ಯುವ ಮಾಧ್ಯಮ ವೃತ್ತಿಪರರು ರೋಮ್‌ನಲ್ಲಿ ವಿಶ್ವಾಸದ ಸಂವಹನವನ್ನು ಅನ್ವೇಷಿಸುತ್ತಾರೆ
ಸೆಬಾಸ್ಟಿಯನ್ ಸ್ಯಾನ್ಸನ್ ಫೆರಾರಿ
ಡಿಕ್ಯಾಸ್ಟರಿ ಫಾರ್ ಕಮ್ಯುನಿಕೇಷನ್ /ನಮ್ಮ ಪೋಷಕ ಸಂಸ್ಥೆಯ ತರಬೇತಿ ಉಪಕ್ರಮವಾದ ಡಿಜಿಟಲ್ ಜಗತಿನಲ್ಲಿ ವಿಶ್ವಾಸದ ಸಂವಹನದ ಐದನೇ ಆವೃತ್ತಿಯ ತೀವ್ರವಾದ “ವಸತಿ ವಾರ”ಕ್ಕಾಗಿ ವಿಶ್ವದ ವಿವಿಧ ಭಾಗಗಳಿಂದ 15 ಯುವ ಸಂವಹನಕಾರರ ಗುಂಪು ರೋಮ್‌ನಲ್ಲಿ ಒಟ್ಟುಗೂಡಿತು.
ಸೆಪ್ಟೆಂಬರ್ 12 ರಿಂದ 19, 2025 ರವರೆಗೆ, ಭಾಗವಹಿಸುವವರು ಪ್ರಾಯೋಗಿಕ ಕಲಿಕೆ ಮತ್ತು ಸಿನೊಡಲ್ ವಿನಿಮಯದ ವಿಶಿಷ್ಟ ಅನುಭವವನ್ನು ಹಂಚಿಕೊಂಡರು.
ಕೀನ್ಯಾ, ನೈಜೀರಿಯಾ, ಕೆನಡಾ, ಫಿಲಿಪೈನ್ಸ್, ಪ್ಯಾಲೆಸ್ಟೈನ್, ಪೋಲೆಂಡ್, ಕ್ರೊಯೇಷಿಯಾ, ಇಟಲಿ, ಭಾರತ, ಉರುಗ್ವೆ ಮತ್ತು ಯುನೈಟೆಡ್ ಸ್ಟೇಟ್ಸ್ - 11 ದೇಶಗಳಿಂದ ಬರುವ ಈ ಯುವ ವೃತ್ತಿಪರರು ಮೇ 2025ರಲ್ಲಿ ಪ್ರಾರಂಭವಾದ ಮತ್ತು ಮಾರ್ಚ್ 2026ರವರೆಗೆ ಮುಂದುವರಿಯುವ ಈ ಯೋಜನೆಯ ಭಾಗವಾಗಿದ್ದಾರೆ.
ಈ ಕಾರ್ಯಕ್ರಮವು ಸಾಪ್ತಾಹಿಕ ಡಿಜಿಟಲ್ ಜೂಮ್ ಸಭೆಗಳು ಮತ್ತು ತಂಡದ ಯೋಜನೆಗಳನ್ನು ಸಂಯೋಜಿಸುತ್ತದೆ, ಡಿಜಿಟಲ್ ಪರಿಸರದಲ್ಲಿ ವಿಶ್ವಾಸವನ್ನು ಸಂವಹನ ಮಾಡಲು ಸಾಧನಗಳನ್ನು ಒದಗಿಸುವ ಗುರಿಯೊಂದಿಗೆ ತಂಡದ ಯೋಜನೆಗಳನ್ನು ಸಂಯೋಜಿಸುತ್ತಿದೆ.
ದಾರಿಯುದ್ದಕ್ಕೂ, ಅವರು ಸಾಮಾಜಿಕ ಮಾಧ್ಯಮ ಸಂವಹನದಲ್ಲಿ "ಪೂರ್ಣ ಉಪಸ್ಥಿತಿಗಾಗಿ ಕಡೆಗೆ" ಎಂಬ ಪಾಲನಾ ಸೇವೆಯ ಚಿಂತನೆಯನ್ನು ಮತ್ತು ದ್ವಿತೀಯ ವ್ಯಾಟಿಕನ್ ಸಮ್ಮೇಳನದ ವಿಶೇಷ ಆದೇಶದಿಂದ ಸಿದ್ಧಪಡಿಸಲಾದ ಪಾಲನಾ ಸೇವೆಯ ಸೂಚನೆಯಾದ "ಕಮ್ಯುನಿಯೊ ಎಟ್ ಪ್ರೋಗ್ರೆಸಿಯೊ" ನ್ನು ಅಧ್ಯಯನ ಮಾಡಿದರು.
ಆಧ್ಯಾತ್ಮಿಕ ರಚನೆಯ ಉತ್ತಮ ಅಭ್ಯಾಸಗಳನ್ನು ಬೆಳೆಸುವುದರ ಜೊತೆಗೆ, ಈ ಉಪಕ್ರಮವು ಹೊಸ ರೀತಿಯ ಸುವಾರ್ತಾಬೋಧನೆಯನ್ನು ಪ್ರೇರೇಪಿಸುವುದು, ಧರ್ಮಸಭೆಯ ಸವಾಲುಗಳನ್ನು ಎದುರಿಸುವ ಸಂದರ್ಭಗಳಲ್ಲಿ, ಪ್ರತಿಭೆಗಳ ಹಂಚಿಕೆಯನ್ನು ಉತ್ತೇಜಿಸುವುದು ಮತ್ತು ಹೊಸ ಪೀಳಿಗೆಗಳು ಡಿಜಿಟಲ್ ಮಾಧ್ಯಮಕ್ಕೆ ಹೇಗೆ ಸಂಬಂಧ ಹೊಂದಿವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.
ಪ್ರಯಾಣದ ಭಾಗವಾಗಿ, ಭಾಗವಹಿಸುವವರು ಮೂರು ಕಥೋಲಿಕ ಸಂಸ್ಥೆಗಳಿಗೆ ಸಂವಹನ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಾರೆ.
ರೋಮ್‌ನಲ್ಲಿನ ಒಂದು ವಾರವು ಆಲಿಸುವಿಕೆ, ರಚನೆ ಮತ್ತು ಪ್ರಾಯೋಗಿಕ ಅನ್ವಯದ ಸಮಯವಾಗಿತ್ತು. ಗುಂಪುಗಳ ಚಟುವಟಿಕೆಗಳ ಸಮೃದ್ಧ ಕಾರ್ಯಕ್ರಮವನ್ನು ಅನುಸರಿಸಿತು, ಅವರು ಸೆಪ್ಟೆಂಬರ್ 17 ರಂದು ವಿಶ್ವಗುರು XIV ಲಿಯೋರವರೊಂದಿಗೆ ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ಭಾಗವಹಿಸಿದರು. ನಂತರ ಅವರನ್ನು ಸ್ವಾಗತಿಸಲು ಅವರಿಗೆ ಅವಕಾಶ ಸಿಕ್ಕಿತು, ವ್ಯಾಟಿಕನ್ ರೇಡಿಯೋ ವಸ್ತುಸಂಗ್ರಹಾಲಯ ಸೇರಿದಂತೆ ನಾಲ್ಕು ವಿಶ್ವಗುರುಗಳ ಮಹದೇವಾಲಯಗಳು, ವ್ಯಾಟಿಕನ್ ನೆಕ್ರೋಪೊಲಿಸ್ ಮತ್ತು ಸಂವಹನಕ್ಕಾಗಿ ಡಿಕ್ಯಾಸ್ಟರಿಯನ್ನು ಭೇಟಿ ಮಾಡಿದರು.
ಡಿಕಾಸ್ಟರಿ ಫಾರ್ ಕಮ್ಯುನಿಕೇಷನ್‌ನ ಕಾರ್ಯದರ್ಶಿ ಶ್ರೇಷ್ಠಗುರುವಾದ ಲೂಸಿಯೊ ಆಡ್ರಿಯನ್ ರೂಯಿಜ್ ರವರ ಅಧ್ಯಕ್ಷತೆಯಲ್ಲಿ ಸಂತ ಕ್ಲೆಮೆಂಟ್ ರವರ ಮಹದೇವಾಲಯದಲ್ಲಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು ಮತ್ತು ಪ್ರಿಫೆಕ್ಟ್ ಡಾ. ಪಾವೊಲೊ ರುಫಿನಿವರನ್ನು ಭೇಟಿಯಾದರು.
ವಿಶ್ವಗುರುವಿನ ಜೊತೆಗಿನ ಪ್ರಾರ್ಥನೆಯಿಂದ ಪ್ರೇರಿತರಾದ ಅವರು, ವೈಯಕ್ತಿಕ ಹೊರೆಗಳ ಹೊರತಾಗಿಯೂ, ನಾನು ಜೊತೆಯಲ್ಲಿ ವಾಸಿಸುವ ಕ್ರೈಸ್ತೇತರರಿಗೂ ಸಹೋದರತ್ವವನ್ನು ನೀಡಬಹುದು. ಏಕೆಂದರೆ, ಕೊನೆಯಲ್ಲಿ, ನಾವೆಲ್ಲರೂ ಸಾಂತ್ವನ ಪಡೆಯಬೇಕಾಗಿದೆ ಎಂದು ಹೇಳಿದರು.
ತಮ್ಮ ಸಾಕ್ಷ್ಯದಲ್ಲಿ, ಜನರನ್ನು ವಿಭಜಿಸುವ "ಕಹಿ ಮತ್ತು ದ್ವೇಷವನ್ನು ಕರಗಿಸುವ" ತುರ್ತುಸ್ಥಿತಿಯನ್ನು ಕುರಿತು ಅವರು ಒತ್ತಿ ಹೇಳಿದರು, ಇದು ಪ್ರೀತಿಯ ಮೂಲಕ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಈ ಉಪಕ್ರಮವು ಧರ್ಮಸಭೆಯ 21 ನೇ ಶತಮಾನದ ಧ್ಯೇಯದಲ್ಲಿ ಸಂವಹನಕ್ಕಾಗಿ ಡಿಕಾಸ್ಟರಿಯಿಂದ ಒಂದು ದೃಢವಾದ ಹೆಜ್ಜೆಯನ್ನು ಪ್ರತಿನಿಧಿಸುತ್ತಿದೆ, ತಂತ್ರಜ್ಞಾನವನ್ನು ಕೇವಲ ಒಂದು ಸಾಧನವಾಗಿ ಮಾತ್ರವಲ್ಲದೆ ಸುವಾರ್ತಾಬೋಧನೆ ಮತ್ತು ಐಕ್ಯತೆಯನ್ನು ನಿರ್ಮಿಸಲು ಫಲಕಾರಿಯಾದ ನೆಲವಾಗಿ ಅಳವಡಿಸಿಕೊಳ್ಳಲಾಗಿದೆ.