ಹುಡುಕಿ

Pope Leo visits the Pontifical Ecclesiastical Academy in Rome

ಕಾರ್ಡಿನಲ್ ಪಾರೋಲಿನ್: ಧರ್ಮಾಧ್ಯಕ್ಷೀಯ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿ ವಿಶ್ವಕ್ಕೆ ಶಾಂತಿಯ ಮಾರ್ಗಗಳನ್ನು ಒದಗಿಸುತ್ತದೆ.

ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ರವರು ಭವಿಷ್ಯದ ಜಗದ್ಗುರು ದೌತ್ಯಾಧಿಕಾರಿಗಳನ್ನು ತರಬೇತಿಗೊಳಿಸುವ ಧರ್ಮಾಧ್ಯಕ್ಷೀಯ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿಯ 325ನೇ ವಾರ್ಷಿಕೋತ್ಸವದ ಕುರಿತು ಚಿಂತನೆ ವ್ಯಕ್ತಪಡಿಸಿದರು. ಇದೇ ವೇಳೆ, ಜಗದ್ಗುರು XIVನೇ ಲಿಯೋರವರು ತಮ್ಮ ಆಯ್ಕೆಯಾದ ನಂತರ ಮೊದಲ ಬಾರಿಗೆ ಈ ಸಂಸ್ಥೆಗೆ ಭೇಟಿ ನೀಡಿದರು.

ವ್ಯಾಟಿಕನ್ ವರದಿ

ಧರ್ಮಾಧ್ಯಕ್ಷೀಯ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿಯ ಸ್ಥಾಪನೆಯ 325ನೇ ವಾರ್ಷಿಕೋತ್ಸವದ ಅಂಗವಾಗಿ ವ್ಯಾಟಿಕನ್ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ರವರು, ಇಂದಿನ ಅಂತರರಾಷ್ಟ್ರೀಯ ವ್ಯವಸ್ಥೆಯ ಸಂಕಷ್ಟದ ನಡುವೆ ರಾಷ್ಟ್ರಗಳ ನಡುವೆ ಕ್ರಮ ಮತ್ತು ಶಾಂತಿಯನ್ನು ಖಾತ್ರಿಪಡಿಸುವ ತತ್ವಗಳು, ನಿಯಮಗಳು ಮತ್ತು ವ್ಯವಸ್ಥೆಗಳ ಮೂಲಕ ಶಾಂತಿಯ ಸ್ಪಷ್ಟ ಮಾರ್ಗಗಳನ್ನು ರೂಪಿಸುವ ಕರೆಯನ್ನು ಈ ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಅಕಾಡೆಮಿಯು ಸೋಮವಾರ ಮಧ್ಯಾಹ್ನ ಪಿಯಾಝಾ ದೆಲ್ಲಾ ಮಿನರ್ವಾದಲ್ಲಿರುವ ತನ್ನ ಕೇಂದ್ರದಲ್ಲಿ ಜಗದ್ಗುರು XIVನೇ ಲಿಯೋರವರನ್ನು ಸ್ವಾಗತಿಸಲು ಸಿದ್ಧವಾಗಿರುವ ಸಂದರ್ಭದಲ್ಲೇ ಅವರ ಈ ಅಭಿಪ್ರಾಯಗಳು ವ್ಯಕ್ತವಾದವು. ಇದು ಅವರ ಆಯ್ಕೆಯಾದ ನಂತರದ ಮೊದಲ ಭೇಟಿ ಆಗಿದೆ.

ಕಾರ್ಡಿನಲ್ ಪಾರೋಲಿನ್ ರವರು ಅಕಾಡೆಮಿಯನ್ನು ಇತಿಹಾಸ ಮತ್ತು ನವೀಕರಣವನ್ನು ಒಂದಾಗಿ ಹೊಂದಿರುವ ಸಂಸ್ಥೆ ಎಂದು ವರ್ಣಿಸಿದರು. ಇದು ರಾಜ್ಯ ಕಾರ್ಯದರ್ಶಿತ್ವದ ಭಾಗವಾಗಿದ್ದರೂ, ಪೇತ್ರನ ಉತ್ತರಾಧಿಕಾರಿಯನ್ನು ವಿಶ್ವದಾದ್ಯಂತ ಪ್ರತಿನಿಧಿಸುವವರನ್ನು ತರಬೇತಿಗೊಳಿಸುವ ಜವಾಬ್ದಾರಿಯನ್ನೂ ಹೊಂದಿದೆ ಎಂದು ಹೇಳಿದರು.

ಧರ್ಮಾಧ್ಯಕ್ಷೀಯದೌತ್ಯಾಧಿಕಾರಿಗಳು ಪರಿಸ್ಥಿತಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ಸಂವಾದ ನಡೆಸಲು ಹಾಗೂ ಜನಾಂಗಗಳ ಮತ್ತು ರಾಷ್ಟ್ರಗಳ ಅಗತ್ಯಗಳನ್ನು ಗುರುತಿಸಲು ಸಮರ್ಥರಾಗಿರಬೇಕು ಎಂದು ಅವರು ಹೇಳಿದರು. ಅವರು ಜಗದ್ಗುರುಗಳ ಸ್ಥಳೀಯ ಧರ್ಮ ಸಭೆಗಳ ಮೇಲಿನ ಕಾಳಜಿಯನ್ನು ನಿಜವಾದ ಸಾಕ್ಷಿಗಳಾಗಿ ತೋರಿಸಲು ಅಗತ್ಯವಾದ ಮಿಷನರಿ ಉತ್ಸಾಹವನ್ನು ಹೊಂದಿರಬೇಕು,ಎಂದು ಹೇಳಿದರು.

ಅಕಾಡೆಮಿಯ ಕಾರ್ಯಚಟುವಟಿಕೆ ಕುರಿತು ಮಾತನಾಡಿದ ಅವರು, ಇದರ ಶಿಕ್ಷಣ ಕಾರ್ಯವು “ಮೂಲತಃ ಧರ್ಮ ಸಭೆಗೆ ಸಂಬಂಧಿತ”ವಾಗಿದೆ ಎಂದು ಹೇಳಿದರು. ಜಗದ್ಗುರುಗಳ ಅಧಿಕಾರ ಸ್ಥಳದ ದೌತ್ಯ ಕಾರ್ಯವು ಕೇವಲ ‘ಸಾಫ್ಟ್ ಪವರ್’ ಅನ್ನು ಮೀರಿ ಬಹಳ ದೂರ ವಿಸ್ತರಿಸಿದೆ ಎಂದು ಅವರು ವಿವರಿಸಿದರು.

ಅಕಾಡೆಮಿ ಭವಿಷ್ಯದ ದೌತ್ಯಾಧಿಕಾರಿಗಳಿಗೆ ಧರ್ಮ ಸಭೆಯ ಸಾಮಾಜಿಕ ಬೋಧನೆಯ ಬೆಳಕಿನಲ್ಲಿ ಅಂತರರಾಷ್ಟ್ರೀಯ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಜಾಗತಿಕ ಸಮುದಾಯದ ವ್ಯವಸ್ಥೆಗಳೊಂದಿಗೆ ಸಮರ್ಪಕ ವಿವೇಕದಿಂದ ಸಂಪರ್ಕ ಸಾಧಿಸುವಂತೆ ತರಬೇತಿ ನೀಡುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ಕೇಳುವಿಕೆ, ಸಂವಾದ, ವಿನಯ ಮತ್ತು ಇತರರೊಂದಿಗೆ ಸಮೀಪತೆ ಎಂಬ ಯಾಜಕ ಗುಣಗಳನ್ನು ಬೆಳೆಸಲಾಗುತ್ತದೆ.

ಜಗದ್ಗುರು ಫ್ರಾನ್ಸಿಸ್ ರವರ ಸುಧಾರಣೆಯನ್ನು ಸ್ಮರಿಸಿದ ಕಾರ್ಡಿನಲ್ ಪಾರೋಲಿನ್, ಇಲ್ ಮಿನಿಸ್ಟ್ರೋ ಪೆಟ್ರಿನೊ ಎಂಬ ಚಿರೋಗ್ರಾಫ್ ಮೂಲಕ ಅಕಾಡೆಮಿಯ ಧ್ಯೇಯ ಮತ್ತು ರಚನೆಯಲ್ಲಿ ಮಹತ್ವದ ನವೀಕರಣ ನಡೆದಿದೆ ಎಂದು ಹೇಳಿದರು. ಜಗದ್ಗುರು ಫ್ರಾನ್ಸಿಸ್ ರವರು ವ್ಯಾಟಿಕನ್ ದೌತ್ಯಾಧಿಕಾರಿಗಳನ್ನು “ಕೈಯಲ್ಲಿ ಸ್ಯೂಟ್‌ಕೇಸ್ ಹಿಡಿದ ಯಾಜಕರು” ಎಂದು ವರ್ಣಿಸಿದ್ದನ್ನು ಉಲ್ಲೇಖಿಸಿ, ಅವರ ಸೇವೆಯ ಧರ್ಮಾಧಿಕಾರಿಗಳ ಮತ್ತು ಸುವಾರ್ತಾ ಸ್ವಭಾವವನ್ನು ಅವರು ಒತ್ತಿಹೇಳಿದರು.

ಈ ಸುಧಾರಣೆಯಡಿ, ಅಕಾಡೆಮಿಯನ್ನು ದೌತ್ಯ ವಿಜ್ಞಾನಗಳ ಉನ್ನತ ತರಬೇತಿ ಸಂಸ್ಥೆಯಾಗಿ ಮರುಸಂರಚಿಸಲಾಗಿದ್ದು, ಈಗ ಅದು ಲೈಸೆನ್ಸಿಯೇಟ್ ಮತ್ತು ಡಾಕ್ಟರೇಟ್ ಪದವಿಗಳನ್ನು ನೀಡುತ್ತದೆ.

ಇಂದಿನ ಅಂತರರಾಷ್ಟ್ರೀಯ ದೌತ್ಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಸಂಘರ್ಷಗಳನ್ನು ತಡೆಯಲು ಅಥವಾ ಪರಿಹರಿಸಲು ದೌತ್ಯದ ಸಾಮರ್ಥ್ಯ ಸೀಮಿತವಾಗಿದೆ ಎಂಬ ಚಿಂತೆಯನ್ನು ಒಪ್ಪಿಕೊಂಡರು. ಇದರ ಪ್ರತಿಕ್ರಿಯೆಯಾಗಿ, ಕಾನೂನು, ಇತಿಹಾಸ, ರಾಜಕೀಯ ಮತ್ತು ಆರ್ಥಿಕ ಅಧ್ಯಯನಗಳನ್ನು ಧರ್ಮ ಸಭೆಯ ಧಾರ್ಮಿಕ ಶಿಸ್ತಿನೊಂದಿಗೆ ಹಾಗೂ ಸುವಾರ್ತಾ ಧ್ಯೇಯದೊಂದಿಗೆ ಸಂಯೋಜಿಸಿದ ನವೀಕೃತ ತರಬೇತಿಯನ್ನು ಅಕಾಡೆಮಿ ನೀಡುತ್ತಿದೆ ಎಂದು ಹೇಳಿದರು.

ಆದರೆ, ತಾಂತ್ರಿಕ ತರಬೇತಿ ಮಾತ್ರ ಸಾಕಾಗುವುದಿಲ್ಲ ಎಂದು ಅವರು ಒತ್ತಿಹೇಳಿದರು. “ಒಬ್ಬ ದೌತ್ಯಾಧಿಕಾರಿ ಮೊದಲು ಸಾಕ್ಷಿಯಾಗಬೇಕು, ನಂತರವೇ ಮಾತುಕತೆ ನಡೆಸಬೇಕು,” ಎಂದು ಹೇಳಿದರು.

ಕೊನೆಯಲ್ಲಿ, ಬಲಪ್ರಯೋಗದ ಪುನರುಜ್ಜೀವನ ಮತ್ತು ಅಂತರರಾಷ್ಟ್ರೀಯ ಕಾನೂನಿನ ಅವಮಾನದಿಂದ ಗುರುತಿಸಲ್ಪಟ್ಟಿರುವ ಜಾಗತಿಕ ವ್ಯವಸ್ಥೆಯ ಸಂಕಷ್ಟವನ್ನು ಶಾಂತಿಯ ಸ್ಪಷ್ಟ ಮಾರ್ಗಗಳನ್ನು ರೂಪಿಸುವುದರಿಂದ ಮಾತ್ರ ಎದುರಿಸಬಹುದು ಎಂದು ಅವರು ಹೇಳಿದರು.

“ಸ್ಥಾಪನೆಯಿಂದ 325 ವರ್ಷಗಳ ನಂತರವೂ ಧರ್ಮಾಧ್ಯಕ್ಷೀಯ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿಗೆ ಇಂದು ವಹಿಸಲಾಗಿದೆ.”ಎಂದು ಅವರು ಹೇಳಿದರು,

27 ಏಪ್ರಿಲ್ 2026, 20:54