ಹುಡುಕಿ

(ಬಲ-ಎಡ) ವಾರ್ಡ್ ಫಿಟ್ಜ್‌ಗೆರಾಲ್ಡ್, ಅಧ್ಯಕ್ಷರು, ದಿ ಪಾಪಲ್ ಫೌಂಡೇಶನ್, ಅಧ್ಯಕ್ಷರು ಕಾರ್ಡಿನಲ್ ತಿಮೋತಿ ಡೋಲನ್, ಫಿಲಡೆಲ್ಫಿಯಾದ ಆರ್ಚ್‌ಬಿಷಪ್ ನೆಲ್ಸನ್ ಪೆರೆಜ್, ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಸ್ಯಾವೇಜ್ (ಬಲ-ಎಡ) ವಾರ್ಡ್ ಫಿಟ್ಜ್‌ಗೆರಾಲ್ಡ್, ಅಧ್ಯಕ್ಷರು, ದಿ ಪಾಪಲ್ ಫೌಂಡೇಶನ್, ಅಧ್ಯಕ್ಷರು ಕಾರ್ಡಿನಲ್ ತಿಮೋತಿ ಡೋಲನ್, ಫಿಲಡೆಲ್ಫಿಯಾದ ಆರ್ಚ್‌ಬಿಷಪ್ ನೆಲ್ಸನ್ ಪೆರೆಜ್, ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಸ್ಯಾವೇಜ್ 

ಪಾಪಲ್ ಫೌಂಡೇಶನ್ ರೋಮಿಗೆ ಭೇಟಿ ನೀಡಿ ಸಹಕಾರವನ್ನು ಪುನರುಚ್ಚರಿಸಿ ಬಡವರಿಗಾಗಿ ಬೆಂಬಲವನ್ನು ದೃಢಪಡಿಸುತ್ತದೆ.

ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಿಂದ ಪಾಪಲ್ ಫೌಂಡೇಶನ್ ಹಲವು ಪ್ರತಿನಿಧಿಗಳು ರೋಮಿಗೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಬಡವರಿಗೆ ಹೆಚ್ಚಿನ ಬೆಂಬಲ ಒದಗಿಸುವುದು ಹಾಗೂ ವಿಶ್ವದಾದ್ಯಂತ ಧರ್ಮ ಸಭೆಯ ಗುರಿಯನ್ನು ಮುಂದುವರಿಸುವುದನ್ನು ಗಮನದಲ್ಲಿಟ್ಟುಕೊಂಡು, ಪೋಪ್ ಲಿಯೋ XIV ಅವರೊಂದಿಗೆ ನಡೆಯುವ ಪ್ರಮುಖ ಸಭೆಯನ್ನೂ ಒಳಗೊಂಡಿದೆ.

 ವ್ಯಾಟಿಕನ್ ವರದಿ

ಪಾಪಲ್ ಫೌಂಡೇಶನ್ ನ ಏಪ್ರಿಲ್ 29ರಿಂದ ಮೇ 2ರವರೆಗೆ ನಡೆಯುತ್ತಿರುವ ರೋಮಿನ ಯಾತ್ರೆಯಲ್ಲಿ ಶ್ರೀಮಂತ ಆತ್ಮಿಕ ಹಾಗೂ ರೂಪಣಾತ್ಮಕ ಕಾರ್ಯಕ್ರಮವಿದ್ದು, ಪವಿತ್ರ ಬಲಿಪೂಜೆಗಳು, ಸಭೆಗಳು ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳವು ಕಾರ್ಯಗಳೊಂದಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಿಗೆ ಭೇಟಿ ಕಾರ್ಯಕ್ರಮಗಳು ಒಳಗೊಂಡಿವೆ.

ಮೊದಲ ದಿನ, ಸೇಂಟ್ ಮೇರಿ ಆಫ್ ದಿ ಏಂಜಲ್ಸ್ ನಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸಲಾಯಿತು, ಇದರಲ್ಲಿ ಆರ್ಚ್‌ಬಿಷಪ್ ಜೇಮ್ಸ್ ಚೆಕ್ಕಿಯೋ ಮುಖ್ಯ ಆಚರಣಾಧಿಕಾರಿಯಾಗಿದ್ದರು. ತಮ್ಮ ಪ್ರಭೋಧನೆಯಲ್ಲಿ, ಕ್ರೈಸ್ತರು ಪುನರುತ್ಥಾನಿ ಯೇಸು ಕ್ರಿಸ್ತನ ಪ್ರೇಷಿತರಾಗಲು ಕರೆಯಲ್ಪಟ್ಟಿದ್ದಾರೆ ಎಂದು ಅವರು ಒತ್ತಿಹೇಳಿದರು.

ಎರಡನೇ ದಿನ, ವ್ಯಾಟಿಕನ್ ರೇಡಿಯೋ ಮತ್ತು ವ್ಯಾಟಿಕನ್ ನ್ಯೂಸ್‌ಗೆ ಭೇಟಿ ವಿಶೇಷ ಗಮನ ಸೆಳೆದಿತು. ಜೊತೆಗೆ ಸಂವಹನ ವಿಭಾಗದ ಪ್ರಿಫೆಕ್ಟ್ ಪಾವ್ಲೊ ರುಫಿನಿ, ಸಂಪಾದಕೀಯ ನಿರ್ದೇಶಕ ಆಂಡ್ರಿಯಾ ಟೋರ್ನಿಯೆಲ್ಲಿ, ಧಾರ್ಮಿಕ-ಪಾಸ್ಟೊರಲ್ ನಿರ್ದೇಶಕಿ ನತಾಶಾ ಗೊವೆಕರ್ ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಉಪ ನಿರ್ದೇಶಕಿ ಸಿಸ್ಟರ್ ನಿನಾ ಕ್ರಾಪಿಕ್ ರವರೊಂದಿಗೆ ಸಭೆಗಳು ನಡೆದವು.

ಚರ್ಚಿಸಲಾದ ಪ್ರಮುಖ ವಿಷಯಗಳಲ್ಲಿ ವ್ಯಾಟಿಕನ್ ನ್ಯೂಸ್‌ನ ಹೊಸ ವಿಡ್ಜೆಟ್ ಪರಿಚಯವೂ ಒಂದಾಗಿದೆ. ಜಗದ್ಗುರು XIVನೇ ಲಿಯೋರವರ ಮಾತಿನಂತೆ, “ವ್ಯಾಟಿಕನ್ ನ್ಯೂಸ್ ವಿಡ್ಜೆಟ್ ಒಂದು ಸುವಾರ್ತಾಪ್ರಚಾರದ ಸಾಧನವಾಗಿದ್ದು, ಜಾಲವನ್ನು ನಿರ್ಮಿಸಲು ಮತ್ತು ವರಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ.”

ಇತರ ಕಾರ್ಯಕ್ರಮಗಳಲ್ಲಿ, ಸ್ಟೀವರ್ಡ್ಸ್ ಆಫ್ ಸೇಂಟ್ ಪೀಟರ್ ಸದಸ್ಯರು ಜಗದ್ಗುರುಗಳ ಅಧಿಕಾರ ಸ್ಥಳವು ಅಮೇರಿಕಾದ ರಾಯಭಾರಿ ಕಚೇರಿಗೂ ಭೇಟಿ ನೀಡಿದರು.

ಸಂಸ್ಥೆಯ ಮಿಷನ್

ರೋಮಿನಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಫೌಂಡೇಶನ್‌ನ ಕಾರ್ಯಗಳನ್ನು ಪರಿಚಯಿಸಲಾಯಿತು. ಅಮೇರಿಕಾ ಆಧಾರಿತ ಈ ದಾನಶೀಲ ಸಂಸ್ಥೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜಗದ್ಗುರುಗಳ ಯೋಜನೆಗಳಿಗೆ ಬೆಂಬಲ ನೀಡುತ್ತದೆ.

“ದಿ ಪಾಪಲ್ ಫೌಂಡೇಶನ್‌ನ ಮಿಷನ್ ಜಗದ್ಗುರುಗಳಿಗೂ ರೋಮನ್ ಕಥೋಲಿಕ ಧರ್ಮ ಸಭೆಗೂ ಸೇವೆ ಸಲ್ಲಿಸುವುದಾಗಿದೆ. ನಮ್ಮ ನಂಬಿಕೆ, ಶಕ್ತಿ ಮತ್ತು ಹಣಕಾಸು ಸಂಪನ್ಮೂಲಗಳನ್ನು ಬಳಸಿ, ನಮ್ಮ ಅತ್ಯಂತ ಬಡ ಸಹೋದರ ಸಹೋದರಿಯರೊಂದಿಗೆ ಕ್ರಿಸ್ತನ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ,” ಎಂದು ಸಂಸ್ಥೆಯ ಅಧ್ಯಕ್ಷ ವಾರ್ಡ್ ಫಿಟ್ಜ್‌ಜೆರಾಲ್ಡ್ ಹೇಳಿದ್ದಾರೆ.

ನೈಜ ಸಹಾಯ

ಉಪಾಧ್ಯಕ್ಷ ಟಿಮ್ ರಿಸ್ಟಾಫ್ ರವರ ಪ್ರಕಾರ, ವಿಶೇಷವಾಗಿ ಆಫ್ರಿಕಾದಲ್ಲಿ ಸಹಾಯದ ಪ್ರಮಾಣ ಗಮನಾರ್ಹವಾಗಿದೆ.

“1997ರಿಂದ ಇಂದಿನವರೆಗೆ 855 ಸಾಮಾನ್ಯ ಅನುದಾನಗಳನ್ನು ನೀಡಲಾಗಿದ್ದು, ಒಟ್ಟು 63 ಮಿಲಿಯನ್ ಡಾಲರ್ ಮೊತ್ತವಾಗಿದೆ. 2011ರಿಂದ 69 ಮಾನವೀಯ ಅನುದಾನಗಳನ್ನು 4.9 ಮಿಲಿಯನ್ ಡಾಲರ್ ಮೌಲ್ಯದಲ್ಲಿ ನೀಡಲಾಗಿದೆ,” ಎಂದು ಅವರು ವಿವರಿಸಿದರು. ಜೊತೆಗೆ, ಸಂತ ದ್ವಿತೀಯ ಜಾನ್ ಪಾಲ್  ವಿದ್ಯಾರ್ಥಿವೇತನ ಯೋಜನೆಯ ಮೂಲಕ 2,700 ವಿದ್ಯಾರ್ಥಿಗಳು ಸಹಾಯ ಪಡೆದಿದ್ದಾರೆ ಎಂದು ಅವರು ಸೇರಿಸಿದರು.

ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರಾದ ಕಾರ್ಡಿನಲ್ ಟಿಮೊಥಿ ಡೋಲನ್, ಸಂಸ್ಥೆಯ ಕಾರ್ಯಗಳು ವಿಶ್ವ ಧರ್ಮ ಸಭೆಯ ಮಿಷನ್‌ನ ಭಾಗವಾಗಿದ್ದು, ಅತ್ಯಂತ ಅಗತ್ಯವಿರುವವರಿಗೆ ನೈಜ ಸಹಾಯ ಒದಗಿಸುತ್ತವೆ ಎಂದು ಒತ್ತಿಹೇಳಿದರು.

ಈ ಸಹಾಯದಲ್ಲಿ ಧರ್ಮ ಸಭೆಗಳ ಪುನರ್‌ನಿರ್ಮಾಣ, ಶಾಲೆಗಳು, ಅನಾಥಾಶ್ರಮಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ನೆರವು, ಹಾಗು ಮಕ್ಕಳ ಮತ್ತು ಅತೀ ಅಪಾಯದಲ್ಲಿರುವವರಿಗೆ ಸಂಬಂಧಿಸಿದ ಯೋಜನೆಗಳೂ ಸೇರಿವೆ.

ಈ ಫೌಂಡೇಶನ್ 130ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1988ರಿಂದ ಇಂದಿನವರೆಗೆ 270 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಹಣವನ್ನು ದಾನ, ಶಿಕ್ಷಣ ಮತ್ತು ಮಾನವೀಯ ಯೋಜನೆಗಳಿಗೆ ವಿತರಿಸಿದೆ. ವಿಶೇಷವಾಗಿ ಕಷ್ಟಕರ ಪರಿಸ್ಥಿತಿಯಲ್ಲಿರುವ ಮಕ್ಕಳಿಗೂ ಹಾಗೂ ಸಮಾಜದಿಂದ ಹೊರಗುಳಿಯುವ ಅಪಾಯದಲ್ಲಿರುವವರಿಗೂ ಹೆಚ್ಚಿನ ಗಮನ ನೀಡುತ್ತದೆ.

ವೃದ್ಧಿ ಮತ್ತು ಸಹಕಾರ

ರೋಮಿನ ಸ್ವಾಗತ ಸಮಾರಂಭದಲ್ಲಿ ಫೌಂಡೇಶನ್‌ನ ಕಾರ್ಯಕ್ರಮಗಳ ಚುರುಕಾದ ಬೆಳವಣಿಗೆಯನ್ನೂ ಉಲ್ಲೇಖಿಸಲಾಯಿತು. ಕಳೆದ 18 ತಿಂಗಳಲ್ಲಿ 27 ಹೊಸ ದಾನಿಗಳ ಕುಟುಂಬಗಳು ಸೇರಿಕೊಂಡಿದ್ದು, ಐದು ವರ್ಷದ ಗುರಿಯ ಸುಮಾರು ಅರ್ಧವನ್ನು ಸಾಧಿಸಲು ಇದು ನೆರವಾಗಿದೆ.

ವ್ಯಾಟಿಕನ್‌ಗೆ ಈ ಭೇಟಿ ವಿಶ್ವ ಧರ್ಮ ಸಭೆಯಯೊಂದಿಗೆ ಸಂಬಂಧಗಳನ್ನು ಬಲಪಡಿಸುವ ಮಹತ್ವದ ಕ್ಷಣವಾಗಿದ್ದು, ಅತ್ಯಂತ ಅಗತ್ಯವಿರುವವರಿಗೆ ಸೇವೆ ಸಲ್ಲಿಸುವ ದಿ ಪಾಪಲ್ ಫೌಂಡೇಶನ್‌ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

01 ಮೇ 2026, 17:47