ಹುಡುಕಿ

ಸಂವಹನ ಇಲಾಖೆಯು ಆಯೋಜಿಸಿರುವ ಅಂತರರಾಷ್ಟ್ರೀಯ ಸಮ್ಮೇಳನವಾದ ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು. ಸಂವಹನ ಇಲಾಖೆಯು ಆಯೋಜಿಸಿರುವ ಅಂತರರಾಷ್ಟ್ರೀಯ ಸಮ್ಮೇಳನವಾದ ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು.  (@Fatima Mesaud Barreras)

ಮಾಧ್ಯಮಗಳು, ಸಮುದಾಯಗಳು ಮತ್ತು ಅಸಮಾನತೆಗಳ ಮೇಲೆ ಕೃತಕ ಬುದ್ಧಿಮತ್ತೆಯ ಪರಿಣಾಮವನ್ನು ವಿಶ್ಲೇಷಿಸುವುದು.

ಸಂವಹನಗಳ ಡಿಕಾಸ್ಟರಿಯು ಆಯೋಜಿಸಿರುವ ಹಾಗೂ ವಿಶ್ವ ಸಾಮಾಜಿಕ ಸಂವಹನ ದಿನಕ್ಕಾಗಿ ಜಗದ್ಗುರು ಲಿಯೋರವರು ನೀಡಿದ ಸಂದೇಶದಿಂದ ಪ್ರೇರಿತವಾದ “ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು” ಎಂಬ ಸಮ್ಮೇಳನವು, ಅಂತರರಾಷ್ಟ್ರೀಯ ಶಿಕ್ಷಣತಜ್ಞರು, ತಂತ್ರಜ್ಞಾನ ಪರಿಣಿತರು, ಪತ್ರಕರ್ತರು ಮತ್ತು ಇತರರನ್ನು ಒಂದೇ ವೇದಿಕೆಗೆ ತರಿಸಿ, ಸಂಬಂಧಗಳು, ಮಾಧ್ಯಮಗಳು, ಸಮಾಜಗಳು ಮತ್ತು ಸಮುದಾಯಗಳ ಮೇಲೆ ಕೃತಕ ಬುದ್ಧಿಮತ್ತೆಯ ಪರಿಣಾಮವನ್ನು ಚರ್ಚಿಸುತ್ತದೆ.

ವ್ಯಾಟಿಕನ್ ವರದಿ

ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿತ್ವವನ್ನು ಕಾಪಾಡುವ ಕುರಿತು ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸಿಕ್ಲಿಕಲ್ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪ್ರಕಟವಾಗುವ ಕೆಲವೇ ದಿನಗಳ ಮುನ್ನ, ವಾಟಿಕನ್‌ನ ಸಂವಹನ ಡಿಕಾಸ್ಟರಿಯು ಅಂತರರಾಷ್ಟ್ರೀಯ ಶಿಕ್ಷಣತಜ್ಞರು, ತಂತ್ರಜ್ಞಾನ ಪರಿಣಿತರು, ಪತ್ರಕರ್ತರು ಮತ್ತು ಇತರರನ್ನು ಒಂದೇ ವೇದಿಕೆಗೆ ಸೇರಿಸಿ, ಈ ಮಹತ್ವದ ವಿಷಯದ ಕುರಿತು ಚರ್ಚೆ ಮತ್ತು ಚಿಂತನೆ ನಡೆಸಿತು.

“ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು” ಎಂಬ ಈ ಅಂತರರಾಷ್ಟ್ರೀಯ ಸಮ್ಮೇಳನವು, ವಿಶ್ವ ಸಾಮಾಜಿಕ ಸಂವಹನ ದಿನಕ್ಕಾಗಿ ಜಗದ್ಗುರು ಲಿಯೋರವರು ನೀಡಿದ ಸಂದೇಶದಿಂದ ಪ್ರೇರಿತವಾಗಿತ್ತು. ರೋಮಿನ ಪೊಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿ ಹಾಗೂ  XXIIIನೇ ಜಾನ್ ರವರುಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನವು ಎಐ ವ್ಯಕ್ತಿಗಳ, ಸಮುದಾಯಗಳ ಮತ್ತು ರಾಷ್ಟ್ರಗಳ ಜೀವನದ ಮೇಲೆ ಬೀರುವ ಪರಿಣಾಮವನ್ನು ಪರಿಶೀಲಿಸಿತು.

ಸಂವಹನ ಡಿಕಾಸ್ಟರಿಯ ಪ್ರಿಫೆಕ್ಟ್ ಪಾವ್ಲೋ ರುಫಿನಿ ರವರು, “ಸಂರಕ್ಷಿಸುವುದು” ಎಂದರೆ ಪ್ರೀತಿ ಮತ್ತು ಜವಾಬ್ದಾರಿಯಿಂದ ಮಾನವನನ್ನು ಕಾಪಾಡುವುದು ಎಂದು ಹೇಳಿದರು. ಆಲ್ಗೋರಿದಮ್‌ಗಳು ಮತ್ತು ತಂತ್ರಜ್ಞಾನಗಳು ನಮ್ಮ ಪರವಾಗಿ ಯೋಚಿಸಲು ಆರಂಭಿಸಿದಾಗ, ಮಾನವ ಜ್ಞಾನ ಮತ್ತು ಸಂಬಂಧಗಳು ಅಪಾಯಕ್ಕೊಳಗಾಗುತ್ತವೆ ಎಂದು ಅವರು ಎಚ್ಚರಿಸಿದರು. ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಜೋಸೆ ಟೋಲೆಂಟಿನೊ ದೆ ಮೆಂಡೋನ್ಸಾ ರವರು, “ಮಾನವನನ್ನು ಕೇವಲ ಅಂಕಿ-ಅಂಶ, ಪ್ರೊಫೈಲ್ ಅಥವಾ ಆಲ್ಗೋರಿದಮ್‌ಗೆ ಸೀಮಿತಗೊಳಿಸಲಾಗುವುದಿಲ್ಲ” ಎಂದು ಒತ್ತಿಹೇಳಿದರು.

ಸಮ್ಮೇಳನದ ಮೊದಲ ಅಧಿವೇಶನದಲ್ಲಿ ಎಐ ಮಾಧ್ಯಮ, ಸಮಾಜ ಮತ್ತು ಸಮುದಾಯಗಳ ಮೇಲೆ ಬೀರುವ ಪರಿಣಾಮವನ್ನು ಚರ್ಚಿಸಲಾಯಿತು. ಜಾಗ್ರೆಬ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮರಿಯಾನಾ ಗ್ರ್ಬೆಶಾ ಝೆನ್ಜೆರೋವಿಚ್ ರವರು, ಎಐ ಮೂಲಕ ಸುಳ್ಳುಮಾಹಿತಿ, ಕೋಪ ಹುಟ್ಟಿಸುವ ವಿಷಯಗಳು ಮತ್ತು ನಂಬಿಕೆಯ ಸಂಕಟ ಹೆಚ್ಚಾಗಿದೆ ಎಂದು ಹೇಳಿದರು. ಜನರು ಇನ್ನು ಯಾರನ್ನೂ ಅಥವಾ ಯಾವುದನ್ನೂ ನಂಬದ ಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಆದರೆ ಶಿಕ್ಷಣ, ಜವಾಬ್ದಾರಿ ಮತ್ತು ಸಹಕಾರವೇ ಇದಕ್ಕೆ ಪರಿಹಾರ ಎಂದು ಅವರು ತಿಳಿಸಿದರು.

ನ್ಯೂ ಪಬ್ಲಿಕ್ ಸಂಸ್ಥೆಯ ಸಹ-ಸ್ಥಾಪಕ ಎಲಿ ಪ್ಯಾರೈಸರ್ ರವರು, ಎಐ ಸಮಾಜಪರವಾಗಿಯೂ ರೂಪುಗೊಳ್ಳಬಹುದು ಎಂದು ಹೇಳಿದರು. ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆ ಕಾಶ್ಮೀರ್ ಹಿಲ್ ಅವರು, ಕೆಲವರು ಎಐ ಚಾಟ್‌ಬಾಟ್‌ಗಳೊಂದಿಗೆ ಸಂಬಂಧ ಬೆಳೆಸಿ ವಾಸ್ತವಿಕತೆಯಿಂದ ದೂರವಾಗುತ್ತಿದ್ದಾರೆ ಎಂದು ಎಚ್ಚರಿಸಿದರು. ವಾಷಿಂಗ್ಟನ್ ಪೋಸ್ಟ್ ತಂತ್ರಜ್ಞಾನ ಮುಖ್ಯಸ್ಥ ವಿನೀತ್ ಖೋಸ್ಲಾ ರವರು, ವಿಶ್ವಾಸಾರ್ಹ ಸುದ್ದಿಗಳನ್ನು ಜನರಿಗೆ ತಲುಪಿಸಲು ಮತ್ತು ಪತ್ರಕರ್ತರ ಕಾರ್ಯಕ್ಕೆ ಬೆಂಬಲ ನೀಡಲು ಎಐ ಉಪಕರಣಗಳನ್ನು ಬಳಸುತ್ತಿರುವುದಾಗಿ ಹೇಳಿದರು.

ಎಐ ಸಾಮಾಜಿಕ ಅಸಮಾನತೆಗಳನ್ನು ಮತ್ತಷ್ಟು ಗಾಢಗೊಳಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಮೆಕ್ಸಿಕೋದ ಪ್ರಾಧ್ಯಾಪಕಿ ಪಾವ್ಲಾ ರಿಕಾರ್ಟೆ ಕ್ವಿಜಾನೋ ರವರು, ಎಐ ಅಭಿವೃದ್ಧಿಯ ಪ್ರಭುತ್ವ ಮಾದರಿ ಅಂಚಿನ ಸಮುದಾಯಗಳು ಮತ್ತು ರಾಷ್ಟ್ರಗಳಿಗೆ ಅನ್ಯಾಯವನ್ನು ಉಂಟುಮಾಡುತ್ತಿದೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾದ ಪ್ರಾಧ್ಯಾಪಕ ಬೆಂಜಮಿನ್ ರೋಸ್ಮನ್ ರವರು, ಎಐಯನ್ನು ರೂಪಿಸುವ ಅವಕಾಶ ಕೆಲವೇ ರಾಷ್ಟ್ರಗಳು ಮತ್ತು ಕಂಪನಿಗಳ ಕೈಯಲ್ಲಿ ಸೀಮಿತವಾಗಿದ್ದರೆ, ಅದು ಮಾನವಕುಲದ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಎಚ್ಚರಿಸಿದರು.

ಕೊನೆಯಲ್ಲಿ, ಅಲ್ಗಾರಿದಮಿಕ್ ಜಸ್ಟೀಸ್ ಲೀಗ್ ಸಂಸ್ಥಾಪಕಿ ಜಾಯ್ ಬುವೋಲಾಂವಿನಿ ರವರು, ಎಐ ಭೇದಭಾವ ಮತ್ತು ಶೋಷಣೆಯಿಂದ ಬಳಲುತ್ತಿರುವವರನ್ನು “ಎಕ್ಸ್‌ಕೋಡೆಡ್” ಎಂದು ವರ್ಣಿಸಿದರು. ಕಲಾವಿದರ ಕೃತಿಗಳನ್ನು ಕಳವುಮಾಡುವುದು, ತಪ್ಪು ಗುರುತಿಸುವಿಕೆ ಮತ್ತು ಯುದ್ಧಗಳಲ್ಲಿ ಎಐ ಬಳಕೆ ಮುಂತಾದ ಅಪಾಯಗಳನ್ನು ಅವರು ಉಲ್ಲೇಖಿಸಿದರು. “ಯಂತ್ರಗಳ ಜಗತ್ತಿನಲ್ಲಿ ಮಾನವತ್ವವನ್ನು ಕಾಪಾಡಲು ಇನ್ನೂ ತಡವಾಗಿಲ್ಲ” ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

21 ಮೇ 2026, 22:14