ಸಿನೋಡ್ ಪೂರ್ವ ಕಥೋಲಿಕ ಧರ್ಮ ಸಭೆಗಳಿಗೆ ಸಮರ್ಪಿತವಾದ ಹೊಸ ಆಯೋಗವನ್ನು ಸ್ಥಾಪಿಸಿದೆ
ವ್ಯಾಟಿಕನ್ ವರದಿ
ಸಿನೊಡ್‌ನ ಪ್ರಧಾನ ಕಾರ್ಯದರ್ಶಿಯು ಸಿನೋಡಲ್ ಪಯಣದ ಹಿನ್ನೆಲೆಯಲ್ಲಿ ಪೂರ್ವ ಧರ್ಮ ಸಭೆಗಳ ಧರ್ಮಶಾಸ್ತ್ರ ಸಂಹಿತೆ (ಸಿ ಸಿಇಒ) ಪರಿಷ್ಕರಣೆಗೆ ಪ್ರಸ್ತಾವನೆಗಳನ್ನು ರೂಪಿಸಲು ಸಮರ್ಪಿತವಾದ ಹೊಸ ಸಂಸ್ಥೆಯನ್ನು ರಚಿಸಿದೆ. ಪೂರ್ವ ಕಾನೂನು ಆಯೋಗ ಎಂದು ಕರೆಯಲ್ಪಡುವ ಈ ಆಯೋಗವು ಫೆಬ್ರವರಿ 20ರಂದು ಸಿನೋಡ್ ಪ್ರಧಾನ ಕಾರ್ಯಾಲಯದ ಕೇಂದ್ರ ಕಚೇರಿಯಲ್ಲಿ ಮೊದಲ ಸಭೆಯನ್ನು ನಡೆಸಿತು.
ಸಮರ್ಪಿತ ಆಯೋಗ
ಈ ಹೊಸ ಆಯೋಗವು 2023ರ ಡಿಸೆಂಬರ್‌ನಲ್ಲಿ ರಚಿಸಲಾದ ಕಾನೋನಿಕಲ್ ಆಯೋಗದ ಕಾರ್ಯದ ಮುಂದುವರಿಕೆಯಾಗಿದೆ. ಆ ಆಯೋಗವು ಸಿ ಸಿಇಒ ಪರಿಷ್ಕರಣೆಗೆ ಕೆಲವು ಪ್ರಸ್ತಾವನೆಗಳನ್ನು ಈಗಾಗಲೇ ಸಲ್ಲಿಸಿತ್ತು ಆದರೆ ಅದರ ಮುಖ್ಯ ಗಮನ ಲ್ಯಾಟಿನ್ ಧರ್ಮ ಸಭೆಯ ಕಾನೂನು ಸಂಹಿತೆಯ ಮೇಲೆಯೇ ಇತ್ತು.
2026ರ ಪೂರ್ವ ಕಾನೋನಿಕಲ್ ಆಯೋಗವು ಸುಯಿ ಐರಿಸ್ ಧರ್ಮ ಸಭೆಗಳ ನಾಯಕರಿಂದ ಬಂದ ಅನೇಕ ಮನವಿಗಳಿಗೆ ಪ್ರತಿಕ್ರಿಯೆಯೂ ಆಗಿದೆ.ಸುಯಿ ಐರಿಸ್ ಧರ್ಮ ಸಭೆಗಳು ಎಂದರೆ ಜಗದ್ಗುರುಗಳೊಂದಿಗೆ ಸಂಪೂರ್ಣ ಏಕತೆಯಲ್ಲಿ ಇದ್ದು, ತಮ್ಮದೇ ಆದ ಪರಂಪರೆ, ಪೂಜಾಕ್ರಮ, ಕಾನೂನು ಮತ್ತು ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಕಥೋಲಿಕ ಧರ್ಮ ಸಭೆಯ 24 ಸ್ವಾಯತ್ತ ಧರ್ಮ ಸಭೆಗಳು.
ಸ್ಥಳೀಯ ಧರ್ಮ ಸಭೆಗಳಿಗೆ ಸೇವೆ ಸಲ್ಲಿಸಲು ಡಿಕಾಸ್ಟರಿಗಳ ನಡುವಿನ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ರಚಿಸಲಾದ ಈ ಆಯೋಗವು ಪೂರ್ವ ಕಾನೂನು ಪರಿಣಿತರನ್ನು ಒಳಗೊಂಡಿದೆ. ಇವರನ್ನು ಶಾಸಕಾಂಗ ಪಠ್ಯಗಳಿಗಾಗಿ ಡಿಕಾಸ್ಟರಿ ಹಾಗೂ ಪೂರ್ವ ಧರ್ಮ ಸಭೆಗಳಿಗಾಗಿ ಡಿಕಾಸ್ಟರಿ ಸಲಹೆಗಾರರಿಂದ ಆಯ್ಕೆ ಮಾಡಲಾಗಿದೆ.
ಸಿನೋಡ್ ಪ್ರಧಾನ ಕಾರ್ಯದರ್ಶಿಯಾದ ಮಾರಿಯೋ ಗ್ರೆಚ್ ರವರು, ಪೂರ್ವ ಕಥೋಲಿಕ ಧರ್ಮ ಸಭೆಗಳು ಮತ್ತು ಲ್ಯಾಟಿನ್ ಧರ್ಮ ಸಭೆಗಳ ನಡುವಿನ ಸಂಬಂಧಗಳ ಕೆಲವು ಅಂಶಗಳ ಕುರಿತ ಅಧ್ಯಯನ ಗುಂಪು ಸಂಖ್ಯೆ 1 ಜೊತೆ ಸಮನ್ವಯವಾಗಿ ಕಾರ್ಯನಿರ್ವಹಿಸಲು ಹಾಗೂ ಪೂರ್ವ ಕಾನೂನುಗಳ ವೈಶಿಷ್ಟ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಲು ಈ ವಿಶೇಷ ಆಯೋಗವನ್ನು ಸ್ಥಾಪಿಸುವುದು ಸೂಕ್ತವೆಂದು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ. ಈ ಅಧ್ಯಯನ ಗುಂಪು 2024ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಸ್ಥಾಪಿಸಿದ ಹತ್ತು ಅಧ್ಯಯನ ಗುಂಪುಗಳಲ್ಲಿ ಒಂದಾಗಿದೆ.
ಹೊಣೆಗಾರಿಕೆ
ಅಲ್ಪಾವಧಿಯಲ್ಲಿ, ಈ ಆಯೋಗವು 2021–2024ರ ಸಿನೋಡಲ್ ಪಯಣದಲ್ಲಿ ಮುಂದಿಟ್ಟ ಕಾನೂನು ಪ್ರಸ್ತಾವನೆಗಳನ್ನು ಜಾರಿಗೆ ತರಲು ಕರಡು ಮಾನದಂಡ ಪಠ್ಯಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಹೊಂದಿದೆ. ವಿಶೇಷವಾಗಿ 2023ರ ಸಿಂಥಸಿಸ್ ವರದಿ ಮತ್ತು 2024ರ ಅಂತಿಮ ದಸ್ತಾವೇಜಿನಲ್ಲಿ ಉಲ್ಲೇಖಿಸಲಾದ ಪ್ರಸ್ತಾವನೆಗಳಿಗೆ ಆದ್ಯತೆ ನೀಡಲಾಗುತ್ತದೆ.
ಸಿನೋಡಾಲಿಟಿಯ ಮನೋಭಾವದಲ್ಲಿ, ಕಾರ್ಡಿನಲ್ ಗ್ರೆಕ್ ಅವರು ಸುಯಿ ಐರಿಸ್ ಧರ್ಮ ಸಭೆಗಳು, ಬಿಷಪ್ ಸಮ್ಮೇಳನಗಳು, ಕಥೋಲಿಕ ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಹಾಗೂ ಆಸಕ್ತ ವ್ಯಕ್ತಿಗಳು 2026ರ ಏಪ್ರಿಲ್ 15ರೊಳಗೆ ತಮ್ಮ ಸಲಹೆಗಳನ್ನು ಸಿನೋಡ್ ಪ್ರಧಾನ ಕಾರ್ಯಾಲಯಕ್ಕೆ ಸಲ್ಲಿಸಲು ಆಹ್ವಾನಿಸಿದ್ದಾರೆ. ಪೂರ್ವ ಕಾನೂನುಗಳ ಪ್ರಸ್ತುತ ವಿಧಾನಗಳನ್ನು ನವೀಕರಿಸುವ ಕಾರ್ಯವನ್ನು ಒಳಗೊಂಡಂತೆ ಆಯೋಗದ ಕೆಲಸವನ್ನು ಡಿಕಾಸ್ಟರಿ ಫಾರ್ ಲೆಜಿಸ್ಲೇಟಿವ್ ಟೆಕ್ಸ್ಟ್ಸ್‌ನ ಕಾರ್ಯದರ್ಶಿ ಸಂಯೋಜಿಸಲಿದ್ದಾರೆ.