ಹುಡುಕಿ

ಪೋಪ್ XIV ನೇ ಲಿಯೋರವರು VI ನೇ ಪಾಲ್ ಸಭಾಂಗಣದಲ್ಲಿ ಸೇರಿದ ಕಾಡಿ೯ನಲ್ ಗಳನ್ನು  ಉದ್ದೇಶಿಸಿ ಮಾತನಾಡಿದರು. ಪೋಪ್ XIV ನೇ ಲಿಯೋರವರು VI ನೇ ಪಾಲ್ ಸಭಾಂಗಣದಲ್ಲಿ ಸೇರಿದ ಕಾಡಿ೯ನಲ್ ಗಳನ್ನು ಉದ್ದೇಶಿಸಿ ಮಾತನಾಡಿದರು.  (ANSA)

ಕಾನ್ಸಿಸ್ಟರಿ: ಚಿಂತನೆಗಾಗಿ ಸಿನೋಡಾಲಿಟಿ ಮತ್ತು ಮಿಷನ್ ವಿಷಯಗಳನ್ನು ಆಯ್ಕೆ

ಅಸಾಧಾರಣ ಕಾನ್ಸಿಸ್ಟರಿಯ ಮೊದಲ ದಿನದ ಅಂತ್ಯದಲ್ಲಿ, ಜಗದ್ಗುರುಗಳ ಪತ್ರಿಕಾಗೋಷ್ಠಿ ಕಚೇರಿಯ ನಿರ್ದೇಶಕರು ವರದಿಗಾರರಿಗೆ ತಿಳಿಸಿದಂತೆ, ಭಾಗವಹಿಸಿದ್ದ ಸುಮಾರು 170 ಕಾರ್ಡಿನಲ್‌ಗಳು ಚಿಂತನೆಗಾಗಿ ಸಿನೋಡಾಲಿಟಿ (ಸಹಯಾತ್ರೆಯ ಚರ್ಚೆ) ಮತ್ತು ಮಿಷನ್ (ಸುವಾರ್ತಾ ಪ್ರಸಾರ) ಎಂಬ ವಿಷಯಗಳನ್ನು ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಕಾರ್ಡಿನಲ್‌ಗಳಿಗೆ, ನಾನು ನಿಮ್ಮ ಮೇಲೆ ಅವಲಂಬಿಸಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳಿದ್ದಾರೆ ಎಂದು ಅವರು ಗಮನಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಕರೆಸಿದ ತಮ್ಮ ಪಾಂಟಿಫಿಕೇಟ್‌ನ ಮೊದಲ ಅಸಾಧಾರಣ ಕಾನ್ಸಿಸ್ಟರಿಯಲ್ಲಿ ಭಾಗವಹಿಸಿದ್ದ ಸುಮಾರು 170 ಕಾರ್ಡಿನಲ್‌ಗಳು, ಸ್ಪಷ್ಟ ಬಹುಮತದೊಂದಿಗೆ ಚಿಂತನೆಗಾಗಿ ಎರಡು ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಿಕೊಂಡರು. ಅವುಗಳು “ಸಿನೋಡ್ ಮತ್ತು ಸಿನೋಡಾಲಿಟಿ (ಸಹಯಾತ್ರೆಯ ಚರ್ಚೆ)” ಹಾಗೂ “ಎವಾಂಜೆಲಿಯಿ ಗೌಡಿಯಂ ಬೆಳಕಿನಲ್ಲಿ ಚರ್ಚಿನ ಸುವಾರ್ತಾಪ್ರಚಾರ ಮತ್ತು ಮಿಷನ್” ಆಗಿವೆ. ಸಮಯದ ಮಿತಿಯ ಕಾರಣದಿಂದ, ಆರಾಧನಾ ವಿಧಿ ಮತ್ತು ರೋಮನ್ ಧರ್ಮ ಪ್ರಾಂತ್ಯದ ಕುರಿತು ಇರುವ ಪ್ರೇಡಿಕಾತೆ ಎವಾಂಜೆಲಿಯಂ ಎಂಬ ಪ್ರೇಷಿತರ  ಸಂವಿಧಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಇವುಗಳನ್ನು ಆಯ್ಕೆ ಮಾಡಲಾಯಿತು.

ಜಗದ್ಗುರುಗಳ ಪತ್ರಿಕಾಗೋಷ್ಠಿ ಕಚೇರಿಯ ನಿರ್ದೇಶಕ ಮ್ಯಾಟಿಯೋ ಬ್ರೂನಿಯವರು, ಒಂದು ವಿಷಯ ಇನ್ನೊಂದನ್ನು ತಳ್ಳಿಹಾಕುವುದಿಲ್ಲ ಎಂದು ವಿವರಿಸಿದರು. ಕೆಲ ವಿಷಯಗಳ ತುರ್ತು ಅಗತ್ಯತೆಯನ್ನು ಜಗದ್ಗುರು ಗಮನಿಸಿದ್ದು, ಅವುಗಳನ್ನು ಇತರ ವಿಷಯಗಳ ಚರ್ಚೆಯೊಳಗೆ ಹೇಗಾದರೂ ಸೇರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದರು. ಈ ಪ್ರಕ್ರಿಯೆ ಜಗದ್ಗುರು ಮತ್ತು ಕಾರ್ಡಿನಲ್‌ಗಳ ನಡುವೆ ಸಹಭಾಗಿತ್ವ ಮತ್ತು ಪರಸ್ಪರ ಕೇಳುವ ಮನೋಭಾವವನ್ನು ಪ್ರತಿಬಿಂಬಿಸಿತು.

ಕಾನ್ಸಿಸ್ಟರಿಯಲ್ಲಿ ಕಾರ್ಡಿನಲ್‌ಗಳು ಸಿನೋಡಾಲಿಟಿಯನ್ನು ಚಿಂತಿಸುವುದರ ಜೊತೆಗೆ, ಸಿನೋಡ್‌ನ ಸಂವಾದ ಮತ್ತು ಆಲಿಸುವ ವಿಧಾನವನ್ನೇ ಅನುಸರಿಸಿದರು. ವೃತ್ತಾಕಾರದ ಮೇಜುಗಳಲ್ಲಿ ಕುಳಿತು, ಭಾಷಾ ಆಧಾರಿತವಾಗಿ 20 ಗುಂಪುಗಳಾಗಿ ವಿಭಜನೆಗೊಂಡು, ಪ್ರತಿಯೊಬ್ಬರಿಗೂ ಸುಮಾರು ಮೂರು ನಿಮಿಷಗಳ ಕಾಲ ಮಾತನಾಡುವ ಅವಕಾಶ ನೀಡಲಾಯಿತು. “ಸಿನೋಡಾಲಿಟಿ ಮೂರನೇ ಸಹಸ್ರಮಾನದಲ್ಲಿ ದೇವರು ಧರ್ಮ ಸಭೆಯಿಂದ ನಿರೀಕ್ಷಿಸುವ ಮಾರ್ಗವಾಗಿದೆ” ಎಂದು ಜಗದ್ಗುರು XIVನೇ ಲಿಯೋರವರು  ಕಾರ್ಡಿನಲ್‌ಗಳಿಗೆ ಹೇಳಿದರು ಮತ್ತು ನಾನು ನಿಮ್ಮ ಮೇಲೆ ಅವಲಂಬಿಸಿಕೊಳ್ಳಬೇಕಾದ ಅಗತ್ಯವನ್ನು ಅನುಭವಿಸುತ್ತಿದ್ದೇನೆ ಎಂದು ತಿಳಿಸಿದರು.

ಗುಂಪು ಕಾರ್ಯದ ಅಂತ್ಯದಲ್ಲಿ, ಕೆಲ ಗುಂಪುಗಳ ಕಾರ್ಯದ ಸಾರಾಂಶವನ್ನು ಜಗದ್ಗುರು ಕೇಳಿದರು. ಅಂತಿಮ ದಾಖಲೆ ಹೊರಬರಲಿಲ್ಲ, ಏಕೆಂದರೆ ಗುರಿಯು ಒಂದು ಪಠ್ಯವನ್ನು ರಚಿಸುವುದಕ್ಕಿಂತಲೂ, ಸಹಯೋಗ ಮತ್ತು ಸಿನೋಡಲ್ ಶೈಲಿಯನ್ನು ಕಲಿಯುವುದು ಹಾಗೂ ಅನುಭವಿಸುವುದಾಗಿದೆ. ಒಟ್ಟಿಗೆ ಕೆಲಸ ಮಾಡುವುದೂ, ಹೊಸದನ್ನು ಸೃಷ್ಟಿಸುವುದೂ ಈ ಸಭೆಯ ಹೃದಯವಾಗಿತ್ತು.

ಸಭೆಯ ಅಂತಿಮ ಮಾತಿನಲ್ಲಿ ಜಗದ್ಗುರು XIVನೇ ಲಿಯೋರವರು, “ಗಣ್ಯಸ್ಥಾನದಷ್ಟೇ ಪ್ರಯಾಣವೂ ಮಹತ್ವದ್ದು” ಎಂದು ಪುನರುಚ್ಚರಿಸಿದರು. ಪವಿತ್ರಾತ್ಮನು ಇಂದಿಗೂ ಭವಿಷ್ಯದಲ್ಲಿಯೂ ಧರ್ಮ ಸಭೆಯಿಂದ ಏನು ಬಯಸುತ್ತಾನೆ ಎಂಬುದನ್ನು ಒಟ್ಟಾಗಿ ವಿವೇಚಿಸುವುದೇ ಈ ಕಾನ್ಸಿಸ್ಟರಿಯ ಉದ್ದೇಶ ಎಂದು ಹೇಳಿದರು. ಭಿನ್ನತೆಗಳು ಇದ್ದರೂ ಪ್ರೀತಿ ಮತ್ತು ಶಾಂತಿಯಲ್ಲಿರುವ ಏಕತೆ ಮಾತ್ರ ಧರ್ಮ ಸಭೆಗೆ ನಿಜವಾದ ಬಲವನ್ನು ನೀಡುತ್ತದೆ ಎಂಬುದನ್ನು ಕಾರ್ಡಿನಲ್ ರಾಡ್‌ಕ್ಲಿಫ್ ರವರ ಧ್ಯಾನವೂ ಸ್ಪಷ್ಟಪಡಿಸಿತು.

07 ಜನವರಿ 2026, 20:53