ಹುಡುಕಿ

ಕಾಡಿ೯ನಲ್ ಮಹಾ ಧಮಾ೯ಧ್ಯಕ್ಷ ಮೌರೊ ಗ್ಯಾಂಬೆಟ್ಟಿರವರು ಸಂತ ಪೇತ್ರರ ಬಸಿಲಿಕಾದಲ್ಲಿ ಪವಿತ್ರ ಬಾಗಿಲನ್ನು ಮುಚ್ಚುವ ವಿಧಿವಿಧಾನಕ್ಕೆ ಅಧ್ಯಕ್ಷತೆ ವಹಿಸುತ್ತಾರೆ. ಕಾಡಿ೯ನಲ್ ಮಹಾ ಧಮಾ೯ಧ್ಯಕ್ಷ ಮೌರೊ ಗ್ಯಾಂಬೆಟ್ಟಿರವರು ಸಂತ ಪೇತ್ರರ ಬಸಿಲಿಕಾದಲ್ಲಿ ಪವಿತ್ರ ಬಾಗಿಲನ್ನು ಮುಚ್ಚುವ ವಿಧಿವಿಧಾನಕ್ಕೆ ಅಧ್ಯಕ್ಷತೆ ವಹಿಸುತ್ತಾರೆ.  (AFP or licensors)

ಸೇಂಟ್ ಪೀಟರ್ ಬಸಿಲಿಕಾದ ಪವಿತ್ರ ಬಾಗಿಲು ಭವ್ಯ ವಿಧಿಯಲ್ಲಿ ಮುಚ್ಚಲ್ಪಟ್ಟಿತು

ಸೇಂಟ್ ಪೀಟರ್ ಬಸಿಲಿಕಾದ ಮಹಾಯಾಜಕ (ಆರ್ಚ್‌ಪ್ರಿಸ್ಟ್) ಮತ್ತು ಜಗದ್ಗುಗಳ ಆರಾಧನವಿಧಿ ಆಚರಣೆಗಳ ಮಹಾಗುರುಗಳು ಪವಿತ್ರ ಬಾಗಿಲನ್ನು ಮುಚ್ಚುವ ವಿಧಿಯನ್ನು ಅಧ್ಯಕ್ಷತೆ ವಹಿಸಿ ನೆರವೇರಿಸಿದರು ಇದರಿಂದ ಜ್ಯೂಬಿಲಿ ಆಚರಣೆಗಳ ಕೊನೆಯ ವಿಧಿಯನ್ನು ವಿಧಿವಿಧಾನಾತ್ಮಕವಾಗಿ ಗುರುತಿಸಲಾಯಿತು.

ವ್ಯಾಟಿಕನ್ ವರದಿ

ಹತ್ತು ದಿನಗಳ ಹಿಂದಷ್ಟೇ, ಜಗದ್ಗುರು XIVನೇ ಲಿಯೋ ರವರು ಸೇಂಟ್ ಪೀಟರ್ ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚಿದರು ಇದು ಪ್ರಮುಖ ನಾಲ್ಕು ಜಗದ್ಗುರುಗಳ ಬಸಿಲಿಕಾಗಳಲ್ಲಿನ ಕೊನೆಯ ಪವಿತ್ರ ಬಾಗಿಲಾಗಿತ್ತು.

ಶುಕ್ರವಾರ ಸಂಜೆ ನಡೆದ ಖಾಸಗಿ ವಿಧಿಯಲ್ಲಿ, ಸೇಂಟ್ ಪೀಟರ್ ಬಸಿಲಿಕಾದ ಮಹಾಧ್ಯಕ್ಷರಾದ ಕಾರ್ಡಿನಲ್ ಮೌರೋ ಗ್ಯಾಂಬೆಟ್ಟಿ ರವರು, ಜಗದ್ಗುರುಗಳ ಆರಾಧನ ವಿಧಿಯ ಆಚರಣೆಗಳ ಮಹಾಗುರುಗಳಾದ ಆರ್ಚ್‌ಬಿಷಪ್ ಡಿಯೆಗೋ ಜಿಯೋವಾನ್ನಿ ರವೆಲ್ಲಿ ರವರೊಂದಿಗೆ ಸೇರಿ, ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚುವ ವಿಧಿಗೆ ಅಧ್ಯಕ್ಷತೆ ವಹಿಸಿದರು.

ಜ್ಯೂಬಿಲಿ ಅವಧಿಯಲ್ಲಿ ಪವಿತ್ರ ಬಾಗಿಲಿನ ಮೂಲಕ ಹಾದುಹೋದ ಲಕ್ಷಾಂತರ ಯಾತ್ರಿಕರನ್ನು ಸ್ಮರಿಸುತ್ತಾ, ಕಾರ್ಡಿನಲ್ ರವರು ಅವರಿಗಾಗಿ ಸಂಕ್ಷಿಪ್ತ ಆರಂಭಿಕ ಪ್ರಾರ್ಥನೆಯನ್ನು ಅರ್ಪಿಸಿದರು. ಅವರು ಯಾತ್ರಿಕರು ವಿಶ್ವಾಸದಲ್ಲಿ ದೃಢರಾಗಿಯೇ ಉಳಿದು, ಪೇತ್ರನ ಉತ್ತರಾಧಿಕಾರಿಯೊಂದಿಗೆ ಐಕ್ಯತೆಯಲ್ಲಿ ಇರಲಿ ಎಂದು ದೇವರನ್ನು ಬೇಡಿದರು.

ಕಾರ್ಡಿನಲ್ ಗ್ಯಾಂಬೆಟ್ಟಿ ಪವಿತ್ರ ಬಾಗಿಲಿನಲ್ಲಿ ಕಂಚಿನ “ಕಾಪ್ಸಾ"ವನ್ನು ಇರಿಸುತ್ತಾರೆ.

ಮುಚ್ಚುವ ವಿಧಿ

ಸೇಂಟ್ ಪೀಟರ್ ಫ್ಯಾಬ್ರಿಕ್‌ಗೆ ಸೇರಿದ “ಸಾಂಪಿಯೇತ್ರಿನಿ” ಎಂದು ಕರೆಯಲ್ಪಡುವ ಕಾರ್ಮಿಕರು ಅಥವಾ ಕರಕುಶಲಕಾರರು, ಬಸಿಲಿಕಾದ ಒಳಭಾಗದಲ್ಲಿ ಸುಮಾರು 3,200 ಇಟ್ಟಿಗೆಗಳಿಂದ ಒಂದು ಗೋಡೆಯನ್ನು ನಿರ್ಮಿಸಿ ಪವಿತ್ರ ಬಾಗಿಲನ್ನು ಮುಚ್ಚಿದರು.

ಆ ಗೋಡೆಯೊಳಗೆ ಈ ವಿಶೇಷ ಸಂದರ್ಭಕ್ಕಾಗಿ ತಯಾರಿಸಲಾದ ಕಂಚಿನ “ಕಾಪ್ಸಾ” (ಒಂದು ಪಾತ್ರೆ/ಪೆಟ್ಟಿಗೆ)ಯನ್ನು ಇರಿಸಲಾಯಿತು. ಈ “ಕಾಪ್ಸಾ” ಮೇಲೆ 2025ರ ಸಾಮಾನ್ಯ ಜ್ಯೂಬಿಲಿಯನ್ನು ಆರಂಭಿಸಿದ ಜಗದ್ಗುರು ಫ್ರಾನ್ಸಿಸ್ ರವರ ಹಾಗೂ ಅದನ್ನು ಮುಕ್ತಾಯಗೊಳಿಸಿದ ಜಗದ್ಗುರು ಲಿಯೋ ರವರ ಚಿಹ್ನೆಗಳು ಕೆತ್ತಲಾಗಿವೆ.

ಈ “ಕಾಪ್ಸಾ”ದೊಳಗೆ ಪವಿತ್ರ ವರ್ಷ, ಇಬ್ಬರು ಜಗದ್ಗುರುಗಳು ಹಾಗೂ 2016ರ ಜ್ಯೂಬಿಲಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು ಇಡಲಾಗಿದೆ. ಅವುಗಳಲ್ಲಿ:

– ಸೇಂಟ್ ಪೀಟರ್ ಬಸಿಲಿಕಾದ ಪವಿತ್ರ ಬಾಗಿಲಿನ ತೆರೆಯುವಿಕೆ ಮತ್ತು ಮುಚ್ಚುವಿಕೆಯನ್ನು ದೃಢಪಡಿಸುವ ಪಾರ್ಚ್ಮೆಂಟ್ ಹೊಂದಿರುವ ಲೋಹದ ಪೆಟ್ಟಿಗೆ;

ಜಗದ್ಗರು XIVನೇ ಲಿಯೋರವರ ಹುದ್ದೆಯ ಮೊದಲ ವರ್ಷದ ಎರಡು ಪದಕಗಳು;

ಜಗದ್ಗರು ಫ್ರಾನ್ಸಿಸ್ ರವರ ಹುದ್ದೆಯ ಅಂತಿಮ ವರ್ಷದ ಒಂದು ಪದಕ

2016ರ ಕರುಣೆಯ ಜ್ಯೂಬಿಲಿಯಿಂದ 2025ರ ನಿರೀಕ್ಷೆಯ ಜ್ಯೂಬಿಲಿವರೆಗೆ ಇರುವ ದಶಕವನ್ನು ಸ್ಮರಿಸುವ ಇತರ ಪದಕಗಳು

2025ರ ಸೆದೆ ವಾಕಾಂತೆ (ಪಾಪಲ್ ಸ್ಥಾನ ಖಾಲಿ ಇರುವ ಅವಧಿ)ಯನ್ನು ಗುರುತಿಸುವ ಒಂದು ಪದಕ ಸೇರಿವೆ.

ಕಾಪ್ಸಾದೊಳಗೆ ಇರಿಸಲಾದ ವಸ್ತುಗಳು

ಈ ಕಂಚಿನ ಪೆಟ್ಟಿಗೆಯನ್ನು ನಂತರ ಸೀಸದಿಂದ ತಯಾರಿಸಿದ ಇನ್ನೊಂದು ಪೆಟ್ಟಿಗೆಯೊಳಗೆ ಇರಿಸಿ, ಅದನ್ನು ಮುಚ್ಚಿ ಮುದ್ರಿಸಲಾಯಿತು.

ಈ ಹಂತದಲ್ಲಿ, ಮಹಾಧ್ಯಕ್ಷರಾದ ಕಾರ್ಡಿನಲ್ ಗ್ಯಾಂಬೆಟ್ಟಿ ಮತ್ತು ಆಚರಣೆಗಳ ಮಹಾಗುರುಗಳು ವಿಧಿವಿಧಾನಾತ್ಮಕವಾಗಿ ಎರಡು ಇಟ್ಟಿಗೆಗಳನ್ನು ಇಟ್ಟು, ಪವಿತ್ರ ಬಾಗಿಲನ್ನು ಮುಚ್ಚುವ ವಿಧಿಯ ಅಂತಿಮ ಹಂತವನ್ನು ಗುರುತಿಸಿದರು.

ನಂತರ ಈ ಇಬ್ಬರು ಧರ್ಮಾಧ್ಯಕ್ಷರು ಕರ್ತನ ಪ್ರಾರ್ಥನೆಯನ್ನು ಪಠಿಸಿ, ಅಂತಿಮ ಆಶೀರ್ವಾದವನ್ನು ನೀಡಿ, ನಿರೀಕ್ಷೆಯ ಜ್ಯೂಬಿಲಿ ವರ್ಷದ ಕೊನೆಯ ವಿಧಿಗಳನ್ನು ಮುಕ್ತಾಯಗೊಳಿಸಿದರು.

16 ಜನವರಿ 2026, 00:00