ಹುಡುಕಿ

ಕಾಡಿ೯ನಲ್ ಪ್ಯಾರೋಲಿನ್ ಪವಿತ್ರ ಬಲಿಪೂಜೆಯ ಅದ್ಯಕ್ಷತೆ ವಹಿಸಿದರು ಕಾಡಿ೯ನಲ್ ಪ್ಯಾರೋಲಿನ್ ಪವಿತ್ರ ಬಲಿಪೂಜೆಯ ಅದ್ಯಕ್ಷತೆ ವಹಿಸಿದರು 

‘ನಿಜಕ್ಕೂ ಐತಿಹಾಸಿಕ’: ಕುವೈಟ್‌ನ ಮೊದಲ ಚರ್ಚ್‌ನ್ನು ಮೈನರ್ ಬಾಸಿಲಿಕಾ ಸ್ಥಾನಕ್ಕೆ ಉತ್ತೀರ್ಣಗೊಳಿಸಲಾಗಿದೆ

ಕಾರ್ಡಿನಲ್ ಕಾರ್ಯದರ್ಶಿ ಪಿಯೇತ್ರೋ ಪ್ಯಾರೊಲಿನ್ ರವರು ಕುವೈಟ್‌ನ ಅರೇಬಿಯಾ ಮಾತೆಯ ಚರ್ಚ್‌ನಲ್ಲಿ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಿ, ಅದನ್ನು ಅಧಿಕೃತವಾಗಿ ಮೈನರ್ ಬಾಸಿಲಿಕಾ ಸ್ಥಾನಕ್ಕೆ ಉತ್ತೀರ್ಣಗೊಳಿಸಿದರು. ಮರುಭೂಮಿಯ ಮರಳುಗಳ ಮೇಲೆ ನಿರ್ಮಿಸಲಾದ ಈ ದೇವಾಲಯವು, “ಮರಿಯಮ್ಮನವರು ಸ್ವತಃ ಒಮ್ಮೆ ಅದೇ ಮರುಭೂಮಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ” ಎಂಬುದನ್ನು ನೆನಪಿಸುವ ಸಂಕೇತವಾಗಿದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

1948ರಲ್ಲಿ, ಕುವೈಟ್‌ನ ಬೆಳೆಯುತ್ತಿರುವ ತೈಲ ಉದ್ಯಮದಲ್ಲಿ ಕೆಲಸ ಮಾಡಲು ಇತ್ತೀಚೆಗೆ ಬಂದಿದ್ದ ಕೆಲವು ವಿದೇಶಿ ಕಥೋಲಿಕ ವಿಶ್ವಾಸಿಗಳು ಅಲ್–ಅಹ್ಮದಿಯಲ್ಲಿ ಒಂದು ಸಣ್ಣ ಚಾಪೆಲ್ ಅನ್ನು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಅದೇ ಸ್ಥಳದಲ್ಲಿ ಒಂದು ಚರ್ಚ್ ನಿರ್ಮಿಸಲಾಯಿತು. ಈ ಚರ್ಚ್‌ನಲ್ಲಿ ಜಗದ್ಗುರುಗಳೆ ಆಶೀರ್ವದಿಸಿದ ಪರಿಶುದ್ಧ ಕನ್ಯಾ ಮರಿಯಮ್ಮನವರ ಚಿತ್ರವನ್ನು ಅಳವಡಿಸಲಾಗಿತ್ತು. ತೈಲ ಉದ್ಯಮದ ವಿಸ್ತಾರದೊಂದಿಗೆ ವಿದೇಶಿ ಕಾರ್ಮಿಕರ ಸಂಖ್ಯೆ ಹೆಚ್ಚಿದಂತೆ,  ಅರೇಬಿಯಾ ಮಾತೆಗೆ ಅರ್ಪಿತವಾದ ಈ ಚರ್ಚ್‌ನ ಮಹತ್ವವೂ ಕ್ರಮೇಣ ಹೆಚ್ಚುತ್ತಾ ಹೋಯಿತು.

2026ರ ಜನವರಿ 16ರಂದು, ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೇತ್ರೋ ಪ್ಯಾರೊಲಿನ್ ರವರು ಈ ಚರ್ಚ್‌ನ್ನು ಮೈನರ್ ಬಾಸಿಲಿಕಾ ಸ್ಥಾನಕ್ಕೆ ಉತ್ತೀರ್ಣಗೊಳಿಸುವ ಐತಿಹಾಸಿಕ ಬಲಿ ಪೂಜೆಯನ್ನು ನೆರವೇರಿಸಿದರು. ಸ್ಥಳೀಯ ಕಥೋಲಿಕ ವಿಶ್ವಾಸಿಗಳು, ರಾಜಕೀಯ ನಾಯಕರು, ರಾಜತಾಂತ್ರಿಕರು ಮತ್ತು ಕುವೈಟ್ ಆಯಿಲ್ ಕಂಪನಿಯ ಪ್ರತಿನಿಧಿಗಳ ಸಮ್ಮುಖದಲ್ಲಿ ಮಾತನಾಡಿದ ಅವರು, ಈ ದಿನವನ್ನು “ಕುವೈಟ್‌ನ ಚರ್ಚ್‌ಗೆ ಮಾತ್ರವಲ್ಲ, ಸಂಪೂರ್ಣ ಅರೇಬಿಯನ್ ಉಪಖಂಡದ ಚರ್ಚ್‌ಗೆ ನಿಜಕ್ಕೂ ಐತಿಹಾಸಿಕ ದಿನ” ಎಂದು ವರ್ಣಿಸಿದರು.

ಮರುಭೂಮಿಯ ಮರಳುಗಳ ಮೇಲೆ ನಿರ್ಮಿಸಲಾದ ಈ ಬಾಸಿಲಿಕಾ, ಎಂದು ಕಾರ್ಡಿನಲ್ ಹೇಳಿದರು, ಮರಿಯಮ್ಮನವರು ಸ್ವತಃ  ಇಂತಹ ಮರುಭೂಮಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದನ್ನು ನಮಗೆ ನೆನಪಿಸುತ್ತದೆ. ಅಲ್ಲಿ ಆಕೆ ದೇವರು ಮತ್ತು ಮಾನವಕುಲದ ಮಧ್ಯಸ್ಥರಾಗಿ ಯೇಸು ಕ್ರಿಸ್ತನನ್ನು ಪೋಷಿಸಿ, ಬೆಳೆಸಿ, ರಕ್ಷಿಸಿದ್ದಾರೆ.ಈ ಮಾತುಗಳು ಧರ್ಮ ಸಭೆಯ ಆತ್ಮೀಯ ಅರ್ಥವನ್ನು ಇನ್ನಷ್ಟು ಗಾಢಗೊಳಿಸಿದವು.

ಆ ದಿನದ ಸುವಾರ್ತೆಯನ್ನು ಆಧರಿಸಿ ಮಾತನಾಡಿದ ಕಾರ್ಡಿನಲ್ ಪ್ಯಾರೊಲಿನ್, ಯೇಸು ತನ್ನ ಶಿಷ್ಯರನ್ನು ಕೇಳಿದ ನಿರ್ಣಾಯಕ ಪ್ರಶ್ನೆಯನ್ನು ಸ್ಮರಿಸಿದರು. ಮಾನವರು ಮಾನವಕುಮಾರನನ್ನು ಯಾರು ಎಂದು ಹೇಳುತ್ತಾರೆ? ಕ್ರೈಸ್ತರು ಯೇಸು ಕ್ರಿಸ್ತನು ನಿಜವಾದ ದೇವರು ಮತ್ತು ನಿಜವಾದ ಮಾನವ ಎಂಬ ಸತ್ಯಕ್ಕೆ ಸಾಕ್ಷಿಯಾಗಬೇಕು ಎಂದು ಅವರು ಒತ್ತಿ ಹೇಳಿದರು. ಯೇಸುವಿನ ನಿಜವಾದ ಗುರುತನ್ನು ಅರಿಯದೆ ಆತನನ್ನು ನಮ್ಮ ಜೀವನದಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಪ್ರಭೋದನೆಯ ಅಂತ್ಯದಲ್ಲಿ, ಕಾರ್ಡಿನಲ್ ಪ್ಯಾರೊಲಿನ್ ರವರು  ಅರೇಬಿಯಾದ ಮಾತೆಯ ಮಧ್ಯಸ್ಥಿಕೆಯನ್ನು ಬೇಡಿದರು. ಅವರು ಸದಾ ನಮ್ಮನ್ನು ತಮ್ಮ ಪುತ್ರನಾದ ಯೇಸುವಿನ ಕಡೆಗೆ ನಡೆಸಲಿ ಎಂದು ಪ್ರಾರ್ಥಿಸಿದರು. ಕುವೈಟ್ ರಾಷ್ಟ್ರದ ರಕ್ಷಣೆ, ಅದರ ನಾಗರಿಕರು ಮತ್ತು ಎಲ್ಲಾ ಕ್ರೈಸ್ತರನ್ನು ಅವರು ಕನ್ಯಾ ಮರಿಯಮ್ಮನವರಿಗೆ ಸಮರ್ಪಿಸಿದರು.

16 ಜನವರಿ 2026, 17:26