ಹೊಸ ಉಪ ಕಾರ್ಯದರ್ಶಿ ತಮ್ಮ ನೇಮಕಾತಿಯಿಂದ “ಆಳವಾದ ಗೌರವವನ್ನು ಅನುಭವಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ವ್ಯಾಟಿಕನ್ ವರದಿ
ಮಾರ್ಚ್ 30ರಂದು ಜಗದ್ಗುರು XIVನೇ ಲಿಯೋರವರು ರಾಜ್ಯ ಕಾರ್ಯದರ್ಶಾಲಯದ ಹೊಸ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಆರ್ಚ್‌ಬಿಷಪ್ ಪಾವ್ಲೋ ರುಡೆಲ್ಲಿ ರವರು, “ಜಗದ್ಗುರು ಲಿಯೋರವರು ತಮ್ಮ ಉನ್ನತ ಧರ್ಮಮಿಷನ್ ಕಾರ್ಯದಲ್ಲಿ ನಿಕಟವಾಗಿ ಸಹಕರಿಸಲು ನೀಡಿದ ಆಹ್ವಾನವು ನಾನು ಅರ್ಹನಾಗದ ವಿಶ್ವಾಸದ ಸಂಕೇತವಾಗಿದ್ದು, ಅದು ನನಗೆ ಆಳವಾದ ಗೌರವವನ್ನು ನೀಡುತ್ತದೆ ಎಂದು ಹೇಳಿದರು.
ಆರ್ಚ್‌ಬಿಷಪ್ ರವರು ದೈವಿಕ ಸಹಾಯವನ್ನು ಕೋರುತ್ತಿದ್ದೇನೆ ಎಂದು ಹೇಳಿ, ವಿಶೇಷವಾಗಿ ಸಂತ XXIIIನೇ ಜಾನ್ ಅವರ ಮಧ್ಯಸ್ಥಿಕೆಗೆ ನನ್ನನ್ನು ಒಪ್ಪಿಸುತ್ತೇನೆ ಎಂದರು. ಅವರು ಕೂಡ ಉತ್ತರ ಇಟಲಿಯ ಬೆರ್ಗಾಮೋ ಪ್ರದೇಶದವರಾಗಿದ್ದು, 20ನೇ ಶತಮಾನದ ಜಗದ್ಗುರುಗಳಾಗಿದ್ದರು.
ಕೊಲಂಬಿಯಾದ ಪೂರ್ವ ಪ್ರೇಷಿತರ ರಾಯಭಾರಿಯಾಗಿದ್ದ ಆರ್ಚ್‌ಬಿಷಪ್ ರುಡೆಲ್ಲಿರವರು, ಇಟಲಿ ಮತ್ತು ಸ್ಯಾನ್ ಮರಿನೊ ಗಣರಾಜ್ಯಕ್ಕೆ ರಾಯಭಾರಿಯಾಗಿ ನೇಮಕಗೊಂಡಿರುವ ವೆನೆಜುವೇಲಾದ ಆರ್ಚ್‌ಬಿಷಪ್ ಎಡ್ಗರ್ ಪೇನಾ ಪರ್ರಾ ರವರನ್ನು ಬದಲಿಸುತ್ತಿದ್ದಾರೆ. ಅವರು ಆರ್ಚ್‌ಬಿಷಪ್ ಪೆಟಾರ್ ರಾಜಿಕ್ ರವರ ಉತ್ತರಾಧಿಕಾರಿಯಾಗಿದ್ದಾರೆ.
ಪ್ರೇಷಿತಲ ಪೇತ್ರನ ಉತ್ತರಾಧಿಕಾರಿಯ ಸೇವೆಯ ಮೇಲೆ ನಂಬಿಕೆ ಹೊಂದಿರುವ ನಾನು,ಎಂದು ಹೊಸ ಉಪ ಕಾರ್ಯದರ್ಶಿ ಹೇಳಿ, “ಪ್ರೇಷಿತರ ಸಂವಿಧಾನ ಪ್ರೆಡಿಕೇಟ್ ಇವಾಂಜೆಲಿಯಮ್ ಸೂಚಿಸಿದ ಆತ್ಮದಲ್ಲಿ ಈ ಸೇವೆಯನ್ನು ಕೈಗೊಳ್ಳಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ, ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ರವರ ಮಾರ್ಗದರ್ಶನ ಹಾಗೂ ಸಾಮಾನ್ಯ ವ್ಯವಹಾರಗಳ ವಿಭಾಗದ ಅಸೆಸರ್ ಮತ್ತು ಎಲ್ಲಾ ಸಿಬ್ಬಂದಿಗಳ ಸಹಕಾರವನ್ನು ನಂಬಿಕೊಂಡು ಕಾರ್ಯನಿರ್ವಹಿಸುವೆನು ಎಂಬ ಅರಿವನ್ನೂ ವ್ಯಕ್ತಪಡಿಸಿದರು.