ಹುಡುಕಿ

ಲೌದಾಟೊ ಸಿ  ಗ್ರಾಮದ ಶಾಂತಿಯ ಮೆರವಣಿಗೆ ಲೌದಾಟೊ ಸಿ ಗ್ರಾಮದ ಶಾಂತಿಯ ಮೆರವಣಿಗೆ 

ಲೌದಾಟೊ ಸಿ ಗ್ರಾಮ ಮೈತ್ರಿ ಪಡೆಗಳ ದ್ವಿತೀಯ ವಿಶ್ವಯುದ್ಧದ ಬಾಂಬ್ ದಾಳಿಯ ಬಲಿಗಳನ್ನು ಸ್ಮರಿಸುತ್ತದೆ

ವಿದ್ಯಾರ್ಥಿಗಳು, ನಿವಾಸಿಗಳು ಹಾಗೂ ನಾಗರಿಕ ಮತ್ತು ಧಾರ್ಮಿಕ ಅಧಿಕಾರಿಗಳು, 1944ರ ಫೆಬ್ರವರಿ 10ರಂದು ನಡೆದ ಮೈತ್ರಿ ಪಡೆಗಳ ವಾಯುದಾಳಿಯನ್ನು ಸ್ಮರಿಸಿದರು. ಆ ದಾಳಿಯಲ್ಲಿ ಜಗದ್ಗುರುಗಳ ನಿವಾಸದೊಳಗೆ ಆಶ್ರಯ ಪಡೆದಿದ್ದ 500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.

ವ್ಯಾಟಿಕನ್ ವರದಿ

1944ರ ದುರಂತವು ದ್ವೇಷ ಪ್ರಾಬಲ್ಯ ಸಾಧಿಸಿದಾಗ ಏನಾಗುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ, ಎಂದುಮ್ಯಾನುಯೆಲ್ ಡೊರಾಂಟೆಸ್, ಲಾಡಾಟೊ ಸಿ ಉನ್ನತ ಶಿಕ್ಷಣ ಕೇಂದ್ರದ ಆಡಳಿತ ನಿರ್ದೇಶಕರು ಹೇಳಿದರು.

ಇಂದು ಸ್ಮರಿಸುವುದೆಂದರೆ ಸ್ಪಷ್ಟವಾಗಿ ಘೋಷಿಸುವುದು ಯುದ್ಧವು ಯಾವತ್ತೂ ಪರಿಹಾರವಲ್ಲ.

ಕಾಸ್ಟೆಲ್ ಗಾಂಡೋಲ್ಫೋದಲ್ಲಿನಬೋರ್ಗೊ ಲೌದಟೊ ಸಿ’ ಪ್ರದೇಶದಲ್ಲಿ, ಕ್ಯಾಸ್ಟೆಲ್ ಗ್ಯಾಂಡೋಲ್ಫೊದ ಪಾಂಟಿಫಿಕಲ್ ವಿಲ್ಲಾಗಳ ಉದ್ಯಾನಗಳು ಒಳಗೆ ಆಯೋಜಿಸಲಾದ ಶಾಂತಿ ಮೆರವಣಿಗೆಯಲ್ಲಿ ಫ್ರಾ. ದೊರಾಂತೇಸ್ ಮಾತನಾಡಿದರು. 1944ರ ಫೆಬ್ರವರಿ 10ರಂದು ನಡೆದ ಮೈತ್ರಿ ಪಡೆಗಳ ಬಾಂಬ್ ದಾಳಿಯನ್ನು ಸ್ಮರಿಸಲು ಈ ಕಾರ್ಯಕ್ರಮ ನಡೆಯಿತು ಅಲ್ಲಿ ಆಶ್ರಯ ಪಡೆದಿದ್ದ 500ರಿಂದ 700 ಜನರು ಆ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಯುದ್ಧಕಾಲದಲ್ಲಿ ತೆರೆಯಲಾದ ಬಾಗಿಲುಗಳು

ಕಾಸ್ಟೆಲ್ ಗಾಂಡೋಲ್ಫೋ ಹಾಗೂ ಸುತ್ತಮುತ್ತಲಿನ ಪರ್ವತ ಪಟ್ಟಣಗಳ ವಿದ್ಯಾರ್ಥಿಗಳು, ನಾಗರಿಕರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡುತ್ತಾ, ಫ್ರಾ. ದೊರಾಂತೇಸ್ 82 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಸ್ಮರಿಸಿದರು. ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ, ಮೈತ್ರಿ ಪಡೆಗಳ ಬಾಂಬ್‌ಗಳು ಸಾವಿರಾರು ಸ್ಥಳಚ್ಯುತ ನಾಗರಿಕರಿಗೆ ಆಶ್ರಯವಾಗಿದ್ದ ಸ್ಥಳಗಳನ್ನು ಹೊಡೆದವು.

ಅವರು ಸುರಕ್ಷಿತ ಸ್ಥಳವೊಂದನ್ನು ಮಾತ್ರ ಹುಡುಕುತ್ತಿದ್ದವರು. ಅವರು ರಕ್ಷಣೆಯನ್ನು ಬೇಡಿಕೊಂಡಿದ್ದರು,ಎಂದು ಅವರು ಹೇಳಿದರು. ಅವರನ್ನು ಜಗದ್ಗುರು ಪಿಯಾಸ್ ಸ್ವಾಗತಿಸಿದ್ದರು, ಆದರೆ ಅನೇಕರಿಗೆ ಬದಲಾಗಿ ಮರಣವೇ ಎದುರಾದಿತು.

ಜಗದ್ಗರುಗಳು ಭಾಷಣ ಮಾಡಲಿಲ್ಲ, ಎಂದು ದೊರಾಂತೇಸ್ ಒತ್ತಿಹೇಳಿದರು. ಅವರು ಬಾಗಿಲುಗಳನ್ನು ತೆರೆದರು. ಸ್ಥಳವನ್ನು ಒದಗಿಸಿದರು. ಜೀವಗಳನ್ನು ಉಳಿಸಿದರು. ಮೌಲ್ಯಗಳನ್ನು ಕ್ರಿಯಾಶೀಲ ಕಾರ್ಯಗಳಲ್ಲಿ ಪರಿವರ್ತಿಸುವುದೇ ನಿಜವಾದ ವ್ಯತ್ಯಾಸವನ್ನು ಉಂಟುಮಾಡುತ್ತದೆ.

ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದವರು

ರೂಪುಗೊಳ್ಳುತ್ತಿರುವ ಭವಿಷ್ಯ

ಇಂದು ಅದೇ ಸ್ಥಳದಲ್ಲಿ,ಬೋರ್ಗೊ ಲೌದಾಟೊ ಸಿ’ ರೂಪುಗೊಳ್ಳುತ್ತಿದೆ.

ಒಮ್ಮೆ ಆಶ್ರಯ ನೀಡಲಾಗಿದ್ದ ಸ್ಥಳದಲ್ಲಿ ಈಗ ಭವಿಷ್ಯವನ್ನು ನಿರ್ಮಿಸಲಾಗುತ್ತಿದೆ ನಂಬಿಕೆ, ಶಿಕ್ಷಣ, ಸ್ಥಿರತೆಯ ಚಿಂತನೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ, ಎಂದು ಚಿಕಾಗೋದಲ್ಲಿ ಜನಿಸಿದ ಫ್ರಾ. ದೊರಾಂತೇಸ್ ಹೇಳಿದರು. ಇದು ಕೇವಲ ಸ್ಥಳದ ನಿರಂತರತೆ ಅಲ್ಲ ಅರ್ಥದ ನಿರಂತರತೆಯಾಗಿದೆ. ನಿನ್ನೆ ಬಾಂಬ್‌ಗಳಿಂದ ಜೀವವನ್ನು ರಕ್ಷಿಸಲಾಯಿತು. ಇಂದು ನಿರ್ಲಕ್ಷ್ಯ, ಅನ್ಯಾಯ ಮತ್ತು ಭೂಮಿಯ ಹಾಗೂ ಜನರ ಶೋಷಣೆಯಿಂದ ಜೀವವನ್ನು ರಕ್ಷಿಸಲಾಗುತ್ತಿದೆ.

2026ನೇ ವರ್ಷವನ್ನು ಜಗದ್ಗುರು XIVನೇ ಲಿಯೋರವರು ಜೂಬಿಲಿ ವರ್ಷವೆಂದು ಘೋಷಿಸಿರುವುದನ್ನು ಅವರು ಉಲ್ಲೇಖಿಸಿದರು ಅದು ಫ್ರಾನ್ಸಿಸ್ ಆಫ್ ಅಸಿಸಿಯವರ ನಿಧನದ 800ನೇ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ.

ಫ್ರಾನ್ಸಿಸ್ ನಿಮ್ಮಂತೆಯೇ ಒಬ್ಬ ಯುವಕನಾಗಿದ್ದರು ಅವರಿಗೂ ಕನಸುಗಳೂ ಮಹತ್ವಾಕಾಂಕ್ಷೆಗಳೂ ಇವೆ ಅವನು ವಿಶಿಷ್ಟನಾಗಬೇಕೆಂದಿದ್ದನು, ಎಂದು ದೊರಾಂತೇಸ್ ಹೇಳಿದರು. “ಅವರು ಯುದ್ಧಕ್ಕೆ ಹೋದರು. ಹಿಂಸೆಯನ್ನು ಕಂಡನು. ನಂತರ ಒಂದು ಮೂಲಭೂತ ಸತ್ಯವನ್ನು ಅರಿತುಕೊಂಡರು ಹಿಂಸೆ ಭವಿಷ್ಯವನ್ನು ನಿರ್ಮಿಸುವುದಿಲ್ಲ, ಅದನ್ನು ನಾಶಮಾಡುತ್ತದೆ ಎಂಬುದನ್ನು ಅರಿತರು ಎಂದರು.

20 ಫೆಬ್ರವರಿ 2026, 10:56