ವೆನೆಜುವೆಲಾದ ಭಕ್ತವಿಶ್ವಾಸಿಗಳಿಗೆ ಪ್ಯಾರೋಲಿನ್: ನ್ಯಾಯದ ಅಡಿಪಾಯದ ಮೇಲೆ ನಿರ್ಮಿಸಿ
ಜೋಹಾನ್ ಪ್ಯಾಚೆಕೊ
ಸಂತ ಜೋಸ್ ಗ್ರೆಗೋರಿಯೊ ಹೆರ್ನಾಂಡೆಜ್ ಸಿಸ್ನೆರೋಸ್ ಮತ್ತು ಸಂತ ಮಾರಿಯಾ ಕಾರ್ಮೆನ್ ರೆಂಡಿಲ್ಸ್ ಮಾರ್ಟಿನೆಜ್ ರವರನ್ನು ಸಂತ ಪದವಿ ಪ್ರದಾನಕ್ಕಾಗಿ ರಾಜ್ಯದ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು ಕೃತಜ್ಞತಾ ದಿವ್ಯಬಲಿಪೂಜೆಯನ್ನು ಸಲ್ಲಿಸಿದರು. ಐದು ವರ್ಷಗಳ ಕಾಲ ಅವರು ಪ್ರೇಷಿತ ರಾಯಭಾರಿಯಾಗಿ ಸೇವೆ ಸಲ್ಲಿಸಿದ ವೆನೆಜುವೆಲಾದ ಧರ್ಮಸಭೆಯು ಸಂತೋಷದಿಂದ ವೈಯಕ್ತಿಕವಾಗಿ ಹಂಚಿಕೊಂಡರು. ಸಂತ ಪೇತ್ರರ ಮಹಾದೇವಾಲಯದಲ್ಲಿ ಕೃತಜ್ಞತಾ ದಿವ್ಯಬಲಿಪೂಜೆಯಲ್ಲಿ ನಾವು ಅನುಭವಿಸಿದ ಸಂತೋಷದಿಂದ ನಮ್ಮ ಹೃದಯಗಳು ತುಂಬಿವೆ, ವೆನೆಜುವೆಲಾ ಈಗ ತನ್ನ ಮೊದಲ ಸಂತರನ್ನು ಹೊಂದಿದೆ. ಒಬ್ಬರಲ್ಲ, ಇಬ್ಬರು - ಎಲ್ಲರಿಗೂ ಸಂತರು ಎಂದು ಅವರು ಹೇಳಿದರು.
ವೆನೆಜುವೆಲಾದ ಆರ್ಕೆಸ್ಟ್ರಾ ವ್ಯವಸ್ಥೆಯ ಸೈಮನ್ ಬೊಲಿವರ್ ಗಾಯಕರ ಜೊತೆಯಲ್ಲಿ ಬಲಿಪೀಠದಲ್ಲಿ ಪ್ರಧಾನರಾಗಿ, ನಡೆದ ಆಚರಣೆಯಲ್ಲಿ ವೆನೆಜುವೆಲಾದ ಧರ್ಮಾಧ್ಯಕ್ಷರುಗಳು, ಯಾಜಕರು, ಅಧಿಕಾರಿಗಳು ಮತ್ತು ಈ ಸಂದರ್ಭಕ್ಕಾಗಿ ರೋಮ್‌ಗೆ ಬಂದ ಯಾತ್ರಿಕರು ಭಾಗವಹಿಸಿದ್ದರು.
ಸೌಖ್ಯಪಡಿಸುವ ಉಪಸ್ಥಿತಿ ಮತ್ತು ಮಹಿಳಾ ಪ್ರತಿಭೆ
ಯೆಶಾಯ 58:6-11 ಅನ್ನು ಧ್ಯಾನಿಸುತ್ತಾ, ಕಾರ್ಡಿನಲ್ ಇಬ್ಬರೂ ಸಂತರು ಹಸಿದವರೊಂದಿಗೆ ರೊಟ್ಟಿ ಹಂಚಿಕೊಳ್ಳುವ, ನಿರಾಶ್ರಿತರಿಗೆ ಆಶ್ರಯ ನೀಡುವ, ಬೆತ್ತಲೆಯಾದವರಿಗೆ ಬಟ್ಟೆ ನೀಡುವ ಮತ್ತು ಬಳಲುತ್ತಿರುವವರನ್ನು ನೋಡಿಕೊಳ್ಳುವ ಕರೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಎತ್ತಿ ತೋರಿಸಿದರು. ಸಂತ ಜೋಸ್ ಗ್ರೆಗೋರಿಯೊ ಹೆರ್ನಾಂಡೆಜ್ ರವರು “ಔಷಧದ ಬೆಳಕು ಮತ್ತು ಸಾಂತ್ವನದ ಮುಲಾಮುವನ್ನು ನೀಡುತ್ತಾ ಬೀದಿಗಳಲ್ಲಿ ನಡೆದರು. ಅವರ ಉಪಸ್ಥಿತಿಯಿಂದ ಗುಣಮುಖರಾದರು ಎಂದು ಹಲವರು ಹೇಳಿದರು ಎಂದು ಪರೋಲಿನ್ ರವರು ಗಮನಿಸಿದರು. ಸಂತ ಮಾರಿಯಾ ಕಾರ್ಮೆನ್, ವೆನೆಜುವೆಲಾದ ಮಹಿಳೆಯರ ಶಕ್ತಿಯನ್ನು ಸಾಕಾರಗೊಳಿಸುತ್ತಾರೆ, ಕೆಲಸ ಮಾಡುತ್ತಾರೆ, ನಿರ್ಮಿಸುತ್ತಾರೆ ಮತ್ತು ಹೊಸ ಪೀಳಿಗೆಗೆ ವಿಶ್ವಾಸವನ್ನು ರವಾನಿಸುತ್ತಾರೆ ಎಂದು ಅವರು ಹೇಳಿದರು.
1 ಯೋವಾನ್ನ 3:14-18ನ್ನು ನೆನಪಿಸಿಕೊಳ್ಳುತ್ತಾ, ಅವರು "ನಮ್ಮ ಸಹೋದರರನ್ನು ಪ್ರೀತಿಸುವುದರಿಂದ ಮಾತ್ರ ನಾವು ಮರಣದಿಂದ ಜೀವಕ್ಕೆ ಮರಳುತ್ತೇವೆ. ಪ್ರೀತಿಸದವನು ಮರಣದಲ್ಲಿಯೇ ಉಳಿಯುತ್ತಾನೆ ಎಂದು ಒತ್ತಿ ಹೇಳಿದರು. ಇದು ಇಬ್ಬರು ಸಂತರು ವೀರೋಚಿತವಾಗಿ ಬದುಕಿದ ಮತ್ತು ಈಗ ಭಕ್ತವಿಶ್ವಾಸಿಗಳು ಅವರ ಹಾದಿಯನ್ನು ಅನುಸರಿಸಲು ಕರೆಯುವ ಸಂದೇಶವಾಗಿದೆ ಎಂದು ಅವರು ಹೇಳಿದರು.
ವೆನೆಜುವೆಲಾಗೆ ಒಂದು ಕರೆ
ದೇವರ ಮಾತನ್ನು ಕೇಳುವ ಮೂಲಕ ಮಾತ್ರ ವೆನೆಜುವೆಲಾ ಸಾವಿನಿಂದ ಜೀವನಕ್ಕೆ ಚಲಿಸಬಹುದು, ಅನ್ಯಾಯದ ಒತ್ತಡಗಳನ್ನು ಮುರಿಯಬಹುದು, ತುಳಿತಕ್ಕೊಳಗಾದವರನ್ನು ಮುಕ್ತಗೊಳಿಸಬಹುದು ಮತ್ತು ನ್ಯಾಯ, ಸತ್ಯ, ಸ್ವಾತಂತ್ರ್ಯ ಮತ್ತು ಪ್ರೀತಿಯ ಮೇಲೆ ಶಾಂತಿಯನ್ನು ನಿರ್ಮಿಸಬಹುದು ಎಂದು ಪರೋಲಿನ್ ರವರು ಹೇಳಿದರು. ದೇಶವು ಎದುರಾಗಲು ಸ್ಥಳಗಳನ್ನು ಸೃಷ್ಟಿಸಬೇಕು, ಯಾವುದು ಒಗ್ಗೂಡಿಸುತ್ತದೆಯೋ ಅದಕ್ಕೆ ಆದ್ಯತೆ ನೀಡಬೇಕು ಮತ್ತು ಎಲ್ಲಾ ಸಾರ್ವಜನಿಕ ಕ್ರಿಯೆಗಳ ಗುರಿಯಾಗಿ ಸಾಮಾನ್ಯ ಹಿತದೃಷ್ಟಿಯನ್ನು ಇಟ್ಟುಕೊಂಡು ಅದರ ಸವಾಲುಗಳಿಗೆ ಸಾಮಾನ್ಯ ಪರಿಹಾರಗಳನ್ನು ಹುಡುಕಬೇಕು ಎಂದು ಅವರು ಒತ್ತಾಯಿಸಿದರು.
ಸಂತರಿಗಾಗಿ ಪ್ರಾರ್ಥನೆ
ಪ್ರಬೋಧನೆಯನ್ನು ಮುಕ್ತಾಯಗೊಳಿಸುತ್ತಾ, ಕಾರ್ಡಿನಲ್ ಸಂತ ಪದವಿಗೇರಿಸುವುದನ್ನು ಕೈರೋಸ್ ಎಂದು ಬಣ್ಣಿಸಿದರು, ಈ ಹಾದಿಯಲ್ಲಿ ಸಾಗಲು ಇದು ಸಕಾಲಿಕ ಕ್ಷಣವಾಗಿದೆ. ಅದನ್ನು ವ್ಯರ್ಥವಾಗಿ ಹಾದುಹೋಗಲು ಬಿಡಬೇಡಿ. ನೀವು ಭರವಸೆ ಮತ್ತು ದೃಢಸಂಕಲ್ಪದಿಂದ ಮುಂದುವರಿಯುವಂತೆ ಹೊಸ ಸಂತರು ಮಧ್ಯಸ್ಥಿಕೆ ವಹಿಸಲಿ ಎಂದು ಸಂತ ಜೋಸ್ ಗ್ರೆಗೋರಿಯೊ ಮತ್ತು ಸಂತ ಮದರ್ ಕಾರ್ಮೆನ್, ನಮಗಾಗಿ ಪ್ರಾರ್ಥಿಸಿ! ಎಂದು ಅವರು ಪ್ರಾರ್ಥಿಸಿದರು.