ಹುಡುಕಿ

“2026.05.05: ಕಾರ್ಡಿನಲ್ ಪಾರೋಲಿನ್ ಸಾನ್ ಜಿಯೋವನ್ನಿ ರೊಟೊಂಡೋದಲ್ಲಿ” “2026.05.05: ಕಾರ್ಡಿನಲ್ ಪಾರೋಲಿನ್ ಸಾನ್ ಜಿಯೋವನ್ನಿ ರೊಟೊಂಡೋದಲ್ಲಿ” 

ಕಾಡಿ೯ನಲ್ ಪಿಯತ್ರೋ ಪಾರೋಲಿನ್: ಜಗದ್ಗುರು XIVನೇ ಲಿಯೋರವರು ತಮ್ಮ ಮಾರ್ಗದಲ್ಲಿ ಮುಂದುವರಿಯುತ್ತಾ ಶಾಂತಿಯನ್ನು ಘೋಷಿಸುತ್ತಿದ್ದಾರೆ.

ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರ ಕಾಸಾ ಸೊಲ್ಲಿವೊ ಡೆಲ್ಲಾ ಸೊಫೆರೆನ್ಜಾ ಸಂಸ್ಥೆಯ 70ನೇ ವಾರ್ಷಿಕೋತ್ಸವದ ಆಚರಣೆಗಳ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಜಗದ್ಗುರು XIVನೇ ಲಿಯೋರವರ ಕುರಿತು ನೀಡಿದ ಇಂದಿನ ಹೇಳಿಕೆಗಳ ಬಗ್ಗೆ ಮಾತನಾಡುತ್ತಾ, “ಜಗದ್ಗುರುಗಳು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಅದು ಅತ್ಯಂತ ಕ್ರೈಸ್ತಸಹಜವಾದ ಪ್ರತಿಕ್ರಿಯೆಯಾಗಿತ್ತು. ಅವರು ತಮ್ಮ ಪಾತ್ರಕ್ಕೆ ಅಗತ್ಯವಿರುವುದನ್ನೇ ಮಾಡುತ್ತಿದ್ದಾರೆ” ಎಂದು ಹೇಳಿದರು.

ವ್ಯಾಟಿಕನ್ ವರದಿ

ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರು ಹೇಳಿದರು: ಜಗದ್ಗುರು XIVನೇ ಲಿಯೋರವರು ತಮ್ಮ ಮಾರ್ಗದಲ್ಲಿ ಮುಂದುವರಿಯುತ್ತಿದ್ದಾರೆ. ಅಂದರೆ ಸುವಾರ್ತೆಯನ್ನು ಸಾರುವುದು, ಶಾಂತಿಯನ್ನು ಸಾರುವುದು ಸಂತ ಪೌಲರು ಹೇಳಿರುವಂತೆ “ಸಮಯೋಚಿತವಾಗಿರಲಿ ಅಥವಾ ಅಸಮಯೋಚಿತವಾಗಿರಲಿ” ಎಂದು.

ಈ ಮಾತುಗಳನ್ನು ಅವರು ಕಾಸಾ ಸೊಲ್ಲಿವೊ ಡೆಲ್ಲಾ ಸೊಫೆರೆನ್ಜಾ  ಆಸ್ಪತ್ರೆಯ 70ನೇ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ಹೇಳಿದರು. ಈ ಆಸ್ಪತ್ರೆಯನ್ನು 1956ರಲ್ಲಿ ಸಂತ ಪಾದ್ರೆ ಪಿಯೋ ಸ್ಥಾಪಿಸಿದ್ದರು. ದಕ್ಷಿಣ ಇಟಲಿಯ ಪ್ರಮುಖ ಆಸ್ಪತ್ರೆಗಳಲ್ಲೊಂದಾದ ಇದು ಚಿಕಿತ್ಸೆ, ಸಂಶೋಧನೆ ಮತ್ತು ಆರೈಕೆ ಕೇಂದ್ರಗಳಿಗಾಗಿ ಪ್ರಸಿದ್ಧವಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಜಗದ್ಗುರು XIVನೇ ಲಿಯೋರವರ ವಿರುದ್ಧ ಮತ್ತೆ ಟೀಕೆ ಮಾಡಿದ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಕಾರ್ಡಿನಲ್ ಪ್ರತಿಕ್ರಿಯಿಸಿದರು. ಇದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರೊಂದಿಗೆ ವ್ಯಾಟಿಕನ್‌ನಲ್ಲಿ ನಡೆಯಲಿರುವ ಭೇಟಿಗೆ ಮೂರು ದಿನಗಳ ಮೊದಲು ಸಂಭವಿಸಿದೆ.

“ಈ ಹೊಸ ದಾಳಿಗಳ ನಡುವೆಯೂ, ಜಗದ್ಗುರುಗಳು ಮತ್ತೆ ಪ್ರತಿಕ್ರಿಯಿಸುವ ಅವಕಾಶ ಸಿಗುತ್ತದೆಯೇ ಎಂಬುದು ನನಗೆ ತಿಳಿದಿಲ್ಲ,” ಎಂದು ಅವರು ಹೇಳಿದರು. ಆಫ್ರಿಕಾದ ಪ್ರೇಷಿತರ ಯಾತ್ರೆಯ ಸಂದರ್ಭದಲ್ಲಿ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಜಗದ್ಗುರುಗಳು ನೀಡಿದ ಹಿಂದಿನ ಪ್ರತಿಕ್ರಿಯೆಯನ್ನು ಅವರು ಉಲ್ಲೇಖಿಸಿ, ಅವರ ಸಂದೇಶ “ಅದೇ ಹಾಗೆಯೇ ಉಳಿದಿದೆ” ಎಂದು ಹೇಳಿದರು.

“ಜಗದ್ಗುರುಗಳು  ಈಗಾಗಲೇ ಪ್ರತಿಕ್ರಿಯಿಸಿದ್ದಾರೆ, ನಾನು ಅದಕ್ಕೆ ಮತ್ತೇನೂ ಸೇರಿಸುವುದಿಲ್ಲ,” ಎಂದು ಕಾರ್ಡಿನಲ್ ರವರು ಹೇಳಿದರು. ಜಗದ್ಗುರು XIVನೇ ಲಿಯೋರವರ ಪ್ರತಿಕ್ರಿಯೆ “ಅತ್ಯಂತ ಕ್ರೈಸ್ತಸಹಜವಾದದ್ದು” ಎಂದು ಅವರು ಮತ್ತೆ ಒತ್ತಿಹೇಳಿದರು ಅವರು ತಮ್ಮ ಕರ್ತವ್ಯವಾದ ಶಾಂತಿಯನ್ನು ಸಾರುವುದನ್ನು ಮಾಡುತ್ತಿದ್ದಾರೆ. “ಇದು ಎಲ್ಲರಿಗೂ ಇಷ್ಟವಾಗುತ್ತದೆಯೇ ಇಲ್ಲವೇ ಎಂಬುದು ಬೇರೆ ವಿಷಯ,” ಎಂದು ಅವರು ಹೇಳಿದರು. “ಎಲ್ಲರೂ ಒಂದೇ ಅಭಿಪ್ರಾಯದಲ್ಲಿಲ್ಲವೆಂಬುದು ನಮಗೆ ಗೊತ್ತಿದೆ, ಆದರೆ ಇದು ಜಗದ್ಗುರುಗಳ ಉತ್ತರವಾಗಿದೆ ”ಎಂದು ಹೇಳಿದರು.

05 ಮೇ 2026, 21:19