ಯುದ್ಧಪೀಡಿತ ಸುಡಾನ್‌ಗಾಗಿ ಪ್ರಾರ್ಥನೆ ಮತ್ತು ಕಾರ್ಯಗತ ಕ್ರಮಕ್ಕಾಗಿ ಪ್ರೇಷಿತ ರಾಯಭಾರಿ
ಫ್ರಾನ್ಸೆಸ್ಕಾ ಸಬಟಿನೆಲ್ಲಿ ಮತ್ತು ಲಿಂಡಾ ಬೋರ್ಡೋನಿ
ದಕ್ಷಿಣ ಸುಡಾನಿನ ಪ್ರೇಷಿತ ರಾಯಭಾರಿಯಾದ, ಮಹಾಧರ್ಮಾಧ್ಯಕ್ಷರಾದ ಸೀಮಸ್ ಪ್ಯಾಟ್ರಿಕ್ ಹೊರ್ಗನ್ ರವರು ಸುಡಾನಿಗೆ ನೀಡಿದ ತಮ್ಮ ಹತ್ತು ದಿನಗಳ ಭೇಟಿಯನ್ನು ಪೂರ್ಣಗೊಳಿಸಿದ್ದಾರೆ, ಅಲ್ಲಿ ಅವರು ನಡೆಯುತ್ತಿರುವ ಅಂತರ್ಯುದ್ಧದ ಮಧ್ಯೆ ದೇಶದ ಕಥೊಲಿಕ ಸಮುದಾಯಕ್ಕೆ ವಿಶ್ವಗುರು XIV ಲಿಯೋರವರಿಂದ ನಿಕಟತೆ ಮತ್ತು ಒಗ್ಗಟ್ಟಿನ ಸಂದೇಶವನ್ನು ಸುಡಾನಿನ ಜನತೆಗೆ ಕೊಂಡೊಯ್ದರು.
ಸುಡಾನ್ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಅಧಿಕಾರ ಹೋರಾಟದ ನಂತರ ಏಪ್ರಿಲ್ 2023ರಲ್ಲಿ ಪ್ರಾರಂಭವಾದ ಈ ಯುದ್ಧವು ಹತ್ಯೆಗಳು, ಸಾಮೂಹಿಕ ಸ್ಥಳಾಂತರ ಮತ್ತು ವಿಶ್ವಸಂಸ್ಥೆಯು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟು ಎಂದು ಉಲ್ಲೇಖಿಸಿರುವ ದುರಂತದ ಅಲೆಗಳಿಗೆ ಕಾರಣವಾಗಿದೆ.
ಸುಡಾನಿನ ಸಾವಿರಾರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ, ಹಳ್ಳಿಗಳು ಮತ್ತು ಕೃಷಿಭೂಮಿಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು ಸುಮಾರು 12 ಮಿಲಿಯನ್ ಜನರು ತಮ್ಮ ಮನೆಗಳಿಂದ , ಅಂದರೆ ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಜನರು ನೆರೆಯ ದೇಶಗಳಿಗೆ ನಿರಾಶ್ರಿತರಾಗಿ ಓಡಿಸಲ್ಪಟ್ಟಿದ್ದಾರೆ.
ವ್ಯಾಟಿಕನ್ ಸುದ್ದಿಯವರೊಂದಿಗೆ ಮಾತನಾಡಿದ ಅವರು, "ನನ್ನ ಹತ್ತು ದಿನಗಳ ಸುಡಾನ್ ಭೇಟಿಯ ಕೊನೆಯಲ್ಲಿ, ಸುಡಾನ್‌ನಲ್ಲಿರುವ ಧರ್ಮಸಭೆಗೆ ಮತ್ತು ನಾನು ಬಹಳ ದಿನಗಳಿಂದ ದಕ್ಷಿಣ ಸುಡಾನಿಗೆ ಪ್ರೇಷಿತ ರಾಯಭಾರಿಯಾಗಬೇಕೆಂದು ಬಯಸುತ್ತಿದ್ದ ದೇಶಕ್ಕೆ ಆಗಮಿಸುತ್ತಿದ್ದೇನೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಸುಡಾನಿನ ಜನತೆಯ ಜವಾಬ್ದಾರಿಯೂ ನನ್ನ ಹೆಗಲ ಮೇಲಿದೆ ಎಂದು ಹೇಳಿದರು.
ಸುಡಾನ್‌ನಲ್ಲಿ ಅಧಿಕವಾಗಿ ಸಂಕಷ್ಟಕ್ಕೊಳಗಾದ ಸ್ಥಳೀಯ ಧರ್ಮಸಭೆಗೆ, ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ, ಭೀಕರ ಅಂತರ್ಯುದ್ಧ ಭುಗಿಲೆದ್ದಿದ್ದ ಸಂದರ್ಭದಲ್ಲಿ ಪರಿಣಾಮ ಎದುರಿಸಿದ ಎಲ್ಲ ಜನರಿಗೆ ಹಾಗೂ ಸಂತ್ರಸ್ತರಿಗೂ, ವಿಶ್ವಗುರುಗಲ ಆಪ್ತತೆ ಮತ್ತು ಪ್ರೋತ್ಸಾಹದ ಮಾತನ್ನು ತರುವುದು ತಮ್ಮ ಸುಡಾನ್ ಭೇಟಿಯ ಪ್ರಮುಖ ಉದ್ದೇಶವಾಗಿತ್ತು ಎಂದು ಮಹಾಧರ್ಮಾಧ್ಯಕ್ಷರಾದ ಸೀಮಸ್ ಪ್ಯಾಟ್ರಿಕ್ ಹೊರ್ಗನ್ ರವರು ವಿವರಿಸಿದರು.
ಸುಡಾನಿನ ಕಥೊಲಿಕರ ಶಾಂತಿಗಾಗಿ ಪ್ರಾರ್ಥನೆಗಳು
ಕಥೊಲಿಕ ಸಮುದಾಯವು "ಎಲ್ಲಾ ಕಡೆಯಿಂದಲೂ ತುಂಬಾ ಕಠಿಣ ಒತ್ತಡವನ್ನು ಎದುರಿಸುತ್ತಿದೆ ಮತ್ತು ಇಂತಹ ಸಂದರ್ಭದಲ್ಲಿ ಪ್ರೇಷಿತ ರಾಯಭಾರಿಯ ಉಪಸ್ಥಿತಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು ಎಂದು ಅವರು ಹೇಳಿದರು, ಪ್ರೇಷಿತ ರಾಯಭಾರಿಯವರ ಆಗಮನ ಮತ್ತು ವಿಶ್ವಗುರುಗಳ ಆಪ್ತತೆ, ಒಗ್ಗಟ್ಟು ಮತ್ತು ಸಾಮೀಪ್ಯದ ಸಂದೇಶವನ್ನು ತಂದ ಸಂಗತಿಗೆ, ದೇವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ರಾಜಕೀಯ ಅಧಿಕಾರಿಗಳೊಂದಿಗೆ ಸಭೆಗಳು
ಪೋರ್ಟ್ ಸುಡಾನ್‌ನಲ್ಲಿ, ಸುಡಾನಿನ ಪರಿವರ್ತನಾ ಸರ್ಕಾರದ ಸದಸ್ಯರನ್ನೂ ಸಹ ಮಹಾಧರ್ಮಾಧ್ಯಕ್ಷರು ಭೇಟಿಯಾದರು. ಭವಿಷ್ಯದ ಸಾಂವಿಧಾನಿಕ ಕ್ರಮದ ಕುರಿತು ಪವಿತ್ರ ಪೀಠಾಧಿಕಾರಿಯು, ತಮ್ಮ ತತ್ವಗಳನ್ನು ಅವರು ವ್ಯಕ್ತಪಡಿಸಿದರು, "ಧರ್ಮದ ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸ್ವಾತಂತ್ರ್ಯ"ದ ಮಹತ್ವವನ್ನು ಒತ್ತಿ ಹೇಳಿದರು.
ಧರ್ಮಸಭೆಯ ನಾಯಕರು ಮತ್ತು ಧರ್ಮಪ್ರಚಾರಕರುಗಳಿಗೆ ಕೃತಜ್ಞತೆಗಳು
ಮಹಾಧರ್ಮಾಧ್ಯಕ್ಷರಾದ ಹೊರ್ಗನ್ ರವರ ಪ್ರಯಾಣದುದ್ದಕ್ಕೂ ಖಾರ್ಟೌಮ್‌ನ ಮಹಾಧರ್ಮಾಧ್ಯಕ್ಷರಾದ ಮೈಕೆಲ್ ದಿದಿರವರೊಂದಿಗೆ ಇದ್ದರು ಮತ್ತು ಪೋರ್ಟ್ ಸುಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರುಗಳು, ಕಾಂಬೋನಿ ಧರ್ಮಪ್ರಚಾರಕರುಗಳು ಮತ್ತು ಇತರ ಧರ್ಮಪ್ರಚಾರಕರುಗಳನ್ನು ಭೇಟಿಯಾದರು. ಅವರು "ತುಂಬಾ ಕಷ್ಟಕರ ಸಂದರ್ಭಗಳಲ್ಲಿ ಅವರ ನಿಷ್ಠೆಗಾಗಿ" ಕೃತಜ್ಞತೆ ವ್ಯಕ್ತಪಡಿಸಿದರು.
ಸುಡಾನಿಗಾಗಿ ಪ್ರಾರ್ಥನೆಗಳು
ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುತ್ತಾ, ಮಹಾಧರ್ಮಾಧ್ಯಕ್ಷರಾದ ಹೊರ್ಗನ್ ರವರು ಸಾರ್ವತ್ರಿಕ ಧರ್ಮಸಭೆಯ ಪ್ರಾರ್ಥನೆಗಳನ್ನು ಕೋರಿದರು. ಅದಕ್ಕಾಗಿಯೇ ನಿಮ್ಮೊಂದಿಗೆ, ನಿಮ್ಮ ಕೇಳುಗರೊಂದಿಗೆ ಮತ್ತು ವ್ಯಾಟಿಕನ್ ಮಾಧ್ಯಮವನ್ನು ಅನುಸರಿಸುವವರೊಂದಿಗೆ ಸಂವಹನ ನಡೆಸಲು ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು ಮತ್ತು ಸುಡಾನ್‌ನಲ್ಲಿನ ಈ ಕ್ರೂರ ಅಂತರ್ಯುದ್ಧವನ್ನು ಕೊನೆಗೊಳಿಸಲು ಅದಕ್ಕಾಗಿ ಅವರ ಪ್ರಾರ್ಥನೆಗಳನ್ನು ಕೇಳುತ್ತೇನೆ ಎಂದು ಹೇಳಿದರು.