ಹುಡುಕಿ

ವ್ಯಾಟಿಕನ್ ರೇಡಿಯೋ 95 ವರ್ಷಗಳ ಹಿಂದೆ ಸ್ಥಾಪನೆಯಾಯಿತು. ವ್ಯಾಟಿಕನ್ ರೇಡಿಯೋ 95 ವರ್ಷಗಳ ಹಿಂದೆ ಸ್ಥಾಪನೆಯಾಯಿತು. 

ವಿಶ್ವ ರೇಡಿಯೋ ದಿನದಂದು ವ್ಯಾಟಿಕನ್ ರೇಡಿಯೋ 95ನೇ ವಾರ್ಷಿಕೋತ್ಸವದ ಆಚರಣೆ

ಈ ವಿಶ್ವ ರೇಡಿಯೋ ದಿನದಂದು, ವ್ಯಾಟಿಕನ್ ರೇಡಿಯೋ ತನ್ನ 95 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದ್ದು, ರೇಡಿಯೋದ ಭವಿಷ್ಯ ಮತ್ತು ಈ ದಿನದ ವಿಷಯವಾದ ‘ಎಐ ಒಂದು ಸಾಧನ, ಧ್ವನಿಯಲ್ಲ’ ಎಂಬುದಕ್ಕೆ ಮೀಸಲಾದ ಏಳು ಬಹುಭಾಷಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ವ್ಯಾಟಿಕನ್ ವರದಿ

ವಿಶ್ವ ರೇಡಿಯೋ ದಿನ 2026ರ ಅಂಗವಾಗಿ, 13 ಫೆಬ್ರವರಿ 2026 ರಂದು ರೇಡಿಯೋ ವ್ಯಾಟಿಕಾನಾ – ವ್ಯಾಟಿಕನ್ ನ್ಯೂಸ್ ಏಳು ಭಾಷೆಗಳಲ್ಲಿ ಏಳು ವಿಶೇಷ ರೇಡಿಯೋ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮಗಳು ರೇಡಿಯೋದ ಭವಿಷ್ಯ, ಸಾರ್ವಜನಿಕ ಸೇವೆ, ನವೀನತೆ, ಹಾಗೂ ಮಾಧ್ಯಮ–ಸಮಾಜ–ಕೃತಕ ಬುದ್ಧಿಮತ್ತೆ (ಎಐ) ನಡುವಿನ ಸಂಬಂಧದ ಕುರಿತು ಚರ್ಚಿಸುವ ಥೀಮ್ಯಾಟಿಕ್ ಪಾಡ್‌ಕಾಸ್ಟ್‌ಗಳಾಗಿ ರೂಪುಗೊಳ್ಳಲಿವೆ.

ಈ ವಿಶೇಷ ಉಪಕ್ರಮವು ಜಗದ್ಗುರುಗಳ ರೇಡಿಯೋ ಆಗಿರುವ ವ್ಯಾಟಿಕನ್ ರೇಡಿಯೋದ 95ನೇ ವಾರ್ಷಿಕೋತ್ಸವದ (12 ಫೆಬ್ರವರಿ 2026) ತಕ್ಷಣದ ನಂತರ ಬರುತ್ತದೆ. 1931ರಲ್ಲಿ ಜಗದ್ಗುರು XI ನೇ ಪಿಯಸ್ ರವರ ಆದೇಶದ ಮೇರೆಗೆ, ರೇಡಿಯೋದ ಪಿತಾಮಹ ಗುಗ್ಲಿಯೆಲ್ಮೋ ಮಾರ್ಕೋನಿರವರಿಂದ ಸ್ಥಾಪಿಸಲಾದ ಈ ರೇಡಿಯೋ, ಜಗತ್ತಿನ ಅತ್ಯಂತ ಹಳೆಯ ರೇಡಿಯೋ ಅನುಭವಗಳಲ್ಲಿ ಒಂದಾಗಿದೆ. ಜಗದ್ಗುರುಗಳ ಅಧಿಕಾರ ಸ್ಥಳವನ್ನು ವಿಶ್ವದ ಎಲ್ಲ ಭಾಗಗಳೊಂದಿಗೆ ಸಂಪರ್ಕಿಸುವುದು ಹಾಗೂ ವಿಭಿನ್ನ ಜನಾಂಗ, ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಮಾತನಾಡುವುದು ಇದರ ಮೂಲ ಉದ್ದೇಶವಾಗಿತ್ತು.

ಈ ಎಲ್ಲಾ ಕಾರ್ಯಕ್ರಮಗಳ ಕೇಂದ್ರ ವಿಷಯವಾಗಿರುವುದು ಡಬ್ಲೂ ಆರ್ ಡಿ  2026ರ ವಿಷಯ ಎಐ ಒಂದು ಸಾಧನ, ಧ್ವನಿಯಲ್ಲ. ಈ ಘೋಷಣೆ, ಎಐ ಯುಗದಲ್ಲಿ ಸಂವಹನದ ಸಂದರ್ಭದಲ್ಲಿ ಮಾನವ ಜವಾಬ್ದಾರಿ, ವಿವೇಕ ಮತ್ತು ನಿಜವಾದ ಮಾನವ ಧ್ವನಿಯ ಮಹತ್ವವನ್ನು ನೆನಪಿಸುವ ಸಾಮಾಜಿಕ ಸಂವಹನಗಳ ವಿಶ್ವ ದಿನ 2026ರ ಜಗದ್ಗುರುಗಳ ಸಂದೇಶದೊಂದಿಗೆ ಆಳವಾಗಿ ಸಂವಾದ ನಡೆಸುತ್ತದೆ.

ಈ ಏಳು ಭಾಷಾ ಕಾರ್ಯಕ್ರಮಗಳಲ್ಲಿ ಯುರೋಪ್, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಏಷ್ಯಾದ ಅಂತರರಾಷ್ಟ್ರೀಯ ತಜ್ಞರು, ಪ್ರಸಾರ ಸಂಸ್ಥೆಗಳ ಮುಖ್ಯಸ್ಥರು, ಸಂಶೋಧಕರು, ನವೋದ್ಯಮಿಗಳು ಹಾಗೂ ಮಾಧ್ಯಮ ವೃತ್ತಿಪರರು ಭಾಗವಹಿಸುತ್ತಾರೆ. ಮಾನವೀಯ ಮಾಧ್ಯಮವಾಗಿರುವ ರೇಡಿಯೋ—ಧ್ವನಿ, ಸಂಬಂಧ ಮತ್ತು ಸಮೀಪತೆಯಿಂದ ರೂಪುಗೊಂಡದ್ದು ಎಐ ಯುಗದಲ್ಲಿಯೂ ತನ್ನ ಗುರುತನ್ನು ಕಳೆದುಕೊಳ್ಳದೆ ಹೇಗೆ ಮುಂದುವರಿಯಬಹುದು ಎಂಬುದರ ಕುರಿತು ಅವರು ಚಿಂತನೆ ನಡೆಸುತ್ತಾರೆ.

ಈ ಕಾರ್ಯಕ್ರಮಗಳು, ರೇಡಿಯೋ ಇಂದು ಕೂಡ ಸಮೀಪತೆ, ಶಿಕ್ಷಣ, ಸುವಾರ್ತೆ ಪ್ರಸಾರ, ಸಾರ್ವಜನಿಕ ಸೇವೆ ಮತ್ತು ನವೀನತೆಯ ಪಯಾ೯ಯ ಸಾಧನವಾಗಿಯೇ ಉಳಿದಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ವಿವಿಧ ಖಂಡಗಳ ಅನುಭವಗಳನ್ನು ಒಟ್ಟಿಗೆ ತಂದು ಜಾಗತಿಕ ಸಂವಾದವನ್ನು ಉತ್ತೇಜಿಸುತ್ತವೆ.

ಸ್ಥಾಪನೆಯ 95 ವರ್ಷಗಳ ನಂತರವೂ, ಮಾರ್ಕೋನಿ ನಿರ್ಮಿಸಿದ ಜಗದ್ಗುರುಗಳ ರೇಡಿಯೋ ತನ್ನ ಮೂಲ ಧ್ಯೇಯವನ್ನು ದೃಢಪಡಿಸುತ್ತದೆ ಮಾನವ ಧ್ವನಿಯ ಅಲೆಗಳ ಮೂಲಕ ವಿಶ್ವವನ್ನು ಏಕತೆಗೊಳಿಸುವುದು. ಇಂದು ಅದು ಪಾಡ್‌ಕಾಸ್ಟ್‌ಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕವೂ ಈ ಕಾರ್ಯವನ್ನು ಮುಂದುವರಿಸುತ್ತಿದ್ದು, ಎಐ ಯುಗದಲ್ಲಿಯೂ ಒಂದು ಸತ್ಯವನ್ನು ಜಗತ್ತಿಗೆ ನೆನಪಿಸುತ್ತದೆ ತಂತ್ರಜ್ಞಾನ ಒಂದು ಸಾಧನವಾಗಿರಬಹುದು, ಆದರೆ ಧ್ವನಿ ಸದಾ ಮಾನವೀಯವೇ ಆಗಿರುತ್ತದೆ.

10 ಫೆಬ್ರವರಿ 2026, 17:25