ವ್ಯಾಟಿಕನ್‌ನಲ್ಲಿ ಅಂತರರಾಷ್ಟ್ರೀಯ ಯುವಜನತೆಯ ಸಲಹಾ ಮಂಡಳಿಯ ಸಭೆ
ವ್ಯಾಟಿಕನ್ ಸುದ್ದಿ
ಅಕ್ಟೋಬರ್ 28 ರಿಂದ 31, 2025 ರವರೆಗೆ, ಅಂತರರಾಷ್ಟ್ರೀಯ ಯುವಜನತೆಯ ಸಲಹಾ ಸಂಸ್ಥೆ (IYAB) ರೋಮ್‌ನಲ್ಲಿನ ಶ್ರೀ-ಸಾಮಾನ್ಯರು, ಕುಟುಂಬ ಮತ್ತು ಜೀವನಕ್ಕಾಗಿ ಡಿಕ್ಯಾಸ್ಟರಿ ಕಚೇರಿಗಳಲ್ಲಿ ಸಭೆ ಸೇರಲಿದೆ. ಐಯಾಬ್ (IYAB) ಒಂದು ಸಲಹಾ ಸಂಸ್ಥೆಯಾಗಿದ್ದು, ಧರ್ಮಸಭೆಯ ಧ್ಯೇಯಕ್ಕೆ ಕೇಂದ್ರವಾಗಿರುವ ವಿವಿಧ ವಿಷಯಗಳ ಕುರಿತು ಯುವಜನತೆಯ ದೃಷ್ಟಿಕೋನಗಳನ್ನು ಪವಿತ್ರ ಪೀಠಾಧಿಕಾರಿಯೆಡೆಗೆ ತರುವುದು ಇದರ ಉದ್ದೇಶವಾಗಿದೆ.
ಸಂಭಾಷಣೆಯ ವಿಷಯಗಳು
ಈ ಸಭೆಯು 2024ರಲ್ಲಿ ನೇಮಕಗೊಂಡ ಯುವಜನತೆಯ ಎರಡನೇ ಗುಂಪಿನ ಸದಸ್ಯರನ್ನು ಒಟ್ಟುಗೂಡಿಸುತ್ತಿದೆ ಮತ್ತು ಕಳೆದ ಡಿಸೆಂಬರ್‌ನಲ್ಲಿ ನಡೆದ ಮೊದಲ ಸಭೆಯ ನಂತರ ಈ ಸಭೆಯ ಕಾರ್ಯಕ್ರಮಗಳು ಮುಂದುವರಿಯುತ್ತಿದೆ. ಈ ನಾಲ್ಕು ದಿನಗಳ ಸಭೆಯಲ್ಲಿ ಹಲವಾರು ವಿಷಯಗಳನ್ನು ಕುರಿತು ಚರ್ಚಿಸಲಾಗುವುದು, 2027ರಲ್ಲಿ ಸಿಯೋಲ್‌ನಲ್ಲಿ ನಡೆಯುವ ವಿಶ್ವ ಯುವಜನತೆಯ ದಿನಾಚರಣೆಯ ಸಿದ್ಧತೆಗಳಿಂದ ಹಿಡಿದು, ಕುಟುಂಬಗಳ ವಿಷಯಗಳಲ್ಲಿ ಯುವಜನತೆಯ ಸುವಾರ್ತಾಪ್ರಚಾರದ ಕುರಿತು ಚಿಂತನೆಗಳು, ಯುವಜನತೆಯ ಸೇವೆ ಮತ್ತು ಕುಟುಂಬ ಸೇವೆಯನ್ನು ಸಂಪರ್ಕಿಸುವ ವಿಧಾನಗಳು, ಇಂದಿನ ಸಾಮಾಜಿಕ ವಿಷಯಗಳಲ್ಲಿ ಕ್ರಿಸ್ಟಸ್ ವಿವಿಟ್ ಎಂಬ ಸಿನೊಡಲ್ ನಂತರದ ಪ್ರೇಷಿತ ಉಪದೇಶದ ಪ್ರಸ್ತುತತೆ ವರೆಗೆ ಚರ್ಚಿಸಲಿದೆ. ಸಭೆಯಲ್ಲಿ 'ಬೋರ್ಗೊ ಲೌಡಾಟೊ ಸಿ' ಗೆ ಭೇಟಿ ನೀಡುವುದು ಕೂಡ ಸೇರಿದೆ.
IYAB ನ ಚಟುವಟಿಕೆಗಳು
2018 ರಿಂದ, ಯುವಜನತೆಯ ಕುರಿತಾದ ಸಿನೊಡ್‌ನ ಅಂತಿಮ ದಾಖಲೆಯ ಸ್ಪಷ್ಟ ವಿನಂತಿಯನ್ನು ಅನುಸರಿಸಿ, ಪ್ರಪಂಚದ ವಿವಿಧ ಪ್ರದೇಶಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಚಳುವಳಿಗಳು, ಸಂಘಗಳು ಮತ್ತು ಸಮುದಾಯಗಳಿಂದ 20 ಯುವಕರು ರೋಮ್ ನ ಕಾರ್ಯಾಲಯಕ್ಕೆ ವಿಶ್ವಗುರುಗಳ ಸಹಯೋಗಿಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಯುವಜನತೆಯ ಸೇವಾ ಕಾರ್ಯ ಮತ್ತು ಸಾಮಾನ್ಯ ಆಸಕ್ತಿಯ ಇತರ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಅನ್ವೇಷಿಸಲು ಅವರು ಸಿನೊಡಲ್ ಶೈಲಿಯನ್ನು ಬಳಸುತ್ತಾರೆ. ಯುವಜನರ "ವಕ್ತಾರರಾಗಿ”, IYAB ಶ್ರೀ-ಸಾಮಾನ್ಯರು, ಕುಟುಂಬ ಮತ್ತು ಜೀವನಕ್ಕಾಗಿ ಡಿಕ್ಯಾಸ್ಟರಿಯನ್ನು, ಹಾಗೆಯೇ ಅದರ ಸಲಹೆಯನ್ನು ಕೋರುವ ಇತರ ಡಿಕ್ಯಾಸ್ಟರಿಗಳನ್ನು, ಯುವಜನತೆಯ ಪರವಾಗಿ, ವಿಶೇಷವಾಗಿ ಅತ್ಯಂತ ದುರ್ಬಲರು, ಬಡವರು ಅಥವಾ ಒಂಟಿಯಾಗಿರುವವರ ಪರವಾಗಿ, ಆದರೆ ಅಂಚಿನಲ್ಲಿ ವಾಸಿಸುವ ಅಥವಾ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿರುವ ಎಲ್ಲರ ಪರವಾಗಿ ಸಲಹಾ ಮತ್ತು ಪೂರ್ವಭಾವಿ ಬೆಂಬಲವನ್ನು ನೀಡುತ್ತದೆ.