ಕಾರ್ಡಿನಲ್ ಪರೋಲಿನ್: ವ್ಯಾಟಿಕನ್ ಮಕ್ಕಳ ಆಸ್ಪತ್ರೆಗೆ ಯುದ್ಧ ವಲಯದ ರೋಗಿಗಳ ಪ್ರವೇಶ
ಲೊರೆನಾ ಲಿಯೊನಾರ್ಡ
ಆರೈಕೆ ಮತ್ತು ಸಂಶೋಧನೆ ಎರಡೂ ಜೀವನದ ಸೇವೆಯಲ್ಲಿ "ಒಂದೇ ಹಾದಿ", ನೀತಿಶಾಸ್ತ್ರ, ವಿಜ್ಞಾನ ಮತ್ತು ಒಗ್ಗಟ್ಟನ್ನು ಒಂದುಗೂಡಿಸುವ ಜವಾಬ್ದಾರಿಯು, ಸಂಶೋಧನೆಗೆ ಮಾತ್ರ 'ಹೌದು' ಎಂಬುದಲ್ಲದೆ, ನೋವಿನಿಂದ ಅಥವಾ ದೂರದ ಸ್ಥಳಗಳಿಂದ ಬರುವವರನ್ನು ಸ್ವಾಗತಿಸಲು ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ, ವಿಶೇಷವಾಗಿ ಬಡತನ ಅಥವಾ ಸಂಘರ್ಷದಿಂದ ಗುರುತಿಸಲ್ಪಟ್ಟಿದ್ದವರನ್ನೂ ಸಹ ಸ್ವಾಗತಿಸಲು, ಅದು ಯಾರಿಗೂ "ಇಲ್ಲ" ಎಂದು ಎಂದಿಗೂ ಹೇಳುವುದಿಲ್ಲ.
ಅಕ್ಟೋಬರ್ 28, ಮಂಗಳವಾರ ರೋಮ್‌ನಲ್ಲಿರುವ ಬಾಂಬಿನೋ ಗೆಸು ಮಕ್ಕಳ ಆಸ್ಪತ್ರೆಯ ಧ್ಯೇಯವನ್ನು ರಾಜ್ಯದ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು ಈ ರೀತಿ ಸಂಕ್ಷೇಪಿಸಿದ್ದಾರೆ. 1985ರಲ್ಲಿ "ವಿಶ್ವಗುರುವಿನ ಆಸ್ಪತ್ರೆ"ಯನ್ನು ಸಂಶೋಧನೆ, ಆಸ್ಪತ್ರೆ ಮತ್ತು ಆರೋಗ್ಯ ರಕ್ಷಣೆಗಾಗಿ ವೈಜ್ಞಾನಿಕ ಸಂಸ್ಥೆಯಾಗಿ ಗುರುತಿಸಿದ 40ನೇ ವಾರ್ಷಿಕೋತ್ಸವವನ್ನು ಆಚರಿಸಲು "ಆರೈಕೆಗಾಗಿ ಸಂಶೋಧನೆ" ("ಲಾ ರಿಸರ್ಕಾ ಎಕ್ಸ್ ಲಾ ಕ್ಯುರಾ") ಎಂಬ ವಿಷಯದ ಕುರಿತು ನಡೆದ ಸಮ್ಮೇಳನದಲ್ಲಿ ಅವರು ಭಾಗವಹಿಸಿದರು.
ಈ ನಾಲ್ಕು ದಶಕಗಳು "ಸಂಶೋಧನೆ ಮತ್ತು ಕಾಳಜಿ, ಬದ್ಧತೆ, ಬುದ್ಧಿವಂತಿಕೆ ಮತ್ತು ಉತ್ಸಾಹದಿಂದ ನಿರೂಪಿಸಲ್ಪಟ್ಟಿವೆ, ಈ ಅವಧಿಯಲ್ಲಿ ವಿಜ್ಞಾನ ಮತ್ತು ಮಾನವೀಯತೆಯು ಮಕ್ಕಳು ಹಾಗೂ ಅವರ ಕುಟುಂಬಗಳ ಸೇವೆಯಲ್ಲಿ ಒಟ್ಟಾಗಿ ನಡೆದಿವೆ" ಎಂದು ಕಾರ್ಡಿನಲ್ ಪರೋಲಿನ್ ರವರು ಹೇಳಿದರು.
ರೋಗಿಗಳ ಆರೈಕೆಯಲ್ಲಿ ಸಹಾನುಭೂತಿ
ಹದಿನಾರನೇ ಲಿಯೋರವರ ಇತ್ತೀಚಿನ ಪ್ರೇಷಿತ ಉಪದೇಶವಾದ ʼಡಿಲೆಕ್ಸಿ ಟೆʼಯಲ್ಲಿ, ರೋಗಿಗಳು ಮತ್ತು ಬಳಲುತ್ತಿರುವವರನ್ನು ನೋಡಿಕೊಳ್ಳುವಲ್ಲಿ ಕಾಲಾನಂತರದಲ್ಲಿ ಪ್ರಕಟವಾದ ಕ್ರೈಸ್ತರ ಸಹಾನುಭೂತಿಯನ್ನು ಹೇಗೆ ಒತ್ತಾಯಿಸುತ್ತದೆ ಎಂಬುದನ್ನು ವಿದೇಶಾಂಗ ಕಾರ್ಯದರ್ಶಿಯವರು ನೆನಪಿಸಿಕೊಂಡರು. ರೋಗಿಗಳನ್ನು ಭೇಟಿ ಮಾಡಿ ಸಹಾಯ ಮಾಡುವ, ಅವರ ನೋವನ್ನು ಸಾಂತ್ವನಗೊಳಿಸುವ ಸಂಪ್ರದಾಯವು ಪರೋಪಕಾರದ ಸೂಚಕ ಮಾತ್ರವಲ್ಲ, ಧರ್ಮಸಭೆಯ ಧ್ಯೇಯವಾಗಿದೆ, ಅದರ ಮೂಲಕ, ರೋಗಿಗಳಲ್ಲಿ, ಧರ್ಮಸಭೆಯಲ್ಲಿ ಯಾತನೆ ಅನುಭವಿಸುತ್ತಿರುವ ಕ್ರಿಸ್ತನ ಶರೀರವನ್ನು ಸ್ಪರ್ಶಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಬಾಂಬಿನೋ ಗೆಸು ಆಸ್ಪತ್ರೆಯ ಸಾಧನೆಗಳು
1986ರಲ್ಲಿ ಇಟಲಿಯಲ್ಲಿ ನಡೆದ ಮೊದಲ ಮಕ್ಕಳ ಹೃದಯ ಕಸಿಯಿಂದ (ದಾನಿ ಹೃದಯವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆ) ಪ್ರಾರಂಭಿಸಿ, 2018ರಲ್ಲಿ ಘನ ಗೆಡ್ಡೆಗಳಿಗೆ ಮೊದಲ ಜೀನ್ ಚಿಕಿತ್ಸೆಯವರೆಗೆ, ಅನೇಕ ಕ್ಷೇತ್ರಗಳಲ್ಲಿ ಹಲವು ಮೈಲಿಗಲ್ಲುಗಳನ್ನು ದಾಟಿ ಬಾಂಬಿನೋ ಗೆಸು ಮಕ್ಕಳ ಆಸ್ಪತ್ರೆ ಅನೇಕ ಕುರುಹುಗಳನ್ನು ಬಿಟ್ಟಿದೆ. ಇದರಲ್ಲಿ ಮಂಗಳವಾರ ಉದ್ಘಾಟನೆಯಾದ ಜೀನ್ ಥೆರಪಿ ಪ್ರಯೋಗಾಲಯವೂ ಸೇರಿದೆ, ಇದು ಮಕ್ಕಳ ಆಂಕೊ-ಹೆಮಟೊಲಾಜಿಕಲ್ ಮತ್ತು ಇಮ್ಯುನೊಲಾಜಿಕಲ್ ಕಾಯಿಲೆಗಳ ಸಂಶೋಧನೆ ಹಾಗೂ ಚಿಕಿತ್ಸೆಯಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ.
ಸಾಧನೆಯ ಗುರಿಗಳ ಹಿಂದಿನ ಜನರು
ಸಾಧಿಸಿದ ಪ್ರತಿಯೊಂದು ಗುರಿಯ ಹಿಂದೆಯೂ, ಜನರು, ಕಥೆಗಳು, ಮುಖಗಳು, ಹೊಸ ಭರವಸೆಗಳನ್ನು ಹೊಂದಿರುವ ಮಕ್ಕಳು ಮತ್ತು ಕುಟುಂಬಗಳು, ಪರಿಹಾರಗಳನ್ನು ಕಂಡುಕೊಳ್ಳುವ ಸಂಶೋಧಕರು ಮತ್ತು ವೈದ್ಯರು, ಚಿಕಿತ್ಸಾ ಮಾರ್ಗಗಳನ್ನು ಪರಿವರ್ತಿಸಿದ ಶಿಸ್ತಿನ ಗುಂಪುಗಳಿವೆ ಎಂದು ಕಾರ್ಡಿನಲ್ ಪರೋಲಿನ್ ರವರು ಗಮನಿಸಿದರು. ವಿರಳವಾದ ಕಾಯಿಲೆಗಳು ಅಥವಾ ತೀವ್ರ ವೈದ್ಯಕೀಯ ಪರಿಸ್ಥಿತಿಗಳಿಂದ ಉಂಟಾಗುವ ತೊಂದರೆಗಳನ್ನು ಯಾವುದೇ ಕಾರಣಕ್ಕೂ ವಿಶ್ವಾಸಗುಂದದೇ ಅವುಗಳನ್ನು ಎದುರಿಸಲು" "ಧೈರ್ಯ ಮತ್ತು ದೃಢತೆಯಿಂದ, ಯಾವಾಗಲೂ ಉತ್ತರವನ್ನು ಹುಡುಕುತ್ತಾ" ಅವುಗಳನ್ನು ಎದುರಿಸಲು ವಿದೇಶಾಂಗ ಕಾರ್ಯದರ್ಶಿಯವರು ಒತ್ತಾಯಿಸಿದರು.