ಹುಡುಕಿ

Assisi, Economy of Francesco presentazione Assisi, Economy of Francesco presentazione 

ಆರ್ಥಿಕತೆಯನ್ನು ಪುನರಾರಂಭಿಸುವುದು: ಜ್ಯೂಬಿಲಿಯ ಬೆಳಕಿನಲ್ಲಿ ಅರ್ಥಶಾಸ್ತ್ರದ ಪುನರ್ವಿಮರ್ಶೆ

ನವೆಂಬರ್ 28ರಿಂದ 30ರವರೆಗೆ, ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ, "ಆರ್ಥಿಕತೆಯನ್ನು ಪುನರಾರಂಭಿಸುವುದು" ಎಂಬ ಜಾಗತಿಕ ಸಭೆಯು "ಫ್ರಾನ್ಸೆಸ್ಕೊದ ಆರ್ಥಿಕತೆಯಿಂದ" ಪ್ರಚಾರಗೊಳ್ಳುತ್ತಿದೆ. ಜ್ಯೂಬಿಲಿ ಹಬ್ಬದ ಹಿನ್ನೆಲೆಯಲ್ಲಿ ಆರ್ಥಿಕತೆಯನ್ನು ಪುನರ್ವಿಮರ್ಶಿಸುವುದು, ಸಾಮಾಜಿಕ ನ್ಯಾಯ, ಭೂಮಿಯ ಬಗ್ಗೆ ಕಾಳಜಿ ಮತ್ತು ಸಾಲದಿಂದ ಮುಕ್ತಿ ನೀಡುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ.

ಲುಕಾ ಇಯಾಕೋವೋನ್

ಆರ್ಥಿಕತೆ ನಿಂತಾಗ ಏನಾಗುತ್ತದೆ? ನಾವು ಸ್ಟಾಕ್ ಸೂಚ್ಯಂಕಗಳು ಅಥವಾ ಸ್ಥೂಲ ಆರ್ಥಿಕ ದತ್ತಾಂಶಗಳ ಬಗ್ಗೆ ಮಾತನಾಡುತ್ತಿಲ್ಲ, ಆದರೆ ನಮ್ಮ ಆರ್ಥಿಕ ವ್ಯವಸ್ಥೆಗಳ ಆಳವಾದ ದೃಷ್ಟಿಕೋನದ ಬಗ್ಗೆ, ನಾವು ಅವುಗಳಿಗೆ ನಿಗದಿಪಡಿಸುವ ಅರ್ಥ ಹಾಗೂ ನಮ್ಮನ್ನು ಕರೆದೊಯ್ಯುವ ದಿಕ್ಕಿನ ಬಗ್ಗೆ ಮಾತಾಡುತ್ತದೆ.

ನಿಲ್ಲಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲದಂತೆ ಕಾಣಿಸಬಹುದು. ಆದರೂ, ಪವಿತ್ರಗ್ರಂಥದ ಜ್ಯೂಬಿಲಿ ನಮಗೆ ಹೀಗೆ ಹೇಳುತ್ತದೆ, ಮಾಲೀಕತ್ವದ ಕಾರ್ಯವಿಧಾನಗಳಿಗೆ ಅಡ್ಡಿಯಾಗುವ, ಸಾಲಗಳನ್ನು ಮನ್ನಾ ಮಾಡುವುದು, ಗುಲಾಮರನ್ನು ಮುಕ್ತಗೊಳಿಸುವ ಸಮಯವಾಗಿದೆ ಎಂದು ಹೇಳುತ್ತದೆ.

ಭೂಮಿಯ ಕುರಿತು ಕಾಳಜಿವಹಿಸುವಲ್ಲಿ ನಿಧಾನಗೊಳಿಸುವ ಶ್ರಮವನ್ನು ಆಯಾಸದಿಂದ ಮುಕ್ತಗೊಳಿಸುವ, ಆರ್ಥಿಕತೆಯು, ಸಾಲವನ್ನು ಶಿಕ್ಷೆಯಾಗಿ ನೋಡದೆ ವಾಸಿಯಾಗಬೇಕಾದ ಗಾಯವಾಗಿ ನೋಡುತ್ತಿದೆ. ಬೆಳವಣಿಗೆಯಲ್ಲಿ ಮಾತ್ರವಲ್ಲದೆ, ಸಹಿಸಿಕೊಳ್ಳುವ, ಹಂಚಿಕೊಳ್ಳುವ, ಬಿಟ್ಟುಕೊಡುವ ಸಾಮರ್ಥ್ಯದಲ್ಲಿ ಅದನ್ನು ಪರೀಕ್ಷಸಲ್ಪಡುವ ಮೌಲ್ಯವನ್ನು ಮರುಶೋಧಿಸುವ ಆರ್ಥಿಕತೆಯಾಗಿದೆ.

ನವೆಂಬರ್ 28ರಿಂದ 30ರವರೆಗೆ, ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ, "ಆರ್ಥಿಕತೆಯನ್ನು ಪುನರಾರಂಭಿಸುವುದು" ಎಂಬ ಜಾಗತಿಕ ಸಭೆಯು "ಫ್ರಾನ್ಸೆಸ್ಕೊದ ಆರ್ಥಿಕತೆಯಿಂದ" ಪ್ರಚಾರಗೊಳ್ಳುತ್ತಿದೆ.

ಫ್ರಾನ್ಸೆಸ್ಕೊವಿನ ಆರ್ಥಿಕತೆ ಯುವ ಅರ್ಥಶಾಸ್ತ್ರಜ್ಞರು, ಉದ್ಯಮಿಗಳು ಮತ್ತು ಬದಲಾವಣೆ ತರುವವರ ಅಂತರರಾಷ್ಟ್ರೀಯ ಜಾಲವಾಗಿದ್ದು, ವಿಶ್ವಗುರು ಫ್ರಾನ್ಸಿಸ್ ರವರ ಆಹ್ವಾನದ ಮೇರೆಗೆ 2019ರಲ್ಲಿ ಪ್ರಾರಂಭವಾಯಿತು. ಇದು ನಿಜವಾದ, ಸ್ಥಳೀಯ ಅನುಭವದಿಂದ ಪ್ರಾರಂಭಿಸಿ, ಹೆಚ್ಚು ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಆರ್ಥಿಕತೆಯನ್ನು ನಿರ್ಮಿಸಲು ಬದ್ಧರಾಗಿರುವ ಪ್ರತಿಯೊಂದು ಖಂಡದ ಜನರನ್ನು ಒಟ್ಟುಗೂಡಿಸುತ್ತದೆ.

ಪ್ರತಿಯೊಂದು ಧ್ವನಿಯೂ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ, ಆದರೆ ಅವೆಲ್ಲವೂ ಒಂದೇ ಅಂತಃಪ್ರಜ್ಞೆಯಿಂದ ಹುಟ್ಟಿಕೊಳ್ಳುತ್ತವೆ, ಜ್ಯೂಬಿಲಿಯು ತನ್ನ ಪ್ರಾಚೀನ ಸಂಕೇತಗಳೊಂದಿಗೆ ಇಂದಿನ ಬಿಕ್ಕಟ್ಟುಗಳನ್ನು ನಿಭಾಯಿಸಲು ಹೊಸ ನಿರ್ದೇಶಾಂಕಗಳನ್ನು ನೀಡುತ್ತದೆ. ಪರಿಸರದ ನ್ಯಾಯದಿಂದ ಹಿಡಿದು ಶ್ರಮದ ಘನತೆಯವರೆಗೆ, ಸಾಲ ಪರಿಹಾರದಿಂದ ಮಿತಿಗಳ ಆಧ್ಯಾತ್ಮಿಕತೆಯವರೆಗೆ, ಪ್ರತಿಯೊಂದು ಸಂಪಾದಕೀಯವು ಆರ್ಥಿಕ ವಿವೇಚನೆಯಲ್ಲಿ ಒಂದು ಸಣ್ಣ ವ್ಯಾಯಾಮವಾಗಿರುತ್ತದೆ.

ಒಂದೇ ಒಂದು ಪರಿಪೂರ್ಣ ಆರ್ಥಿಕತೆ ಇಲ್ಲದಿರಬಹುದು, ಆದರೆ ನ್ಯಾಯದ ಕಡೆಗೆ ಅದನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುವ ಕೆಲವು ಚಿಹ್ನೆಗಳಿವೆ. ಕೊನೆಯಲ್ಲಿ, ಜ್ಯೂಬಿಲಿಯು ನಮಗೆ ನೆನಪಿಸುವುದು ಇದನ್ನೇ, ಆರ್ಥಿಕತೆ ನಿಲ್ಲಿಸುವುದು ಸಮಯ ವ್ಯರ್ಥವಲ್ಲ, ಅದು ಆಯ್ಕೆಯ ಆರಂಭವಾಗಿದೆ..
 

04 ನವೆಂಬರ್ 2025, 18:36