂತ್ರಿಕ ದಳದ ಸದಸ್ಯರು, ಯಾಜಕರು, ಧಾರ್ಮಿಕರು ಮತ್ತು ಶ್ರೀ ಸಾಮಾನ್ಯ ಭಕ್ತವಿಶ್ವಾಸಿಳು ಮತ್ತು ರುಗಾಂಬ್ವಾರವರ ಸ್ಥಳೀಯ ತಂಜಾನಿಯಾದ ಪ್ರತಿನಿಧಿಗಳು ಭಾಗವಹಿಸಿದ್ದರು.
 

25 ಸೆಪ್ಟೆಂಬರ್ 2025, 20:31