ಹುಡುಕಿ

ಸಂತ ಪೇತ್ರರ ಬಸಿಲಿಕ ಸಂತ ಪೇತ್ರರ ಬಸಿಲಿಕ  

ಎಎಸ್ಐಎಫ್: ಜಗದ್ಗುರುಗಳ ಅಧಿಕಾರ ಸ್ಥಳದ ಗುರಿಯ ಬೆಂಬಲವಾಗಿ ಹಣಕಾಸು ಮೇಲ್ವಿಚಾರಣೆ ಮತ್ತು ಪಾರದರ್ಶಕತೆ.

ವ್ಯಾಟಿಕನ್‌ನ ಮೇಲ್ವಿಚಾರಣೆ ಮತ್ತು ಹಣಕಾಸು ಮಾಹಿತಿ ಪ್ರಾಧಿಕಾರ ಎಎಸ್ಐಎಫ್ ತನ್ನ 2025ರ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, ಹಣಕಾಸು ಶುಚಿಗೊಳಿಸುವಿಕೆ (ಮನಿ ಲಾಂಡರಿಂಗ್) ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ತಡೆಗಟ್ಟಲು ಹಾಗೂ ಎದುರಿಸಲು ವ್ಯಾಟಿಕನ್‌ನ ಮೇಲ್ವಿಚಾರಣಾ ವ್ಯವಸ್ಥೆಯ ಬಲವನ್ನು ದೃಢಪಡಿಸಿದೆ. ಈ ವರದಿ ಸಹಭಾಗಿತ್ವ ಸಂಸ್ಥೆಗಳು ಮತ್ತು ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಬಲಪಡಿಸಿದ ಸಂಬಂಧಗಳನ್ನೂ ಹೈಲೈಟ್ ಮಾಡುತ್ತದೆ.

ವ್ಯಾಟಿಕನ್ ವರದಿ

ವ್ಯಾಟಿಕನ್ ಮೇಲ್ವಿಚಾರಣೆ ಮತ್ತು ಹಣಕಾಸು ಮಾಹಿತಿ ಪ್ರಾಧಿಕಾರ ಎಎಸ್ಐಎಫ್ ಪ್ರಕಟಿಸಿದ 2025ರ ವಾರ್ಷಿಕ ವರದಿ, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ವ್ಯಾಟಿಕನ್ ನಗರ ರಾಜ್ಯದ ಮೇಲ್ವಿಚಾರಣಾ ವ್ಯವಸ್ಥೆ ಹಣಕಾಸು ಶುಚಿಗೊಳಿಸುವಿಕೆ (ಮನಿ ಲಾಂಡರಿಂಗ್) ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ತಡೆಗಟ್ಟಲು ಹಾಗೂ ಎದುರಿಸಲು ಬಲಿಷ್ಠವಾಗಿದೆ ಎಂದು ದೃಢಪಡಿಸುತ್ತದೆ. ನಿರಂತರ ಮತ್ತು ಪರಿಣತ ಮೇಲ್ವಿಚಾರಣೆ, ಜೊತೆಗೆ ಇನ್ಸ್ಟಿಟ್ಯೂಟ್ ಫಾರ್ ದ ವರ್ಕ್ಸ್ ಆಫ್ ರಿಲಿಜನ್‌ನ ಸ್ಥಿರತೆ ಮತ್ತು ಶಾಶ್ವತತೆಯ ನಿಗಾದ ಮೂಲಕ ಈ ವ್ಯವಸ್ಥೆಯ ಪರಿಣಾಮಕಾರಿತ್ವ ಖಚಿತಪಡಿಸಲಾಗಿದೆ.

ಈ ವರದಿ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಹಭಾಗಿತ್ವ ಸಂಸ್ಥೆಗಳೊಂದಿಗೆ ಬಲವಾದ ಸಂಬಂಧಗಳನ್ನೂ ಉಲ್ಲೇಖಿಸುತ್ತದೆ. ಜಾಗತಿಕ ಮಟ್ಟದಲ್ಲಿ ಸಂಕೀರ್ಣತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂವಾದ, ಪಾರದರ್ಶಕತೆ, ಪರಸ್ಪರ ನಂಬಿಕೆ ಮತ್ತು ವೃತ್ತಿಪರ ಪರಿಣತಿ ಪರಿಣಾಮಕಾರಿ ಸಂಸ್ಥಾಪನಾ ಕಾರ್ಯಾಚರಣೆಗೆ ಅತ್ಯಗತ್ಯವಾಗಿವೆ ಎಂಬುದನ್ನು ಇದು ತೋರಿಸುತ್ತದೆ.

2025ರಲ್ಲಿ ಎಎಸ್ಐಎಫ್ ಗೆ 78 ಅನುಮಾನಾಸ್ಪದ ಚಟುವಟಿಕೆ ವರದಿಗಳು (SARs) ಲಭ್ಯವಾದವು. 2024ರಲ್ಲಿ ಕಂಡುಬಂದ ಸ್ಥಿರೀಕರಣದ ನಂತರ ಇದು ನಿರೀಕ್ಷಿತ ಮಟ್ಟದಲ್ಲೇ ಇದೆ. ನಗದು ಬಳಕೆಗೆ ಸಂಬಂಧಿಸಿದ ವರದಿಗಳು ಕಡಿಮೆಯಾಗಿದ್ದು, ರಾಜ್ಯದ ಮೂಲಕ ಸಾಗುವ ಹಣದ ಹರಿವು ಕಡಿಮೆಯಾದ ಪರಿಣಾಮವೆಂದು ವರದಿ ಸೂಚಿಸುತ್ತದೆ. ವರದಿಗಳ ಗುಣಮಟ್ಟ ಸ್ಥಿರವಾಗಿದ್ದು, ಹಣಕಾಸು ಗುಪ್ತಚರ ಮಾಹಿತಿ ಮುಂದಿನ ತನಿಖೆಗಳಿಗೆ ಪ್ರಮುಖ ಆಧಾರವಾಗಿಯೇ ಉಳಿದಿದೆ.

ಆ ವರ್ಷದಲ್ಲಿ 16 ಪ್ರಕರಣಗಳನ್ನು ನ್ಯಾಯಾಂಗ ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ಸುಮಾರು €522,000 ಮೌಲ್ಯದ ಮೂರು ಹಣಕಾಸು ವ್ಯವಹಾರಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ವ್ಯಾಟಿಕನ್ ರಾಜ್ಯದ ಒಳಾಂಗಣ ಸಂಸ್ಥೆಗಳ ನಡುವೆ ಸಹಕಾರವೂ ಗಣನೀಯವಾಗಿ ಹೆಚ್ಚಿದ್ದು, ಸಂವಹನದ ಹರಿವು ಸ್ಪಷ್ಟವಾಗಿ ವೃದ್ಧಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ 35 ಮಾಹಿತಿ ವಿನಿಮಯಗಳು ನಡೆದಿದ್ದು, ಜಾಗತಿಕ ಸಹಕಾರ ಬಲವಾಗುತ್ತಿರುವುದನ್ನು ಇದು ಸೂಚಿಸುತ್ತದೆ.

 ಎಎಸ್ಐಎಫ್ ಮೇಲ್ವಿಚಾರಣಾ ಕಾರ್ಯಚಟುವಟಿಕೆಗಳು ಹಣಕಾಸು ಕ್ಷೇತ್ರದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದರ ಮೂಲಕ ಜಗದ್ಗುರುಗಳ ಅಧಿಕಾರ ಸ್ಥಳದ ಗುರಿಗೆ ಬೆಂಬಲ ನೀಡುತ್ತವೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಪ್ರದೇಶಗಳಿಗೆ ಸಾಗುವ ಅಂತಾರಾಷ್ಟ್ರೀಯ ಹಣ ವರ್ಗಾವಣೆಗಳ ಮೇಲೆ ಗಮನ ಹರಿಸಲಾಗಿದ್ದು, ಮಾನವೀಯ ಮತ್ತು ಮಿಷನರಿ ಕಾರ್ಯಗಳಿಗೆ ಅಗತ್ಯ ಬೆಂಬಲವನ್ನು ಸುರಕ್ಷಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಅಂತರರಾಷ್ಟ್ರೀಯ ಸಹಕಾರವು 2025ರಲ್ಲಿ ಮತ್ತಷ್ಟು ವಿಸ್ತಾರಗೊಂಡಿದ್ದು, ವಿದೇಶಿ ಹಣಕಾಸು ಗುಪ್ತಚರ ಘಟಕಗಳೊಂದಿಗೆ ಸಂಬಂಧಗಳು ಗಟ್ಟಿಯಾಗಿವೆ. ಸಂವಾದ ಸಭೆಗಳು, ಕಾರ್ಯಗಾರಗಳು ಮತ್ತು ಸಂಯುಕ್ತ ಚಟುವಟಿಕೆಗಳು ಉತ್ತಮ ಪದ್ಧತಿಗಳ ಹಂಚಿಕೆಗೆ ಸಹಾಯ ಮಾಡಿದ್ದು, ಜಾಗತಿಕ ಹಣಕಾಸು ಭದ್ರತೆಗಾಗಿ ಬಲಿಷ್ಠ ಜಾಲವನ್ನು ನಿರ್ಮಿಸಲು ನೆರವಾಗಿವೆ.

01 ಮೇ 2026, 17:38