ಹುಡುಕಿ

One in Christ, United in mission- Theme of World Mission Sunday 2026 One in Christ, United in mission- Theme of World Mission Sunday 2026  (Jeffrey Ortega)

'ಸುವಾರ್ತಾಪ್ರಚಾರ ಮೂಲಕ ಕ್ರಿಸ್ತನಲ್ಲಿ ಐಕ್ಯವಾಗುವುದು ' ವಿಶ್ವ ಸುವಾರ್ತಾ ಪ್ರಚಾರ ಭಾನುವಾರದ 2026 ರ ಶೀರ್ಷಿಕೆ

2026ರ ವಿಶ್ವ ಸುವಾರ್ತಾಪ್ರಚಾರ ಭಾನುವಾರದ ದಿನಕ್ಕಾಗಿ ವಿಶ್ವಗುರು XIVನೇ ಲಿಯೋರವರು ಆಯ್ಕೆ ಮಾಡಿದ ಶೀರ್ಷಿಕೆಯನ್ನು ವ್ಯಾಟಿಕನ್ ಘೋಷಿಸಿದೆ: " ಧರ್ಮಪ್ರಚಾರದ ಮೂಲಕ ಕ್ರಿಸ್ತನಲ್ಲಿ ಐಕ್ಯವಾಗುವುದು." 2026ರಲ್ಲಿ ನಡೆಯುವ ವಿಶ್ವಾದ್ಯಂತ ಆಚರಣೆಯು ವಿಶ್ವಾಸದ ಪ್ರಚಾರಕ್ಕಾಗಿ ವಿಶ್ವಗುರುಗಳ ಸಮಾಜದ ಸಲಹೆಯ ಮೇರೆಗೆ ವಿಶ್ವಗುರು XIನೇ ಭಕ್ತಿನಾಥರವರು ಈ ದಿನವನ್ನು ಸ್ಥಾಪಿಸಿದ 100ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ವ್ಯಾಟಿಕನ್ ಸುದ್ದಿ

"ಧರ್ಮಪ್ರಚಾರದ ಮೂಲಕ ಕ್ರಿಸ್ತನಲ್ಲಿ ಐಕ್ಯವಾಗುವುದು." ಎಂಬುದು ವಿಶ್ವ ಸುವಾರ್ತಾಪ್ರಚಾರ ಭಾನುವಾರದ 2026ರ ಶೀರ್ಷಿಕೆಯಾಗಿದ್ದು, ಮುಂದಿನ ವರ್ಷ ವಿಶ್ವಾಸದ ಪ್ರಚಾರಕ್ಕಾಗಿ ವಿಶ್ವಗುರುಗಳ ಸಮಾಜದ ಸಲಹೆಯ ಮೇರೆಗೆ ವಿಶ್ವಗುರು XIನೇ ಭಕ್ತಿನಾಥರವರು ಸ್ಥಾಪಿಸಿದ 100ನೇ ವಾರ್ಷಿಕೋತ್ಸವವನ್ನು ಇದು ಸ್ಮರಿಸುತ್ತದೆ.

ಸಾಂಪ್ರದಾಯಿಕವಾಗಿ ಧರ್ಮಪ್ರಚಾರಗಳಿಗೆ ಮೀಸಲಾಗಿರುವ ತಿಂಗಳ ಕೊನೆಯ ದಿನದಂದು, ಮುಂದಿನ ವಿಶ್ವ ಸುವಾರ್ತಾಪ್ರಚಾರ ರ ದಿನಕ್ಕಾಗಿ ವಿಶ್ವಗುರು XIVನೇ ಲಿಯೋರವರು ಆಯ್ಕೆ ಮಾಡಿದ ಶೀರ್ಷಿಕೆಯನ್ನು ಸಾರ್ವಜನಿಕಗೊಳಿಸಲಾಗಿದೆ. ಧರ್ಮಪ್ರಚಾರದ ವಾರ್ಷಿಕ ಆಚರಣೆಯನ್ನು ಅಕ್ಟೋಬರ್‌ ತಿಂಗಳ ಕೊನೆಯ ಭಾನುವಾರದಂದು ನಿಗದಿಪಡಿಸಲಾಗಿದೆ, ಇದು 2026ರಲ್ಲಿ ಅಕ್ಟೋಬರ್ ತಿಂಗಳ 18 ರಂದು ಬರುತ್ತದೆ.

ವಿಶ್ವಗುರು XIVನೇ ಲಿಯೋರವರ ಮನವಿ
ಈ ವರ್ಷದ ವಿಶ್ವ ಸುವಾರ್ತಾಪ್ರಚಾರ ಭಾನುವಾರವನ್ನು ಬೆಂಬಲಿಸಿ ಮಾಡಿದ ಮನವಿಯಲ್ಲಿ, ಪೋಪ್ ಲಿಯೋರವರು, ಧರ್ಮಪ್ರಚಾರಕರಿಗಾಗಿ ಮತ್ತು ಅವರ ಪ್ರೇಷಿತ ಕಾರ್ಯದ ಫಲಪ್ರದತೆಗಾಗಿ ಪ್ರಾರ್ಥನೆಯಲ್ಲಿ ಇಡೀ ಧರ್ಮಸಭೆಯು ಸೇರಲು ಇದು ಒಂದು ವಿಶೇಷ ಸಂದರ್ಭವಾಗಿದೆ ಎಂದು ಒತ್ತಿ ಹೇಳಿದರು. "ವಿಶ್ವ ಸುವಾರ್ತಾಪ್ರಚಾರದ ಭಾನುವಾರದಂದು ತೋರಿಸಲಾದ ವಿಶ್ವಾಸ, ಪ್ರಾರ್ಥನೆ ಮತ್ತು ಔದಾರ್ಯವು ಇಡೀ ಸಮುದಾಯಗಳನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ನಾನು ನೇರವಾಗಿ ನೋಡಿದ್ದೇನೆ" ಎಂದು ವಿಶ್ವಗುರು, ಒಬ್ಬ ಯಾಜಕನಾಗಿ ಮತ್ತು ನಂತರ ಪೆರುವಿನಲ್ಲಿ ಧರ್ಮಪ್ರಚಾರಕ ಧರ್ಮಾಧ್ಯಕ್ಷರಾಗಿ ತಮ್ಮ ವೈಯಕ್ತಿಕ ಅನುಭವವನ್ನು ನೆನಪಿಸಿಕೊಳ್ಳುತ್ತಾ ಹೇಳಿದರು.

ಎಲ್ಲಾ ಉಪಕ್ರಮಗಳಿಗೆ ಮಾರ್ಗದರ್ಶಿ ಎಳೆ
2026ರ ವಿಶ್ವ ಸುವಾರ್ತಾಪ್ರಚಾರ ಭಾನುವಾರದ ವಿಷಯ, ಇದರ ಮೊದಲ ಭಾಗವು ವಿಶ್ವಗುರು ತಮ್ಮ ವಿಶ್ವಗುರುವಿನ ಹುದ್ದೆಗೆ ಆಯ್ಕೆ ಮಾಡಿದ ಧ್ಯೇಯವಾಕ್ಯವನ್ನು ನೆನಪಿಸುತ್ತದೆ - "ಇಲ್ಲೋ ಉನೊ ಉನಮ್" (ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ), ಪಿತನೊಂದಿಗೆ ಕ್ರಿಸ್ತನ ಐಕ್ಯತೆಯ ಮೇಲೆ ಸ್ಥಾಪಿತವಾದ ವಿಶ್ವಾಸದಲ್ಲಿ ಭಕ್ತರ ಐಕ್ಯತೆಯನ್ನು ಮತ್ತು ಅದರ ಪರಿಣಾಮವಾಗಿ ಸುವಾರ್ತಾಬೋಧನೆಯ ಸಾಮಾನ್ಯ ಧ್ಯೇಯವನ್ನು ಎತ್ತಿ ತೋರಿಸುತ್ತದೆ.

2026ರರಲ್ಲಿ, ಧರ್ಮಸಭೆಯ ವಿಶ್ವಗುರುಗಳ ಧರ್ಮಪ್ರಚಾರಕರ ಒಕ್ಕೂಟದ ಸ್ಥಾಪನೆಯ ೧೧೦ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ, ಇದನ್ನು ಸಂತ VIನೇ ಪೌಲ್ ರವರ "ಇತರ ವಿಶ್ವಗುರುಗಳ ಧರ್ಮಪ್ರಚಾರಕರ ಕೃತಿಗಳ ಚೈತನ್ಯ" ಎಂದು ವ್ಯಾಖ್ಯಾನಿಸಿದ್ದಾರೆ - ಸೊಸೈಟಿ ಫಾರ್ ದಿ ಪ್ರೊಪಗೇಷನ್ ಆಫ್ ದಿ ಫೇತ್, ಸೊಸೈಟಿ ಆಫ್ ದಿ ಹೋಲಿ ಚೈಲ್ಡ್‌ಹುಡ್ ಮತ್ತು ಸೊಸೈಟಿ ಆಫ್ ಸೇಂಟ್ ಪೀಟರ್ ದಿ ಅಪೋಸ್ತಲ್. ಈ ನಾಲ್ಕು ಸಮಾಜಗಳು, ಪ್ರತಿಯೊಂದೂ ತನ್ನದೇ ಆದ ನಿರ್ದಿಷ್ಟ ಧ್ಯೇಯವನ್ನು ಹೊಂದಿದ್ದು, ದೀಕ್ಷಾಸ್ನಾನ ಪಡೆದವರಲ್ಲಿ ಧರ್ಮಪ್ರಚಾರಕ ಜವಾಬ್ದಾರಿಯನ್ನು ಉತ್ತೇಜಿಸಲು ಮತ್ತು ಹೊಸ ಸ್ಥಳೀಯ ಧರ್ಮಸಭೆಗಳನ್ನು ಬೆಂಬಲಿಸಲು ಕೆಲಸ ಮಾಡುತ್ತವೆ.
 

31 ಅಕ್ಟೋಬರ್ 2025, 15:56