ಹೊಸ ಕರೋಕೆ ಮೂಲಕ ವಾಟಿಕನ್ ರೇಡಿಯೋ 95ನೇ ವಾರ್ಷಿಕೋತ್ಸವದ ಸಂಭ್ರಮ
ವ್ಯಾಟಿಕನ್ ವರದಿ
ರೇಡಿಯೋ ಸ್ಥಾಪನೆಯ 95ನೇ ವಾರ್ಷಿಕೋತ್ಸವವನ್ನು ಫೆಬ್ರವರಿ 12, 2026ರಂದು ಆಚರಿಸುತ್ತಿರುವ ವ್ಯಾಟಿಕನ್ ರೇಡಿಯೋ ವ್ಯಾಟಿಕನ್ ನ್ಯೂಸ್, ತನ್ನ ಗುರುತಿನ ಅತ್ಯಂತ ಪರಿಚಿತ ಅಂಶಗಳಲ್ಲಿ ಒಂದಾದ ಕರೋಕೆಯನ್ನು ಪುನರುಜ್ಜೀವನಗೊಳಿಸಿ ಮರುಪ್ರಾರಂಭಿಸಿದೆ. ಜಗದ್ಗರುಗಳು ರೇಡಿಯೋವನ್ನು ಸದಾ ಶ್ರೋತೃಗಳೊಂದಿಗೆ ಸಂಪರ್ಕಿಸುವ ಈ ಧ್ವನಿ ಗುರುತು, ಪರಂಪರೆ ಮತ್ತು ಆಧುನಿಕತೆಯನ್ನು ಒಗ್ಗೂಡಿಸುವ ಚಿಹ್ನೆಯಾಗಿ ಈ ಐತಿಹಾಸಿಕ ಕ್ಷಣವನ್ನು ಆಚರಿಸಲು ರೂಪಿಸಲಾಗಿದೆ.
ಹೊಸ ಕರೋಕೆ ರಚನೆಗೆ ಸಂಗೀತ ಕಾರ್ಯಕ್ರಮಗಳ ಸಂಪಾದಕೀಯ ತಂಡದ ಮಾಸ್ಟ್ರೋ ಮಾರ್ಚೆಲ್ಲೋ ಫಿಲೋಟೇಯ್ ರವರಿಗೆ ಹೊಣೆಗಾರಿಕೆ ನೀಡಲಾಗಿದ್ದು, ಈ ತಂಡವನ್ನು ಮಾಸ್ಟ್ರೋ ಪಿಯರ್ಲೂಯಿಜಿ ಮೊರೆಲ್ಲಿ ನೇತೃತ್ವ ವಹಿಸಿದ್ದಾರೆ. ಫೆಬ್ರವರಿ 12ರಂದು ದಿನವಿಡೀ ಈ ಕರೋಕೆ ಪ್ರಸಾರವಾಗಲಿದ್ದು, ನಂತರದಿಂದ ನಿಯಮಿತ ಕಾರ್ಯಕ್ರಮಗಳ ಶಾಶ್ವತ ಭಾಗವಾಗಲಿದೆ.
ಈ ಹೊಸ ಕರೋಕೆಗಳು, ಚೆಕ್ ಸಂಗೀತ ಸಂಯೋಜಕ ಜಾನ್ ಕುಂಕ್ ರವರ ಥೀಮ್ ಆಧಾರವಾಗಿ ಮಾಸ್ಟ್ರೋ ಅಲ್ಬೆರಿಕೊ ವಿಟಾಲಿನಿ ರೂಪಿಸಿದ್ದ ಐತಿಹಾಸಿಕ ಕ್ರಿಸ್ಟಸ್ ವಿನ್ಸಿಟ್ ಸಂಗೀತದ ಆಧುನಿಕ ಅಭಿವೃದ್ಧಿಯಾಗಿದೆ. ಆರಂಭದಿಂದಲೇ ವ್ಯಾಟಿಕನ್ ರೇಡಿಯೋದ ವಿಶಿಷ್ಟ ಗುರುತಾಗಿದ್ದ ಈ ಸಂಗೀತವನ್ನು ಪರಂಪರೆಯೊಂದಿಗೆ ನೇರ ಸಂಪರ್ಕ ಉಳಿಸಿಕೊಂಡು, ಸಮಕಾಲೀನ ಸಂಸ್ಕೃತಿ ಮತ್ತು ಸಂವೇದನೆಗಳಿಗೆ ಹೊಂದುವಂತೆ ಹೊಸ ಶೈಲಿಯಲ್ಲಿ ಮರುಸಂಯೋಜಿಸಲಾಗಿದೆ.
ಸಂಪರ್ಕ ದೀಕ್ಷಾಸಂಸ್ಥೆಯ ಪ್ರಿಫೆಕ್ಟ್ ಪಾವ್ಲೊ ರುಫ್ಫಿನಿ ರವರು, ವ್ಯಾಟಿಕನ್ ರೇಡಿಯೋ ತನ್ನ ಕರೋಕೆಗಳಲ್ಲಿಯೂ ಸಹ ತನ್ನ ಗುರುತನ್ನು ನಿರ್ಧರಿಸುವ ವಿಶೇಷ ಸಂಗೀತ ಸಂಬಂಧವನ್ನು ಸದಾ ಬೆಳೆಸಿಕೊಂಡಿದೆ ಎಂದು ಹೇಳಿದರು. ಸಂಗೀತವು ನಮ್ಮ ಜೀವನದಲ್ಲಿ ನಾವು ಹುಡುಕುವ ಚಲನೆಯ ಸಮನ್ವಯತೆಯನ್ನು ನಮ್ಮೊಂದಿಗೆ ಮಾತಾಡುತ್ತದೆ. ಅದು ಪ್ರತಿಧ್ವನಿಗಳನ್ನು ಸೃಷ್ಟಿಸುತ್ತದೆ ಅವು ಸಂಭಾಷಣೆಯಾಗಿ, ಸಂಭಾಷಣೆ ಸಮಾಗಮವಾಗಿ, ಸ್ಮೃತಿ ಜೀವನವಾಗಿ ರೂಪಾಂತರಗೊಳ್ಳುತ್ತವೆ. 95 ವರ್ಷಗಳನ್ನು ಆಚರಿಸುವ ಈ ಕ್ಷಣದಲ್ಲಿ, ಕೆಲವು ಕ್ಷಣಗಳ ಕರೋಕೆಯಲ್ಲಿ ಗುರುತು ಮತ್ತು ಸಮಾಗಮ ಒಟ್ಟುಗೂಡಿ ಬೆಳೆಯುವ ಇತಿಹಾಸವನ್ನು ಸಂಕ್ಷಿಪ್ತಗೊಳಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಈ ಯೋಜನೆಯಲ್ಲಿ ಕ್ರಿಸ್ಟಸ್ ವಿನ್ಸಿಟ್ ಥೀಮ್ ಆಧಾರಿತ ನಾಲ್ಕು ಪ್ರಮುಖ ಕರೋಕೆಗಳಿವೆ. ಪ್ರತಿಯೊಂದು ರೇಡಿಯೋ ದಿನದ ವಿಭಿನ್ನ ಸಮಯವನ್ನು ಪ್ರತಿನಿಧಿಸುತ್ತದೆ ಬೆಳಗಿನ ಎಚ್ಚರಿಕೆಗಾಗಿ ಒಂದು, ಬೆಳಗಿನ ವೇಳೆಗೆ ಒಂದು, ಮಧ್ಯಾಹ್ನದ ವೇಳೆಗೆ ಒಂದು ಮತ್ತು ರಾತ್ರಿ ವೇಳೆಗೆ ಒಂದು. ಜೊತೆಗೆ ಎರಡು ಚಿಕ್ಕ ಕರೋಕೆಗಳೂ ಇವೆ ಒಂದು ಥೀಮ್‌ನ ಆರಂಭ ಭಾಗವನ್ನು ಬಳಸುತ್ತದೆ ಇನ್ನೊಂದು ಅದರ ಅಂತ್ಯದ ಭಾಗವನ್ನು ಪುನರುಪಯೋಗಿಸಿ, ಮೂಲ ಧ್ವನಿ ಗುರುತಿನೊಂದಿಗೆ ತಕ್ಷಣದ ಮತ್ತು ಪರಿಚಿತ ಸಂಪರ್ಕವನ್ನು ನಿರ್ಮಿಸುತ್ತದೆ.
ಇದು ಪರಂಪರೆ ಮತ್ತು ನವೀನತೆಯ ನಡುವೆ ಸಮತೋಲನ ಸಾಧಿಸುವ ಪ್ರಯತ್ನವಾಗಿತ್ತು,ಎಂದು ಮಾಸ್ಟ್ರೋ ಮಾರ್ಚೆಲ್ಲೋ ಫಿಲೋಟೇಯ್ ಹೇಳಿದರು. ಎರಡು ಗಗನಚುಂಬಿಗಳ ನಡುವೆ ಹಗ್ಗದ ಮೇಲೆ ನಡೆಯುವಂತೆ, ಸ್ಪಷ್ಟತೆಯಲ್ಲಿ ಬೀಳದಂತೆ ಪ್ರಯತ್ನಿಸುವುದು. ಆಧುನೀಕರಣ ಎಂದರೆ ಭೂತಕಾಲವನ್ನು ತ್ಯಜಿಸುವುದಲ್ಲ ಅದನ್ನು ಹೊಸ ಕಣ್ಣಿನಿಂದ ಮರುಪಠಿಸುವುದಾಗಿದೆ.
ಇದಕ್ಕೂ ಹೆಚ್ಚಾಗಿ, ಮಾಸ್ಟ್ರೋ ಪಿಯರ್ಲೂಯಿಜಿ ಮೊರೆಲ್ಲಿ ರವರು ಬಾರೋಕ್ ಯುಗದ ವಾದ್ಯ ಸಂಯೋಜನೆಯನ್ನು ನೆನಪಿಸುವ ವಿಶೇಷ ಕರೋಕೆಯನ್ನೂ ರಚಿಸಿದ್ದಾರೆ. ಇದು ವ್ಯಾಟಿಕನ್ ರೇಡಿಯೋದ ಪರಂಪರೆಯೊಂದಿಗೆ ಸೌಹಾರ್ದದಿಂದ ಹೊಂದಿಕೊಳ್ಳುವ ಐತಿಹಾಸಿಕ ಹಾಗೂ ಸಂಗೀತಮಯ ಆಯಾಮವನ್ನು ತಂದುಕೊಡುತ್ತದೆ.
ಎಲ್ಲಾ ಕರೋಕೆಗಳನ್ನು ಇಟಾಲಿಯನ್ ಭಾಷಾ ಚಾನೆಲ್ ಮತ್ತು ವ್ಯಾಟಿಕನ್ ರೇಡಿಯೋದ 30 ವೆಬ್ ರೇಡಿಯೋಗಳಲ್ಲಿ ಒಂದೇ ಸಮಯದಲ್ಲಿ ಪ್ರಸಾರ ಮಾಡಲಾಗುತ್ತದೆ, ಇದರಿಂದ ವಿಶಾಲವಾದ ಸಂಯುಕ್ತ ಶ್ರವಣ ಅನುಭವ ಸೃಷ್ಟಿಯಾಗುತ್ತದೆ.
ವ್ಯಾಟಿಕನ್ ರೇಡಿಯೋ ವಾಟಿಕನ್ ನ್ಯೂಸ್‌ನ ಉಪ ಸಂಪಾದಕೀಯ ನಿರ್ದೇಶಕ ಮಾಸ್ಸಿಮಿಲಿಯಾನೊ ಮೆನಿಚೆಟ್ಟಿ ರವರು, ಸಂಗೀತ ಕಾರ್ಯಕ್ರಮಗಳ ಮೂಲಕ ಪ್ರಸ್ತಾಪಿಸಿ ಕಾರ್ಯಗತಗೊಳಿಸಿದ ಈ ನವೀಕರಣದೊಂದಿಗೆ, ವ್ಯಾಟಿಕನ್ ರೇಡಿಯೋ ತನ್ನ ಸೇವಾ ಮಿಷನ್ ಅನ್ನು ತನ್ನ ಧ್ವನಿ ಲೋಕದ ಮೂಲಕ ಮರುಸ್ಮರಿಸಿ ನವೀಕರಿಸುತ್ತದೆ. ನಂಬಿಕೆಯ ಬೆಳಕಿನಲ್ಲಿ ಭೂತ ಮತ್ತು ವರ್ತಮಾನಗಳ ನಡುವಿನ ಸೇತುವೆಯನ್ನು ಇದು ಹೊಳಪುಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ:
7:00–9:00 – ವೆಕ್-ಅಪ್ ಐಡೆಂಟ್
9:00–11:00 – ಮಾರ್ನಿಂಗ್ ಐಡೆಂಟ್
12:00 – ಐತಿಹಾಸಿಕ ಐಡೆಂಟ್ (ಅಲ್ಬೆರಿಕೊ ವಿಟಾಲಿನಿ ಅವರ ವಾದ್ಯ ಸಂಯೋಜನೆ)
14:00–18:00 – ಆಫ್ಟರ್ನೂನ್ ಐಡೆಂಟ್
24:00 – ಐತಿಹಾಸಿಕ ಐಡೆಂಟ್ (ಅಲ್ಬೆರಿಕೊ ವಿಟಾಲಿನಿ ಅವರ ವಾದ್ಯ ಸಂಯೋಜನೆ)
24:00–6:00 – ನೈಟ್ ಐಡೆಂಟ್