ತಪಸ್ಸು ಕಾಲ ಮತ್ತು ರಂಜಾನ್ “ನವೀಕೃತ ಲೋಕಕ್ಕೆ ಪ್ರೇರಕ ಶಕ್ತಿಗಳು” ಎಂದು ಪರಿಗಣಿಸಲ್ಪಡುತ್ತವೆ.
ವ್ಯಾಟಿಕನ್ ವರದಿ
ರಂಜಾನ್ ಮತ್ತು ತಪಸ್ಸು ಕಾಲ ಎಂಬ ಈ ಸಂಯುಕ್ತ ಪವಿತ್ರ ಅವಧಿಯ ಮೂಲಕ ನಮ್ಮ ಒಳಗಿನ ಪರಿವರ್ತನೆ ನವೀಕೃತ ಲೋಕಕ್ಕೆ ಪ್ರೇರಕ ಶಕ್ತಿಯಾಗಲಿ; ಯುದ್ಧದ ಆಯುಧಗಳಿಗೆ ಬದಲಾಗಿ ಶಾಂತಿಯ ಧೈರ್ಯವು ಮೇಲುಗೈ ಸಾಧಿಸಲಿ — ಎಂಬುದು ಅಂತರಧರ್ಮೀಯ ಸಂವಾದಕ್ಕಾಗಿ ಡಿಕ್ಯಾಸ್ಟರಿಯು ರಂಜಾನ್ ಮತ್ತು ಈದ್-ಅಲ್-ಫಿತ್ರ್ ಅಂಗವಾಗಿ ಪ್ರಕಟಿಸಿದ ಸಂದೇಶದ ಮಾತುಗಳಾಗಿವೆ. ಈ ಸಂದೇಶಕ್ಕೆ ಪ್ರಿಫೆಕ್ಟ್ ಜಾರ್ಜ್ ಜಾಕೋಬ್ ಕೂವಕಾಡ್ ಹಾಗೂ ಕಾರ್ಯದರ್ಶಿ ಮೊನ್ಸಿನಿಯರ್ ಇಂದುನಿಲ್ ಜೆ.ಕೆ. ಕೊಡಿತುವಕ್ಕು ಸಹಿ ಹಾಕಿದ್ದಾರೆ.
ಶಾಂತಿ ಇದೇ ನನ್ನ ಹೃತ್ಪೂರ್ವಕ ಆಶಯ,ಎಂದು ಸಂದೇಶ ಹೇಳುತ್ತದೆ, ನಿಮ್ಮ ಪ್ರತಿಯೊಬ್ಬರಿಗೂ, ನಿಮ್ಮ ಕುಟುಂಬಗಳಿಗೆ ಮತ್ತು ನೀವು ವಾಸಿಸುವ ದೇಶಗಳಿಗೆ.” ಕಾರ್ಡಿನಲ್ ಕೂವಕ್ಕಾಡ್ ರವರು ಶಾಂತಿ ಎಂದರೆ ಹೃದಯ, ಮನಸ್ಸು ಮತ್ತು ಜೀವನದ ನಿರಾಯುಧೀಕರಣದಿಂದ ಉದ್ಭವಿಸುವುದು ಅದು ದೇವರ ವರವಾಗಿದ್ದು, ಸಂವಾದ, ನ್ಯಾಯ ಮತ್ತು ಕ್ಷಮೆಯ ಪ್ರೀತಿಯಿಂದ ಪೋಷಿತವಾಗುತ್ತದೆ ಎಂದು ತಿಳಿಸಿದ್ದಾರೆ.
ಮುಸ್ಲಿಮರೊಂದಿಗೆ ಜಗದ್ಗುರುಗಳ ಅಧಿಕಾರ ಸ್ಥಳದ ಏಕತಾಭಾವ ಮತ್ತು ಗೌರವವನ್ನು ವ್ಯಕ್ತಪಡಿಸುವ ಈ ಸಂದೇಶದಲ್ಲಿ, ಕ್ರೈಸ್ತರು ತಪಸ್ಸು ಕಾಲವನ್ನು ಆಚರಿಸುತ್ತಿರುವ ಹಿನ್ನೆಲೆ ಕ್ಯಾಲೆಂಡರ್‌ಗಳ ದೈವಾನುಗ್ರಹಿತ ಹೊಂದಾಣಿಕೆಯನ್ನು ಉಲ್ಲೇಖಿಸಲಾಗಿದೆ. ಇಂದಿನ ಜಗತ್ತು ಮಾಹಿತಿ, ಕಥನಗಳು ಮತ್ತು ಪರಸ್ಪರ ವಿರೋಧಿ ದೃಷ್ಟಿಕೋನಗಳಿಂದ ತುಂಬಿಕೊಂಡಿರುವುದರಿಂದ ನಿರಾಶೆ ಅಥವಾ ಹಿಂಸೆಗೆ ಒಳಗಾಗುವ ಪ್ರಲೋಭನೆ ಎದುರಾಗಬಹುದು ಎಂದು ಅದು ಎಚ್ಚರಿಸುತ್ತದೆ.
ವಿಶ್ವಾಸಿಗಳು ಬೇರೆ ಮಾರ್ಗವನ್ನು ಆಯ್ಕೆ ಮಾಡಬೇಕು ಎಂದು ಕಾರ್ಡಿನಲ್ ಕೂವಕ್ಕಾಡ್ ಹೇಳಿದ್ದಾರೆ. ಕ್ರೈಸ್ತರು ಮತ್ತು ಮುಸ್ಲಿಮರು ಜೀವನವು ನವೀಕರಿಸಿಕೊಳ್ಳುವ ಹೊಸ ಮಾರ್ಗಗಳನ್ನು ಕಲ್ಪಿಸಿ ತೆರೆದಿಡಲು ಕರೆಯಲ್ಪಟ್ಟಿದ್ದಾರೆ. ಇದು ಪ್ರಾರ್ಥನೆ, ನಮ್ಮ ಅಂತರಂಗದ ದೃಷ್ಟಿಯನ್ನು ಶುದ್ಧಗೊಳಿಸುವ ಉಪವಾಸ ಮತ್ತು ಕರುಣೆಯ ಸ್ಪಷ್ಟ ಕೃತ್ಯಗಳ ಮೂಲಕ ಸಾಧ್ಯವಾಗುತ್ತದೆ.
ನ್ಯಾಯ, ಸಮಾನತೆ, ಮಾನವ ಗೌರವ ಮತ್ತು ಸ್ವಾತಂತ್ರ್ಯದ ಬಯಕೆಯಿಂದ ದೇಹಾತ್ಮಕವಾಗಿಯೂ ಆತ್ಮೀಯವಾಗಿಯೂ ಸಂಕಷ್ಟ ಅನುಭವಿಸುವ ಮುಸ್ಲಿಂ ಸಹೋದರ-ಸಹೋದರಿಯರೊಂದಿಗೆ ಧರ್ಮ ಸಭೆಯ ಆತ್ಮೀಯ ಸಮೀಪತೆಯನ್ನು ಕಾರ್ಡಿನಲ್ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರು ಮತ್ತು ಕ್ರೈಸ್ತರು ಪರೀಕ್ಷೆಗಳ ಅನುಭವದಲ್ಲಿ ಮಾತ್ರವಲ್ಲ, “ನಮ್ಮ ಭಂಗಗೊಂಡ ಜಗತ್ತಿಗೆ ಶಾಂತಿಯನ್ನು ಮರುಸ್ಥಾಪಿಸುವ ಪವಿತ್ರ ಕರ್ತವ್ಯದಲ್ಲಿ ಸಹ ಏಕತೆಯಲ್ಲಿದ್ದಾರೆ.ತಪಸ್ಸು ಕಾಲದ ಮತ್ತು ರಂಜಾನ್ ಸಂದೇಶವು ನವೀಕೃತ ಲೋಕಕ್ಕೆ ಪ್ರೇರಕ ಶಕ್ತಿಗಳಾಗಲಿ ಯುದ್ಧದ ಆಯುಧಗಳಿಗೆ ಬದಲಾಗಿ ಶಾಂತಿಯ ಧೈರ್ಯವು ಮೇಲುಗೈ ಸಾಧಿಸಲಿ ಎಂಬ ಆಶಯದೊಂದಿಗೆ ಅಂತ್ಯಗೊಳ್ಳುತ್ತದೆ.