ಹುಡುಕಿ

ಸಂವಹನ ಇಲಾಖೆಯಿಂದ ಆಯೋಜಿಸಲಾದ "ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು" ಸಮ್ಮೇಳನ. ಸಂವಹನ ಇಲಾಖೆಯಿಂದ ಆಯೋಜಿಸಲಾದ "ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು" ಸಮ್ಮೇಳನ.  (ANSA)

“ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು”: ಅರ್ಬಾನಿಯಾನಾ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ.

ಸಂವಹನ ಡಿಕಾಸ್ಟರಿ, ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿ ಹಾಗೂ XXIIIನೇ ಜಾನ್ ರವರ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಮೇ 21ರಂದು ನಡೆಯಲಿದೆ.

ವ್ಯಾಟಿಕನ್ ವರದಿ

ಸಾಮಾಜಿಕ ಸಂವಹನಗಳ ವಿಶ್ವ ದಿನವನ್ನು ಅಂಗವಾಗಿ, ಸಂವಹನ ಡಿಕಾಸ್ಟರಿ ಮೇ 21ರ ಗುರುವಾರ ಪಾಂಟಿಫಿಕಲ್ ಅರ್ಬಾನಿಯಾನಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.

“ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು” ಎಂಬ ವಿಷಯವು ಸಾಮಾಜಿಕ ಸಂವಹನಗಳ ವಿಶ್ವ ದಿನಕ್ಕಾಗಿ ಜಗದ್ಗುರು XIVನೇ ಲಿಯೋರವರು ನೀಡಿದ ಸಂದೇಶವನ್ನು ಪ್ರತಿಧ್ವನಿಸುತ್ತದೆ. ಜೊತೆಗೆ, ಕೃತಕ ಬುದ್ಧಿಮತ್ತೆ ಮತ್ತು ಅದು ವ್ಯಕ್ತಿಗಳು, ಸಮುದಾಯಗಳು ಹಾಗೂ ರಾಷ್ಟ್ರಗಳ ಜೀವನದ ಮೇಲೆ ಬೀರುವ ಪರಿಣಾಮಗಳ ಕುರಿತು ಸಂವಾದ ನಡೆಸಲು ಅಕಾಡೆಮಿಕ್ ವಲಯದ ಗಣ್ಯರು, ಸಂಸ್ಥೆಗಳ ಪ್ರತಿನಿಧಿಗಳು, ಉನ್ನತ ತಂತ್ರಜ್ಞಾನ ತಜ್ಞರು ಮತ್ತು ಪತ್ರಕರ್ತರನ್ನು ಆಹ್ವಾನಿಸಿರುವ ಆಯೋಜಕರ ಮನೋಭಾವವನ್ನೂ ಇದು ಪ್ರತಿಬಿಂಬಿಸುತ್ತದೆ.

ಚಿಂತನೆ ಮತ್ತು ಸಂವಾದದ ಕ್ಷಣ

ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿ ಹಾಗೂ  XXIIIನೇ ಜಾನ್ ರವರ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವು ಮೇ 21ರಂದು ಪಾಂಟಿಫಿಕಲ್ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ದಿನಪೂರ್ತಿ ನಡೆಯಲಿದೆ.

“ಸಂವಹನ ಎಂಬ ವರವನ್ನು ಮಾನವತೆಯ ಅತ್ಯಂತ ಆಳವಾದ ಸತ್ಯವೆಂದು ಕಾಪಾಡಿಕೊಳ್ಳಬೇಕು,ಎಲ್ಲಾ ತಾಂತ್ರಿಕ ಆವಿಷ್ಕಾರಗಳೂ ಅದೇ ದಿಕ್ಕಿನಲ್ಲಿ ರೂಪುಗೊಳ್ಳಬೇಕು” ಎಂಬ ಜಗದ್ಗುರುಗಳ ಪ್ರೇರಣೆಗೆ ಪ್ರತಿಕ್ರಿಯೆಯಾಗಿ, ಈ ಸಮ್ಮೇಳನವು ಚಿಂತನೆ ಮತ್ತು ಸಂವಾದದ ವೇದಿಕೆಯಾಗುವುದನ್ನು ಉದ್ದೇಶಿಸಿದೆ.

ಈ ಸಮ್ಮೇಳನವನ್ನು ಸಂವಹನ ಡಿಕಾಸ್ಟರಿಯ ಪ್ರಿಫೆಕ್ಟ್ ಪಾವೊಲೊ ರುಫಿನಿ ಹಾಗೂ ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಜೋಸ್ ಟೊಲೆಂಟಿನೋ ಡಿ ಮೆಂಡೋನ್ಸಾ ರವರು ಉದ್ಘಾಟಿಸಲಿದ್ದಾರೆ.

15 ಮೇ 2026, 19:49