ಹುಡುಕಿ

ರೋಮ್ ನಲ್ಲಿ ನಡೆದ ಸ್ವತಂತ್ರ ಚಿಂತನೆಗಾಗಿ ಒಸ್ಸೆವೇ೯ಟೋರಿಯೋದ 25 ನೇ ವಾಷಿ೯ಕೋತ್ಸವದ ಸಂಧಭ೯ದಲ್ಲಿ ಕಾಡಿ೯ನಲ್ ಪರೋಲಿನ್ ಪ್ರಶ್ನೆಗಳಿಗೆ ಉತ್ತರಿಸಿದರು. ರೋಮ್ ನಲ್ಲಿ ನಡೆದ ಸ್ವತಂತ್ರ ಚಿಂತನೆಗಾಗಿ ಒಸ್ಸೆವೇ೯ಟೋರಿಯೋದ 25 ನೇ ವಾಷಿ೯ಕೋತ್ಸವದ ಸಂಧಭ೯ದಲ್ಲಿ ಕಾಡಿ೯ನಲ್ ಪರೋಲಿನ್ ಪ್ರಶ್ನೆಗಳಿಗೆ ಉತ್ತರಿಸಿದರು.  (ANSA)

ಕಾರ್ಡಿನಲ್ ಪ್ಯಾರೊಲಿನ್: ಅಮೆರಿಕಾ ಮತ್ತು ಯುರೋಪ್ ನಡುವಿನ ಉದ್ವಿಗ್ನತೆಗಳು ಅಂತರರಾಷ್ಟ್ರೀಯ ವಾತಾವರಣವನ್ನು ಮತ್ತಷ್ಟು ಹದಗೆಡಿಸುತ್ತಿವೆ

ಪತ್ರಕರ್ತರೊಂದಿಗೆ ಮಾತನಾಡಿದ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೊಲಿನ್ ರವರು, ಅಮೆರಿಕಾ ಮತ್ತು ಯುರೋಪ್ ನಡುವಿನ ಉದ್ವಿಗ್ನತೆಗಳ ಬಗ್ಗೆ ಉಲ್ಲೇಖಿಸಿ, ವಿವಾದಾತ್ಮಕ ವಿಷಯಗಳನ್ನು ಚರ್ಚಿಸುವುದು ಅತ್ಯಾವಶ್ಯಕ, ಆದರೆ ವಾಗ್ವಾದಗಳಲ್ಲಿ ತೊಡಗದೆ ಮತ್ತು ಹೊಸ ಉದ್ವಿಗ್ನತೆಗಳನ್ನು ಉಂಟುಮಾಡದೆ ಚರ್ಚೆ ನಡೆಸಬೇಕು ಎಂದು ಹೇಳಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೊಲಿನ್ ರವರು ರೋಮಿನಲ್ಲಿ ನಡೆದ ಭವಿಷ್ಯದೊಂದಿಗೆ ಯುವಜನರನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಸಂವಾದ ಕಾರ್ಯಕ್ರಮದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡುತ್ತ, ಅಮೆರಿಕಾ ಮತ್ತು ಯುರೋಪ್ ನಡುವಿನ ಉದ್ವಿಗ್ನತೆಗಳು ಈಗಾಗಲೇ ಗಂಭೀರವಾಗಿರುವ ಅಂತರರಾಷ್ಟ್ರೀಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿವೆ ಎಂದು ಎಚ್ಚರಿಸಿದರು. ಉದ್ವಿಗ್ನತೆಗಳು ಆರೋಗ್ಯಕರವಲ್ಲ ಎಂದು ಅವರು ತಿಳಿಸಿ, ವಿವಾದಾತ್ಮಕ ವಿಷಯಗಳನ್ನು ಚರ್ಚಿಸಬೇಕು ಆದರೆ ವಾಗ್ವಾದಗಳಿಗೆ ಒಳಗಾಗದೇ, ಹೊಸ ಉದ್ವಿಗ್ನತೆಗಳನ್ನು ಉಂಟುಮಾಡದೇ ಸಂವಾದ ನಡೆಯಬೇಕು ಎಂದು ಒತ್ತಿ ಹೇಳಿದರು.

ಗಾಜಾದ ಶಾಂತಿ ಮಂಡಳಿ  ಕುರಿತು ಮಾತನಾಡಿದ ಅವರು, ಈ ಮಂಡಳಿಯಲ್ಲಿ ಭಾಗವಹಿಸುವಂತೆ ಹಲವು ದೇಶಗಳಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು. ಜಗದ್ಗರುಗಳು ಕೂಡ ಈ ಆಹ್ವಾನವನ್ನು ಸ್ವೀಕರಿಸಿದ್ದು, ವ್ಯಾಟಿಕನ್ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದರು. ಈ ವಿಷಯಕ್ಕೆ ಸಮರ್ಪಕವಾಗಿ ಪ್ರತಿಕ್ರಿಯಿಸಲು ಸಮಯ ಅಗತ್ಯವಿದೆ ಎಂದು ಅವರು ತಿಳಿಸಿದರು. ವ್ಯಾಟಿಕನ್ ಆರ್ಥಿಕವಾಗಿ ಭಾಗವಹಿಸುವ ಸ್ಥಿತಿಯಲ್ಲಿ ಇಲ್ಲವಾದರೂ, ಅದರ ಪಾತ್ರ ಇತರ ರಾಷ್ಟ್ರಗಳಿಗಿಂತ ವಿಭಿನ್ನವಾಗಿರುವುದರಿಂದ ವಿಶ್ಲೇಷಣೆಯೂ ವಿಭಿನ್ನವಾಗುತ್ತದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಕಾನೂನುಗಳ ಗೌರವ ಅತ್ಯಂತ ಮಹತ್ವದ್ದೆಂದು ಕಾರ್ಡಿನಲ್ ಪ್ಯಾರೊಲಿನ್ ಒತ್ತಿ ಹೇಳಿದರು. ವೈಯಕ್ತಿಕ ಅಭಿಪ್ರಾಯಗಳು ಸ್ವೀಕಾರಾರ್ಹವಾದರೂ, ಜಾಗತಿಕ ಸಮುದಾಯದ ನಿಯಮಗಳನ್ನು ಗೌರವಿಸುವುದೇ ಮೂಲಭೂತ ಅಂಶ ಎಂದು ಅವರು ಹೇಳಿದರು. ಇದೇ ರೀತಿಯಲ್ಲಿ, ಪತ್ರಿಕಾ ಸ್ವಾತಂತ್ರ್ಯ ಕುರಿತು ಮಾತನಾಡುತ್ತ, ಮಾಧ್ಯಮಗಳ ಮೇಲಿನ ವಿಶ್ವಾಸ ಅತ್ಯಂತ ಮುಖ್ಯ, ಆದರೆ ಮಾಧ್ಯಮಗಳನ್ನು ಜವಾಬ್ದಾರಿಯಿಂದ ಬಳಸಬೇಕು ವಿಭಜನೆಗಿಂತ ನಿರ್ಮಾಣಕ್ಕೆ ಸಹಾಯ ಮಾಡುವ ಪತ್ರಿಕೋದ್ಯಮ ಅಗತ್ಯವಿದೆ ಎಂದರು.

ವೆನೆಜುವೆಲಾ ಕುರಿತು ಮಾತನಾಡಿದ ಕಾರ್ಡಿನಲ್, ಆ ದೇಶವು ಸುಂದರವಾದ ದೇಶವಾಗಿದ್ದು, ತಾವು ಅಲ್ಲಿ ಪ್ರೇಷಿತರ ರಾಯಭಾರಿ ಆಗಿ ಸೇವೆ ಸಲ್ಲಿಸಿದ ಅನುಭವ ಮರೆಯಲಾಗದು ಎಂದು ಹೇಳಿದರು. ಆದರೆ ಕಳೆದ ವರ್ಷಗಳಲ್ಲಿ ರಾಜಕೀಯ ಅಸ್ಥಿರತೆ ಮತ್ತು ಗಂಭೀರ ಸಂಕಷ್ಟಗಳು ಜನರನ್ನು ತೀವ್ರವಾಗಿ ಬಾಧಿಸಿವೆ ಎಂದು ಉಲ್ಲೇಖಿಸಿ, ಜನರ ಅಗತ್ಯಗಳಿಗೆ ಸ್ಪಂದಿಸುವುದೇ ಅತ್ಯಂತ ಮುಖ್ಯ ಎಂದು ಹೇಳಿದರು.

ಇರಾನ್ ಮತ್ತು ಜಾಗತಿಕ ಸಂಘರ್ಷಗಳ ಕುರಿತು ಮಾತನಾಡುತ್ತ, ಜಗದ್ಗುರು ಫ್ರಾನ್ಸಿಸ್ ರವರು ಉಲ್ಲೇಖಿಸಿದ “ತುಂಡುತುಂಡಾಗಿ ನಡೆಯುತ್ತಿರುವ ಮೂರನೇ ವಿಶ್ವಯುದ್ಧ” ಎಂಬ ಪದಗಳು ಈಗ ವಾಸ್ತವವಾಗಿವೆ ಎಂದು ಅವರು ಹೇಳಿದರು.ಜಗದ್ಗುರುಗಳ ಅಧಿಕಾರ ಪೀಠವು ಸದಾ ಮಾನವೀಯ ನೋವಿನತ್ತ ಗಮನಹರಿಸುತ್ತದೆ. ಸಂಖ್ಯೆಗಳಿಗಿಂತ ಮುಖಗಳನ್ನು ನೋಡಬೇಕು ಎಂದು ಹೇಳಿದರು. ಅಣ್ವಸ್ತ್ರಗಳ ಕುರಿತು ಮಾತನಾಡಿ, ಜಗದ್ಗುರುಗಳ ಅಧಿಕಾರ ಪೀಠವು ಅಣ್ವಸ್ತ್ರಗಳ ಬಳಕೆ ಮಾತ್ರವಲ್ಲ, ಅವುಗಳ ಸ್ವಾಮ್ಯವನ್ನೂ ಅನೈತಿಕವೆಂದು ಪರಿಗಣಿಸುತ್ತದೆ ಎಂದು ಪುನರುಚ್ಚರಿಸಿದರು.

ಕೊನೆಗೆ, ಇಸ್ರೇಲ್–ಪ್ಯಾಲೆಸ್ತೈನ್ ಸಂಘರ್ಷವೇ ಮಧ್ಯಪೂರ್ವದಲ್ಲಿ ಶಾಂತಿಗೆ ಕೀಲಿಕೈ ಎಂದು ಕಾರ್ಡಿನಲ್ ಪ್ಯಾರೊಲಿನ್ ಹೇಳಿದರು. ಜಗದ್ಗರುಗಳ ಅಧಿಕಾರ ಪೀಠವು ಪ್ಯಾಲೆಸ್ತೈನ್ ರಾಜ್ಯವನ್ನು ಈಗಾಗಲೇ ಮಾನ್ಯ ಮಾಡಿದ್ದು, ಎರಡು ಜನರು – ಎರಡು ರಾಷ್ಟ್ರಗಳು ಎಂಬ ಪರಿಹಾರ ಇನ್ನೂ ಸಾಧ್ಯವಿದೆ ಎಂದು ಹೇಳಿದರು. ಪ್ಯಾಲೆಸ್ತೈನೀಯರಿಗೆ ತಮ್ಮ ಭೂಮಿಯಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕು ದೊರಕುವಂತೆ ಸೃಜನಶೀಲ ಪರಿಹಾರಗಳು ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.

21 ಜನವರಿ 2026, 00:00