ಹುಡುಕಿ

Plenary Assembly of the German Bishops Conference Plenary Assembly of the German Bishops Conference  (ANSA)

ಕ್ರಾಕೋವ್‌ನಲ್ಲಿ ರಕ್ಷಣಾ ಆಯೋಗವು ಸಮಗ್ರ ಸಭೆ ನಡೆಸುತ್ತಿದೆ, 'ಧರ್ಮಸಭೆಯು ಸುರಕ್ಷಿತ ನೆಲೆಯಾಗಲಿ'

ವಿಶ್ವಗುರುಗಳ ಆಯೋಗವು ಪೋಲೆಂಡ್‌ನ ಕ್ರಾಕೋವ್ ನಗರದಲ್ಲಿ ತನ್ನ ಸಮಗ್ರ ಸಭೆಯನ್ನು ನಡೆಸುತ್ತಿದೆ, ಆಯೋಗದ ಹೊಸ ಅಧ್ಯಕ್ಷ ಮಹಾಧರ್ಮಾಧ್ಯಕ್ಷರಾದ ವರ್ನಿರವರು, ಸಂತ್ರಸ್ತರುಗಳ ನೋವನ್ನು ಆಲಿಸುವ ಮತ್ತು ನಿಂದನೆಯನ್ನು ತಡೆಗಟ್ಟುವ ತನ್ನ ಧ್ಯೇಯವನ್ನು ಪುನರುಚ್ಚರಿಸುತ್ತಾರೆ.

ಸಾಲ್ವಟೋರ್ ಸೆರ್ನುಜಿಯೊ

ಧರ್ಮಸಭೆಯು ಹೆಚ್ಚು ಹೆಚ್ಚು ಸುರಕ್ಷಿತ ನೆಲೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸ್ವಾಗತಿಸಿ ಮತ್ತು ಸಂತ್ರಸ್ತರುಗಳ ನೋವನ್ನು ಆಲಿಸಿ, ಸತ್ಯವನ್ನು ಗಮನಿಸಿ ಮತ್ತು ನಿಂದನೆಯನ್ನು ತಡೆಯಿರಿ.

ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ವಿಶ್ವಗುರುಗಳ ಆಯೋಗದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ತಿಬಾಲ್ಟ್ ವರ್ನಿರವರು, ಅದರ ಸಮಗ್ರ ಸಭೆಯ ಆರಂಭದಲ್ಲಿ ಆಯೋಗದ ಧ್ಯೇಯದ ಸಾರಾಂಶವನ್ನು ನೀಡಿದರು.

ಈ ಸಭೆಯು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3 ರವರೆಗೆ ಕ್ರಾಕೋವ್‌ನಲ್ಲಿರುವ ದೈವಿಕ ಕರುಣೆಯ ದೇವಾಲಯದಲ್ಲಿ ನಡೆಯುತ್ತಿದೆ – ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರ, ದೇವರ ಪ್ರೀತಿ- ಹಿಂಸೆ ಮತ್ತು ಅನಿಶ್ಚಿತತೆಯಿಂದ ತುಂಬಿರುವ ಜಗತ್ತಿನಲ್ಲಿ ಹರಡಲಿ ಎಂದು ಪ್ರಾರ್ಥಿಸಿದ ಸ್ಥಳವಾಗಿದೆ. ಒಂದು ಕಾಲದಲ್ಲಿ ದಿವಂಗತ ಪೋಲಿಷ್ ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ - ಕರೋಲ್ ವೊಜ್ಟಿಲಾರವರು ಪೋಷಿಸಿದ ಮಹಾಧರ್ಮಕ್ಷೇತ್ರದಲ್ಲಿ ದೇವರ ಪ್ರೀತಿ ಮತ್ತು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ ಸ್ಥಳವಾಗಿದೆ.

2014ರಲ್ಲಿ ಸ್ಥಾಪನೆಯಾದಾಗಿನಿಂದ, ಆಯೋಗದ ಸಮಗ್ರ ಅಧಿವೇಶನವು ರೋಮ್‌ನ ಹೊರಗೆ ಸಭೆ ಸೇರುತ್ತಿರುವುದು ಇದೇ ಮೊದಲು.

ಅದೇ ಸಮಯದಲ್ಲಿ, ಇದು ಪೋಲೆಂಡ್‌ಗೆ ಮರಳುವಿಕೆಯನ್ನು ಸೂಚಿಸುತ್ತಿದೆ, ಅಲ್ಲಿ ನಾಲ್ಕು ವರ್ಷಗಳ ಹಿಂದೆ ಆಯೋಗವು ಪೋಲಿಷ್ನ ಧರ್ಮಾಧ್ಯಕ್ಷರವರ ಸಹಯೋಗದೊಂದಿಗೆ, ಮಧ್ಯ ಮತ್ತು ಪೂರ್ವ ಯುರೋಪಿನ ಧರ್ಮಸಭೆಗಳಿಗೆ ಮಕ್ಕಳು ಮತ್ತು ದುರ್ಬಲ ವಯಸ್ಕರ ರಕ್ಷಣೆಯ ಕುರಿತು ವಾರ್ಸಾದಲ್ಲಿ ಒಂದು ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು.

2021ರಲ್ಲಿ ಪೋಲಿಷ್ ಧರ್ಮಸಭೆಯಿಂದ ಪ್ರಾರಂಭವಾದ ಸಿನೊಡಲ್ ರಕ್ಷಣೆಯ ಮಾರ್ಗವನ್ನು ಮುಂದುವರಿಸುವುದು ಪೋಲೆಂಡ್‌ನ ಆಯ್ಕೆಗೆ ಮತ್ತೊಮ್ಮೆ ಪ್ರೇರಣೆ ನೀಡಿತು.

ಮಕ್ಕಳು ಮತ್ತು ದುರ್ಬಲರನ್ನು ರಕ್ಷಿಸುವುದು
ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರು ನಮಗೆ ತೋರಿಸಿದ ಮಾರ್ಗವನ್ನು ಅನುಸರಿಸಿ, ಸಾವಿರಾರು ವಿಶ್ವಾಸಭರಿತ ಪುರುಷರು ಮತ್ತು ಮಹಿಳೆಯರ ಹೆಜ್ಜೆಗುರುತುಗಳಲ್ಲಿ ನಾವು ಇಂದು ಇಲ್ಲಿಗೆ ಬಂದಿದ್ದೇವೆ. ಧರ್ಮಸಭೆಯು ಮತ್ತು ಮಾನವೀಯತೆಯ ಕಾಳಜಿಗಳನ್ನು ಕರುಣಾಮಯಿ ಕ್ರಿಸ್ತರಿಗೆ ವಹಿಸಲು ನಾವು ಬಂದಿದ್ದೇವೆ ಎಂದು ಮಹಾಧರ್ಮಾಧ್ಯಕ್ಷರಾದ ಮಾರೆಕ್ ಜೆಡ್ರಾಸ್ಜೆವ್ಸ್ಕಿರವರ ಅಧ್ಯಕ್ಷತೆಯಲ್ಲಿ ನಡೆದ ಆರಂಭಿಕ ದಿವ್ಯಬಲಿಪೂಜೆಯ ಕೊನೆಯಲ್ಲಿ ಮಹಾಧರ್ಮಾಧ್ಯಕ್ಷರಾದ ವರ್ನಿರವರು ತಮ್ಮ ಭಾಷಣದಲ್ಲಿ ಈ ಮಾತುಗಳನ್ನು ಹೇಳಿದರು.

ಫ್ರೆಂಚ್ ಮೂಲದ ಮಹಾಧರ್ಮಾಧ್ಯಕ್ಷರ ಕಳೆದ ಹನ್ನೊಂದು ವರ್ಷಗಳಲ್ಲಿ ಆಯೋಗದ ಸೇವೆಯನ್ನು ಸ್ಮರಿಸಿದರು - ಮೊದಲು ಧರ್ಮಸಭೆಯಲ್ಲಿನ ದುರುಪಯೋಗದ ಪಿಡುಗನ್ನು ಎದುರಿಸಲು ಅದನ್ನು ಸ್ಥಾಪಿಸಿದ ಪೋಪ್ ಫ್ರಾನ್ಸಿಸ್‌ಗೆ ಮತ್ತು ಈಗ ಅವರ ಉತ್ತರಾಧಿಕಾರಿ ಪೋಪ್ XIV ಲಿಯೋರವರ ಆಯೋಗದ ಸೇವೆಯನ್ನು ಸ್ಮರಿಸಿದರು.

ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರ ಪ್ರಾರ್ಥನೆ
ತಮ್ಮ ಭಾಷಣದ ಕೊನೆಯಲ್ಲಿ, ಮಹಾಧರ್ಮಾಧ್ಯಕ್ಷರವರಾದ ವರ್ನಿರವರು ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರ ಮಾತುಗಳನ್ನು ಪ್ರತಿಧ್ವನಿಸಿದರು, ಅವರು "ಲೋಕವು ದೇವರ ಕರುಣಾಮಯ ಪ್ರೀತಿಯನ್ನು ದುಃಖದ ನಡುವೆಯೂ "ಭರವಸೆಯ ಮೂಲವಾಗಿ" ಅನುಭವಿಸಲಿ ಎಂದು ದೇವಾಲಯದಲ್ಲಿ ಪ್ರಾರ್ಥಿಸಿದರು.

ನಿತ್ಯನಾದ ದೇವರೇ... ನಮ್ಮನ್ನು ದಯೆಯಿಂದ ನೋಡು ಮತ್ತು ನಿನ್ನ ಕರುಣೆಯನ್ನು ನಮ್ಮಲ್ಲಿ ಹೆಚ್ಚಿಸು, ಇದರಿಂದ ನಾವು ಕಷ್ಟದ ಕ್ಷಣಗಳಲ್ಲಿ ಹತಾಶರಾಗದೆ ಅಥವಾ ನಿರಾಶೆಗೊಳ್ಳದೆ, ಆದರೆ ಹೆಚ್ಚಿನ ವಿಶ್ವಾಸದಿಂದ ನಿನ್ನ ಪವಿತ್ರ ಚಿತ್ತಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳುವಂತೆ ಮಾಡು" ಎಂದು ಅವರು ಪ್ರಾರ್ಥಿಸಿದರು.
 

01 ಅಕ್ಟೋಬರ್ 2025, 18:58