ಹುಡುಕಿ

2025.10.09 Monsignor Gabriele Caccia

ಜಗದ್ಗರುಗಳ ಅಧಿಕಾರ ಹುದ್ದೆ: ಯುದ್ಧ ಅಪರಾಧಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳು ಅಗತ್ಯ

ಸಂಯುಕ್ತ ರಾಷ್ಟ್ರಗಳ ಬಳಿಯಲ್ಲಿ ಜಗದ್ಗುರುಗಳ ಅಧಿಕಾರ ಹುದ್ದೆಯ ಶಾಶ್ವತ ವೀಕ್ಷಕರಾದ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೆಲೆ ಕಚ್ಚಿಯಾ ರವರು, ಮಾನವತೆಯ ವಿರುದ್ಧದ ಅಪರಾಧಗಳಿಗೆ ಪರಿಣಾಮಕಾರಿ ಮತ್ತು ದೀರ್ಘಕಾಲಿಕ ಪ್ರತಿಕ್ರಿಯೆಯನ್ನು ರೂಪಿಸುವುದಕ್ಕಾಗಿ ಸಕಾರಾತ್ಮಕ ಹಾಗೂ ನಿರ್ಮಾಣಾತ್ಮಕ ಸಂವಾದದ ಮಹತ್ವವನ್ನು ಒತ್ತಿಹೇಳಿದ್ದಾರೆ.

ವ್ಯಾಟಿಕನ್ ವರದಿ

ಸಂಯುಕ್ತ ರಾಷ್ಟ್ರಗಳ ಅಧೀನದಲ್ಲಿ ನಡೆಯುವ ಮಾನವತೆಯ ವಿರುದ್ಧದ ಅಪರಾಧಗಳ ತಡೆ ಮತ್ತು ಶಿಕ್ಷೆ ಕುರಿತ ಯುಎನ್ ಸಮ್ಮೇಳನದ ಪೂರ್ವಸಿದ್ಧತಾ ಸಮಿತಿಯಲ್ಲಿ, ಜಗದ್ಗುರುಗಳ ಅಧಿಕಾರ ಹುದ್ದೆಯ ಶಾಶ್ವತ ವೀಕ್ಷಕರಾದ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೆಲೆ ಕಚ್ಚಿಯಾ ರವರು ಮಾತನಾಡಿದರು. ತಮ್ಮ ಭಾಷಣದಲ್ಲಿ, ಮಾನವ ಜೀವದ ಪವಿತ್ರತೆಗೆ ನಡೆಯುತ್ತಿರುವ ಉಲ್ಲಂಘನೆಗಳು ಇನ್ನೂ ಮುಂದುವರಿಯುತ್ತಿದ್ದು, ಅನೇಕ ಸಂದರ್ಭಗಳಲ್ಲಿ ಅವು ಹೆಚ್ಚಾಗುತ್ತಿರುವುದು ಗಂಭೀರ ಚಿಂತೆಗೀಡು ಮಾಡುತ್ತಿದೆ ಎಂದು ಅವರು ಹೇಳಿದರು.

ಪರಿಣಾಮಕಾರಿ ಸಾಮೂಹಿಕ ಪ್ರತಿಕ್ರಿಯೆಗಳ ಕೊರತೆಯು ಭಾರೀ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ಅವರು ಎಚ್ಚರಿಸಿದರು. ಅದರ ಪರಿಣಾಮವಾಗಿ ಮಕ್ಕಳು, ಮಹಿಳೆಯರು ಹಾಗೂ ಜಾತಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಹಿಂಸೆ, ಹಿಂಸಾಚಾರ ಮತ್ತು ಮರಣವನ್ನು ಅನುಭವಿಸುತ್ತಿದ್ದು, ಇದು ಮಾನವ ಘನತೆಯನ್ನು ಹಾಗೂ ಮಾನವಕುಲದ ನೈತಿಕ ಅಂತಃಕರಣವನ್ನು ಆಳವಾಗಿ ಗಾಯಗೊಳಿಸುತ್ತಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲೇ, ಜಗದ್ಗುರುಗಳ ಅಧಿಕಾರ ಹುದ್ದೆಯ ಪೂರ್ವಸಿದ್ಧತಾ ಸಮಿತಿಯ ಕಾರ್ಯವನ್ನು ಸ್ವಾಗತಿಸುತ್ತಿದ್ದು, ಮಾನವತೆಯ ಮುಂದಿರುವ ಅತ್ಯಂತ ಗಂಭೀರ ಸವಾಲುಗಳಲ್ಲಿ ಒಂದನ್ನು ಎದುರಿಸಲು ಇದು ನೀಡುತ್ತಿರುವ ಅವಕಾಶವನ್ನು ಮೆಚ್ಚಿಕೊಳ್ಳುತ್ತದೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಅಪರಾಧಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಮುಖ್ಯವಲ್ಲ ಅವು ನಡೆಯದಂತೆ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ರೂಪಿಸುವುದು ಹಾಗೂ ಅವು ಸಂಭವಿಸಿದಾಗ ಹೊಣೆಗಾರಿಕೆಯನ್ನು ಖಚಿತಪಡಿಸುವುದೇ ಮುಖ್ಯ ಪ್ರಶ್ನೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯುದ್ಧ ಅಪರಾಧಗಳು ರೂಢಿಬದ್ಧ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನಿಷೇಧಿತವಾಗಿವೆ ಎಂಬುದರಲ್ಲಿ ಸಾಮಾನ್ಯ ಒಪ್ಪಂದವಿದ್ದು, ಭವಿಷ್ಯದ ಯಾವುದೇ ಅಂತರರಾಷ್ಟ್ರೀಯ ವ್ಯವಸ್ಥೆ ಅಂತರರಾಷ್ಟ್ರೀಯ ಕಾನೂನಿನ ಮೇಲೇ ಆಧಾರಿತವಾಗಿರಬೇಕು ಎಂದು ಅವರು ಹೇಳಿದರು. ಜೊತೆಗೆ, ಬಲಿಪಶುಗಳು ಮತ್ತು ಸಾಕ್ಷಿಗಳ ರಕ್ಷಣೆಗೆ ಸೂಕ್ತ ಭದ್ರತಾ ಕ್ರಮಗಳು ಸೇರಿರಬೇಕೆಂದು ಅವರು ಒತ್ತಿ ಹೇಳಿದರು.

ಕೊನೆಯಲ್ಲಿ, ಮಾನವತೆಯ ವಿರುದ್ಧದ ಅಪರಾಧಗಳಿಗೆ ಪರಿಣಾಮಕಾರಿ ಮತ್ತು ದೀರ್ಘಕಾಲಿಕ ಪರಿಹಾರವನ್ನು ರೂಪಿಸಲು ನಿರ್ಮಾಣಾತ್ಮಕ ಸಂವಾದ ಅತ್ಯಗತ್ಯವೆಂದು ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೆಲೆ ಕಚ್ಚಿಯಾ ರವರು ಪುನರುಚ್ಚರಿಸಿದರು.ಜಗದ್ಗುರುಗಳ ಅಧಿಕಾರ ಹುದ್ದೆಯು ಇಂತಹ ಸಕಾರಾತ್ಮಕ ಸಂವಾದದ ಮೂಲಕ ಸ್ಪಷ್ಟ ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.

20 ಜನವರಿ 2026, 00:00