ಹುಡುಕಿ

ವಿಭೂತಿ ಬುಧವಾರದಂದು ಪವಿತ್ರ ಬಲಿಪೂಜೆಯ ಸಮಯದಲ್ಲಿ ಜಗದ್ಗುರು XIVನೇ ಲಿಯೋರವರು ವಿಭೂತಿಯನ್ನು ಹಚ್ಚುತ್ತಾರೆ ವಿಭೂತಿ ಬುಧವಾರದಂದು ಪವಿತ್ರ ಬಲಿಪೂಜೆಯ ಸಮಯದಲ್ಲಿ ಜಗದ್ಗುರು XIVನೇ ಲಿಯೋರವರು ವಿಭೂತಿಯನ್ನು ಹಚ್ಚುತ್ತಾರೆ  (ANSA)

ನಮ್ಮ ಪಾಪ ಮತ್ತು ಜ್ವಾಲೆಯಲ್ಲಿರುವ ಪ್ರಪಂಚದ ಹೊರೆ

ನಮ್ಮ ಸಂಪಾದಕೀಯ ನಿರ್ದೇಶಕರು ಜಗದ್ಗುರು XIVನೇ ಲಿಯೋರವರ ವಿಭೂತಿ ಬುಧವಾರದ ಪವಿತ್ರ ಬಲಿಪೂಜೆಯ ಪ್ರಭೋಧನೆ ಕುರಿತು ಹಾಗೂ “ಜ್ವಾಲೆಯಲ್ಲಿ ಉರಿಯುತ್ತಿರುವ” ಈ ಲೋಕದಲ್ಲಿ ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಹೊಣೆಗಾರಿಕೆಯ ಕುರಿತು ಚಿಂತನೆ ಮಾಡುತ್ತಾರೆ

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರುಸೇಂಟ್ ಸಬೀನಾದ ಬೆಸಿಲಿಕಾದಲ್ಲಿ ವಿಭೂತಿ ಬುಧವಾರದ ಪವಿತ್ರ ಬಲಿಪೂಜೆಯಲ್ಲಿ ನೀಡಿದ ಪ್ರಭೋದನೆಯಲ್ಲಿ, “ತಪ್ಪನ್ನು ಒಪ್ಪಿಕೊಳ್ಳುವವರನ್ನು ಕಂಡುಹಿಡಿಯುವುದು ಎಷ್ಟು ಅಪರೂಪ!” ಎಂದು ಹೇಳಿದರು. ಇಂದಿನ ಕಾಲದಲ್ಲಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ವ್ಯವಸ್ಥೆಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ತಪಸ್ಸು ಕಾಲವು ಕ್ರೈಸ್ತರಿಗೆ ತಮ್ಮನ್ನು ಪಾಪಿಗಳೆಂದು ಅರಿತು ಕ್ಷಮೆ ಮತ್ತು ಪರಿವರ್ತನೆಯ ಅಗತ್ಯವನ್ನು ಒಪ್ಪಿಕೊಳ್ಳುವ ವಿಶೇಷ ಅವಕಾಶವೆಂದು ಅವರು ಹೇಳಿದರು.

ಪಾಪವು ವೈಯಕ್ತಿಕವಾದದ್ದೇ ಸರಿ, ಆದರೆ ಅದು ಸಮಾಜದ ವಾಸ್ತವ ಮತ್ತು ಆನ್‌ಲೈನ್ ಪರಿಸರಗಳಲ್ಲಿ, ನಮ್ಮ ಪರಸ್ಪರ ಸಂಬಂಧಗಳಲ್ಲಿ ಮತ್ತು ಆರ್ಥಿಕ-ಸಾಂಸ್ಕೃತಿಕ-ರಾಜಕೀಯ ವ್ಯವಸ್ಥೆಗಳಲ್ಲಿ ಪಾಪದ ರಚನೆಗಳು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಜಗದ್ಗುರುಗಳು ತಿಳಿಸಿದರು. ಇದರಲ್ಲಿ ಅನ್ಯಾಯ ಮತ್ತು ಅಸಮಾನತೆಗಳನ್ನು ಹುಟ್ಟಿಸುವ ಆರ್ಥಿಕ ವ್ಯವಸ್ಥೆಯ ಕೆಲವು ಅಂಶಗಳು ಸೇರಿವೆ. ಜಗದ್ಗುರು ಫ್ರಾನ್ಸಿಸ್ ರವರು ಇದನ್ನು “ಕೊಲ್ಲುವ ಆರ್ಥಿಕತೆ” ಎಂದು ಕರೆದಿದ್ದರು.

ವಿಭೂತಿಯನ್ನು ಹಣೆಯ ಮೇಲೆ ಸ್ವೀಕರಿಸುವುದು ಜ್ವಾಲೆಯಲ್ಲಿ ಉರಿಯುತ್ತಿರುವ ಲೋಕದ ಭಾರವನ್ನು ಅನುಭವಿಸುವ ಆಹ್ವಾನವಾಗಿದೆ ಎಂದು ಜಗದ್ಗುರುಗಳು ಹೇಳಿದರು. ಯುದ್ಧಗಳಿಂದ ನಾಶವಾದ ನಗರಗಳು, ಅಂತರರಾಷ್ಟ್ರೀಯ ನ್ಯಾಯದ ದುರ್ಬಲತೆ, ಪರಿಸರ ಹಾನಿ ಮತ್ತು ಪವಿತ್ರತೆಯ ಭಾವನೆಯ ಕುಗ್ಗುವಿಕೆ ಇವುಗಳನ್ನೂ ಈ ವಿಭೂತಿ ಸೂಚಿಸುತ್ತದೆ.

ತಪಸ್ಸು ಕಾಲದ ಯಾತ್ರೆಯಲ್ಲಿ ನಾವು ವೈಯಕ್ತಿಕ ಪಾಪಗಳಷ್ಟೇ ಅಲ್ಲ, ಸಮಾಜ ಮಟ್ಟದಲ್ಲಿ ಪ್ರತಿಧ್ವನಿಸುವ ತಪ್ಪುಗಳ ಬಗ್ಗೆ ಆತ್ಮಪರಿಶೀಲನೆ ನಡೆಸಬೇಕು. ಉದಾಹರಣೆಗೆ, 2022ರಲ್ಲಿ ರಷ್ಯಾದ ಸಂಪೂರ್ಣ ಆಕ್ರಮಣದಿಂದ ಆರಂಭವಾದ ಯುಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆಯೇ? ಅಥವಾ ಶಸ್ತ್ರಸಜ್ಜಿಕರಣದ ಹುಚ್ಚು ಓಟವೇ ಪ್ರಧಾನ ಗುರಿಯಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಅದೇ ರೀತಿ, ಹಮಾಸ್ ನಡೆಸಿದ ದಾಳಿಯ ನಂತರ ಗಾಜಾದ ಸಂಪೂರ್ಣ ನಾಶ ಮತ್ತು ಸಾವಿರಾರು ಸಾವುಗಳನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯೂ ನಮ್ಮ ಮುಂದೆ ನಿಂತಿದೆ. ಮೆಡಿಟೆರೇನಿಯನ್ ಸಮುದ್ರದಲ್ಲಿ ಮುಳುಗುತ್ತಿರುವ ವಲಸಿಗರ ದುರಂತವನ್ನೂ ನಾವು ಹೇಗೆ ಸಹಿಸಿಕೊಳ್ಳುತ್ತೇವೆ ಎಂಬ ಆತ್ಮಪರಿಶೀಲನೆ ಅಗತ್ಯವಾಗಿದೆ.

ಕೊನೆಯಲ್ಲಿ, ನಾವು ಪರಿವರ್ತನೆಗೊಳ್ಳಲು ನಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತೇವೆ ಇದು ಪುನರುತ್ಥಾನದ ಸಾಕ್ಷಿಯಾಗಿದೆ, ಎಂದು ಜಗದ್ಗುರುಗಳು ಹೇಳಿದರು. ವಿಭೂತಿ ಯಲ್ಲಿ ಉಳಿಯದೆ, ಎದ್ದು ನಿಲ್ಲಿ ಪುನರ್ ನಿರ್ಮಾಣ ಮಾಡಲು ಈ ತಪಸ್ಸು ಕಾಲವು ನಮ್ಮನ್ನು ಕರೆಯುತ್ತದೆ ಎಂದು ಹೇಳಿದರು.

19 ಫೆಬ್ರವರಿ 2026, 16:27