ಹುಡುಕಿ

ಕಾರ್ಡಿನಲ್ ಪಿಜ್ಜಬಲ್ಲಾ, ಧಾರ್ಮಿಕ ಮುಖಂಡರು, ಐಸಿಆರ್‌ಸಿ ಮುಖ್ಯಸ್ಥರು ಮತ್ತು ಜಿನೀವಾದಲ್ಲಿನ ರಾಜತಾಂತ್ರಿಕರು ವಾರ್ಷಿಕ ಅಂತರಧರ್ಮೀಯ ಸೇವೆಯಲ್ಲಿ "ಶಾಂತಿಯನ್ನು ನಿಶ್ಯಸ್ತ್ರಗೊಳಿಸುವಿಕೆ"ಗೆ ಕರೆ ನೀಡಿದ್ದಾರೆ ಕಾರ್ಡಿನಲ್ ಪಿಜ್ಜಬಲ್ಲಾ, ಧಾರ್ಮಿಕ ಮುಖಂಡರು, ಐಸಿಆರ್‌ಸಿ ಮುಖ್ಯಸ್ಥರು ಮತ್ತು ಜಿನೀವಾದಲ್ಲಿನ ರಾಜತಾಂತ್ರಿಕರು ವಾರ್ಷಿಕ ಅಂತರಧರ್ಮೀಯ ಸೇವೆಯಲ್ಲಿ "ಶಾಂತಿಯನ್ನು ನಿಶ್ಯಸ್ತ್ರಗೊಳಿಸುವಿಕೆ"ಗೆ ಕರೆ ನೀಡಿದ್ದಾರೆ ಕಾರ್ಡಿನಲ್ ಪಿಜ್ಜಬಲ್ಲಾ, ಧಾರ್ಮಿಕ ಮುಖಂಡರು, ಐಸಿಆರ್‌ಸಿ ಮುಖ್ಯಸ್ಥರು ಮತ್ತು ಜಿನೀವಾದಲ್ಲಿನ ರಾಜತಾಂತ್ರಿಕರು ವಾರ್ಷಿಕ ಅಂತರಧರ್ಮೀಯ ಸೇವೆಯಲ್ಲಿ "ಶಾಂತಿಯನ್ನು ನಿಶ್ಯಸ್ತ್ರಗೊಳಿಸುವಿಕೆ"ಗೆ ಕರೆ ನೀಡಿದ್ದಾರೆ ಕಾರ್ಡಿನಲ್ ಪಿಜ್ಜಬಲ್ಲಾ, ಧಾರ್ಮಿಕ ಮುಖಂಡರು, ಐಸಿಆರ್‌ಸಿ ಮುಖ್ಯಸ್ಥರು ಮತ್ತು ಜಿನೀವಾದಲ್ಲಿನ ರಾಜತಾಂತ್ರಿಕರು ವಾರ್ಷಿಕ ಅಂತರಧರ್ಮೀಯ ಸೇವೆಯಲ್ಲಿ "ಶಾಂತಿಯನ್ನು ನಿಶ್ಯಸ್ತ್ರಗೊಳಿಸುವಿಕೆ"ಗೆ ಕರೆ ನೀಡಿದ್ದಾರೆ 

ನಿರಸ್ತ್ರ’ ಶಾಂತಿಗಾಗಿ ಜಗದ್ಗುರು ಲಿಯೋರವರ ಕರೆಯನ್ನು ಜಗದ್ಗುರುಗಳ ಅಧಿಕಾರ ಹುದ್ದೆ ಮತ್ತು ರಾಜತಾಂತ್ರಿಕರು ಪ್ರತಿಧ್ವನಿಸುತ್ತಾರೆ

ಜಿನೀವಾದಲ್ಲಿ ಜಗದ್ಗುರುಗಳ ಅಧಿಕಾರ ಹುದ್ದೆಯ ಯುಎನ್ ಶಾಶ್ವತ ಮಿಷನ್ ಆಯೋಜಿಸಿದ ಅಂತರ್ಮತ ಪ್ರಾರ್ಥನಾ ಸೇವೆಯಲ್ಲಿ, ಜಾಗತಿಕ ಸಂಘರ್ಷಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಜಗದ್ಗುರು XIVನೇ ಲಿಯೋರವರ 2026ರ ವಿಶ್ವ ಶಾಂತಿ ದಿನದ ಸಂದೇಶದ ಕುರಿತು ರಾಜತಾಂತ್ರಿಕರು ಮತ್ತು ಧಾರ್ಮಿಕ ನಾಯಕರು ಚಿಂತನೆ ನಡೆಸಿದರು. ಕಾರ್ಡಿನಲ್ ಪಿಜ್ಜಾಬಲ್ಲಾ ಮತ್ತು ಐಸಿಆರ್‌ಸಿ ನ್ಯಾಯ, ಮಾನವೀಯ ಕಾನೂನು ಹಾಗೂ ಸಂವಾದ ಮತ್ತು ಮಾನವ ಗೌರವದ ಮೇಲೆ ಆಧಾರಿತ ಕಠಿಣ ನಿರೀಕ್ಷೆಯ ಅಗತ್ಯವನ್ನು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಜಾಗತಿಕ ಮಟ್ಟದಲ್ಲಿ ಸಂಘರ್ಷಗಳು ತೀವ್ರಗೊಳ್ಳುತ್ತಿರುವ ಮತ್ತು ಕ್ರೂರ ಬಲದ ತರ್ಕದ ಮೇಲಿನ ಅವಲಂಬನೆ ಮರುಕಳಿಸಿರುವ ಹಿನ್ನೆಲೆಯಲ್ಲೇ, ಜಿನೀವಾದಲ್ಲಿರುವ ಜಗದ್ಗುರುಗಳ ಅಧಿಕಾರ ಹುದ್ದೆಯ ಶಾಶ್ವತ ಯುಎನ್ ಮಿಷನ್‌—ಪ್ರೇಷಿತರ ರಾಯಭಾರಿ ಮತ್ತು ಜಗದ್ಗುರುಗಳ ಅಧಿಕಾರ ಹುದ್ದೆಯ ಶಾಶ್ವತ ವೀಕ್ಷಕರಾದ ಮಹಾಧರ್ಮಾಧ್ಯಕ್ಷ ಎಟ್ಟೊರೆ ಬಲೇಸ್ಟ್ರೆರೊರವರ ನೇತೃತ್ವದಲ್ಲಿ—ಬುಧವಾರ 17ನೇ ವಾರ್ಷಿಕ ಅಂತರ್ಮತ ಶಾಂತಿ ಸೇವೆಯನ್ನು ಆಯೋಜಿಸಿತು.

ಈ ಸಮಾರಂಭದಲ್ಲಿ ಸುಮಾರು 300 ರಾಜತಾಂತ್ರಿಕರು, ರಾಯಭಾರಿಗಳು ಹಾಗೂ ಧಾರ್ಮಿಕ ನಾಯಕರು ಭಾಗವಹಿಸಿದರು.

ಲೋಸಾನ್, ಜಿನೀವಾ ಮತ್ತು ಫ್ರಿಬೂರ್ಗ್ ಧರ್ಮಪ್ರಾಂತ್ಯದ ಸಹಯೋಗದಲ್ಲಿ ಸಂತ ನಿಕೋಲಾಸ್ ಡೆ ಫ್ಲೂ ಧರ್ಮ ಸಭೆಯಲ್ಲಿ ನಡೆದ ಈ ಸೇವೆಯ ಕೇಂದ್ರಬಿಂದುವಾಗಿದ್ದು, ಜಗದ್ಗುರು XIVನೇ ಲಿಯೋರವರ 2026ರ ವಿಶ್ವ ಶಾಂತಿ ದಿನದ ಸಂದೇಶ “ಶಾಂತಿ ನಿಮ್ಮೆಲ್ಲರೊಂದಿಗೆ ಇರಲಿ: ‘ನಿರಸ್ತ್ರ ಮತ್ತು ನಿರಾಯುಧಗೊಳಿಸುವ ಶಾಂತಿಯ ಕಡೆಗೆ” ಎಂಬ ವಿಷಯವಾಗಿತ್ತು.

ಗೆಲುವಿಲ್ಲದ ಗೆಲುವು

ಆತಿಥ್ಯ ಭಾಷಣದಲ್ಲಿ ಮಹಾಧರ್ಮಾಧ್ಯಕ್ಷ ಬಲೇಸ್ಟ್ರೆರೊ, ಈ ಸೇವೆಯನ್ನು ಹಿಂಸೆ ಮತ್ತು ಸಂಘರ್ಷದ ತರ್ಕಕ್ಕೆ ವಿರುದ್ಧವಾದ ಒಂದು ಪ್ರತಿಕಥನವೆಂದು ವರ್ಣಿಸಿದರು.

ನಿರಸ್ತ್ರ ಮತ್ತು ನಿರಾಯುಧಗೊಳಿಸುವ ಶಾಂತಿ, ಗೆಲುವಿಲ್ಲದೆ ಗೆಲ್ಲುತ್ತದೆ ಅದು ಯುದ್ಧಕ್ಕಾಗಿ ತರಬೇತಿ ನೀಡುವುದಿಲ್ಲ, ಬದಲಾಗಿ ಸಮಾಧಾನ ಮತ್ತು ಸಹಕಾರಕ್ಕಾಗಿ ರೂಪಿಸುತ್ತದೆ ಎಂದು ಅವರು ಹೇಳಿದರು.

ಅವರು ರಾಜತಾಂತ್ರಿಕರಿಗೆ ಆಲೋಚನೆಗಳು ಮತ್ತು ಪದಗಳನ್ನು ಅಸ್ತ್ರಗಳಾಗಿ ಪರಿವರ್ತಿಸುವ ಪ್ರವೃತ್ತಿಯನ್ನು ತಿರಸ್ಕರಿಸುವಂತೆ ಮನವಿ ಮಾಡಿದರು ಮತ್ತು ಹಿಂಸೆಯನ್ನು ನ್ಯಾಯೀಕರಿಸಲು ಧರ್ಮವನ್ನು ದುರುಪಯೋಗಪಡಿಸುವ ಈ ರೀತಿಯ ಧರ್ಮನಿಂದನೆಗಳನ್ನುನಂಬಿಕಸ್ಥರು ಖಂಡಿಸಬೇಕು ಎಂದು ಕರೆ ನೀಡಿದರು.

ಕಠಿಣ ನಿರೀಕ್ಷೆ

ಜೆರುಸಲೇಮಿನಿಂದ ಆಗಮಿಸಿದ ಲ್ಯಾಟಿನ್ ಪ್ಯಾಟ್ರಿಯಾರ್ಕ್ ಆಫ್ ಜೆರುಸಲೇಮ್ ಕಾರ್ಡಿನಲ್ ಪಿಯರ್ಬತ್ತಿಸ್ತ ಪಿಜ್ಜಾಬಲ್ಲಾ, ಹಿಂಸೆಯ ಎದುರು ನಿರಾಶೆಗೆ ಒಳಗಾಗದೆ ನಿಲ್ಲುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಪ್ರೇರೇಪಿಸಿದರು.

ಶಾಂತಿಯನ್ನು ತ್ಯಜಿಸುವುದೆಂದರೆ, ಯುದ್ಧವನ್ನು ಮಾನವ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಸಾಮಾನ್ಯ ಭಾಷೆಯಾಗಿ ಒಪ್ಪಿಕೊಳ್ಳುವುದಕ್ಕೆ ಸಮಾನ,ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರ ಸಂದೇಶವನ್ನು ಸ್ವೀಕರಿಸುವುದು ಸಾದಾ ನಿರಾಶಾವಾದವಲ್ಲ, ಅದು ಒಂದು ಕಠಿಣ ನಿರೀಕ್ಷೆ.

ಪವಿತ್ರ ಭೂಮಿಯ ಪರಿಸ್ಥಿತಿಯನ್ನು ಕುರಿತು ಚಿಂತನೆ ನಡೆಸಿದ ಅವರು, ಕೇವಲ ಯುದ್ಧ ವಿರಾಮಗಳು ಸಾಕಾಗುವುದಿಲ್ಲ ಎಂದು ಒತ್ತಿ ಹೇಳಿದರು:

ನ್ಯಾಯವಿಲ್ಲದೆ ಶಾಶ್ವತ ಶಾಂತಿ ಸಾಧ್ಯವಿಲ್ಲ ಆದರೆ ಇನ್ನೊಬ್ಬರನ್ನು ಸಾಧನವಾಗಿಯಲ್ಲ ಅಥವಾ ಅಡ್ಡಿಯಾಗಿಯಲ್ಲ, ವ್ಯಕ್ತಿಯಾಗಿ ಗುರುತಿಸದೆ ನಿಜವಾದ ನ್ಯಾಯವೂ ಸಾಧ್ಯವಿಲ್ಲ ಎಂದರು.

ಮಾನವೀಯ ಅಗತ್ಯತೆ

ಐಸಿಆರ್‌ಸಿ ಅಧ್ಯಕ್ಷೆ ಮಿರ್ಜಾನಾ ಸ್ಪೊಲ್ಯಾರಿಕ್ ರವರ ಪರವಾಗಿ ನೀಡಿದ ಹೇಳಿಕೆಯನ್ನು ಉಪಾಧ್ಯಕ್ಷ ಗೈಲ್ಸ್ ಕಾರ್ಬೋನಿಯರ್ ಓದಿದರು. ಜಗತ್ತಿನಲ್ಲಿ ಪ್ರಸ್ತುತ 130 ಸಕ್ರಿಯ ಸಶಸ್ತ್ರ ಸಂಘರ್ಷಗಳಿವೆ ಎಂದು ಅದು ಉಲ್ಲೇಖಿಸಿ, ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗೌರವ ಕುಸಿಯುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿತು.

ಶಾಂತಿಗೆ 100 ಹೆಜ್ಜೆಗಳಿದ್ದರೆ, ಮೊದಲ ಹೆಜ್ಜೆಗಳು ಮಾನವೀಯವಾಗಿರಬೇಕು, ಎಂದು ಹೇಳಿಕೆಯಲ್ಲಿ ತಿಳಿಸಲಾಯಿತು.

ಮಾನವೀಯ ಕಾನೂನಿಗೆ ಗೌರವ ನೀಡುವುದು ಜೀವಗಳನ್ನು ಉಳಿಸುತ್ತದೆ ಮತ್ತು ಶಾಂತಿಯತ್ತ ಹಿಂದಿರುಗುವ ಮಾರ್ಗಗಳನ್ನು ಸಂರಕ್ಷಿಸುತ್ತದೆ.

ವಿಶ್ವವ್ಯಾಪಿ ಕರೆ

ಕ್ರೈಸ್ತ, ಯೆಹೂದಿ, ಮುಸ್ಲಿಂ ಮತ್ತು ಬೌದ್ಧ ಧಾರ್ಮಿಕ ನಾಯಕರ ಚಿಂತನೆಗಳು ಪಾರಿಷ್‌ನ ಫಿಲಿಪ್ಪೀನ್ ಮತ್ತು ಆಫ್ರಿಕನ್ ಗಾಯನ ತಂಡಗಳ ಸಂಗೀತದೊಂದಿಗೆ ಜೋಡಿಸಲ್ಪಟ್ಟು ಜಿನೀವಾದ ಅಂತರರಾಷ್ಟ್ರೀಯ ಸಮುದಾಯದ ಮತ್ತು ಧರ್ಮ ಸಭೆಯ ವಿಶ್ವವ್ಯಾಪಕತೆಯನ್ನು ಎತ್ತಿ ತೋರಿಸುತ್ತದೆ.

ಈ ಸೇವೆಯ ಅಂತ್ಯವನ್ನು ಲೋಸಾನ್, ಜಿನೀವಾ ಮತ್ತು ಫ್ರಿಬೂರ್ಗ್ ಧರ್ಮಪ್ರಾಂತ್ಯದ ಬಿಷಪ್ ಚಾರ್ಲ್ಸ್ ಮೊರೆರೊಡ್ ರವರು ನೇತೃತ್ವ ನೀಡಿದ ಅಸಿಸಿಯ ಸಂತ ಫ್ರಾನ್ಸಿಸ್ ರವರ ಪ್ರಾರ್ಥನೆಯೊಂದಿಗೆ ನೆರವೇರಿಸಲಾಯಿತು.

29 ಜನವರಿ 2026, 00:00