ಕಾರ್ಡಿನಲ್ ಫೆರ್ನಾಂಡೆಸ್: ಹೊಸ ಬಿಷಪ್‌ಗಳ ಅಭಿಷೇಕವು ವಿಭಜನೆಯ ಕೃತ್ಯ
ವ್ಯಾಟಿಕನ್ ವರದಿ
ಸಂತ ಪಯಸ್ X ರ ಪುರೋಹಿತ ಭ್ರಾತೃತ್ವ (FSSPX) ಸಂಸ್ಥೆ, ಆರ್ಚ್‌ಬಿಷಪ್ ಮಾರ್ಸೆಲ್ ಲೆಫೆಬ್ವ್ರೆ ರವರಿಂದ ಸ್ಥಾಪಿಸಲ್ಪಟ್ಟಿದ್ದು, ಜಗದ್ಗುರುಗಳ ಮನವಿಗಳಿದ್ದರೂ 2026ರ ಜುಲೈನಲ್ಲಿ ಪಾಂಟಿಫಿಕಲ್ ಮಂಡೇಟ್ (ಜಗದ್ಗುರುಗಳ ಅಧಿಕೃತ ಅನುಮತಿ) ಇಲ್ಲದೆ ಹೊಸ ಬಿಷಪ್‌ಗಳ ಅಭಿಷೇಕವನ್ನು ನಡೆಸುವ ಯೋಜನೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ, ಬುಧವಾರ
ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್, ಡಿಕ್ಯಾಸ್ಟರಿ ಫಾರ್ ದಿ ಡಾಕ್ಟ್ರಿನ್ ಆಫ್ ದಿ ಫೇತ್ ನ ಪ್ರಿಫೆಕ್ಟ್, ಹಲವು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವ ಉದ್ದೇಶದಿಂದ ಪ್ರಕಟಣೆ ಹೊರಡಿಸಿದರು. ಈ ವಿಷಯವನ್ನು ಅವರು ಜಗದ್ಗುರು XIVನೇ ಲಿಯೋರವರ ಗಮನಕ್ಕೂ ತಂದಿದ್ದರು.
ಜಗದ್ಗುರು XIVನೇ ಲಿಯೋರವರು ಈ ಹೊಸ ವಿಭಜನೆಯ ಕೃತ್ಯ ತಪ್ಪಿಸಿಕೊಳ್ಳಲ್ಪಡಲಿ ಎಂಬ ತಮ್ಮ ಆಶಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಬಯಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಈಗಾಗಲೇ ತಿಳಿಸಲಾಗಿರುವುದನ್ನು ನಾನು ಪುನರುಚ್ಚರಿಸುತ್ತೇನೆ,” ಎಂದು ಕಾರ್ಡಿನಲ್ ಫೆರ್ನಾಂಡೆಸ್ ಹೇಳಿದರು. “ಪವಿತ್ರ Xನೇ ಪಿಯಸ್ ರವರ ಯಾಜಕ ಸಹೋದರತ್ವವು ಘೋಷಿಸಿರುವ ಬಿಷಪ್‌ಗಳ ಅಭಿಷೇಕಗಳಿಗೆ ಅಗತ್ಯವಾದ ಪಾಂಟಿಫಿಕಲ್ ಮಂಡೇಟ್ ಇಲ್ಲ. ಈ ಕ್ರಮವು ‘ವಿಭಜನೆಯ ಕೃತ್ಯ’ವಾಗುತ್ತದೆ,” ಎಂದು ಅವರು ಸಂತ ದ್ವಿತೀಯ ಜಾನ್ ಪಾಲ್ ರವರ ಎಕ್ಲೇಷಿಯಾ ಡೀ ದಸ್ತಾವೇಜಿನ ಉಲ್ಲೇಖದೊಂದಿಗೆ ಹೇಳಿದರು.
ಅವರು ಮುಂದುವರಿದು, “ಈ ವಿಭಜನೆಗೆ ಅಧಿಕೃತವಾಗಿ ಸೇರುವುದು ದೇವರ ವಿರುದ್ಧದ ಗಂಭೀರ ಅಪರಾಧವಾಗಿದ್ದು, ಧರ್ಮ ಸಭೆಯ ಕಾನೂನಿನ ಪ್ರಕಾರ ಬಹಿಷ್ಕಾರ ಶಿಕ್ಷೆಯನ್ನುಂಟುಮಾಡುತ್ತದೆ” ಎಂದು ಎಚ್ಚರಿಸಿದರು.
“ಜಗದ್ಗುರುಗಳು ಪವಿತ್ರಾತ್ಮನು ಪವಿತ್ರ Xನೇ ಪಿಯಸ್ ರವರು ಯಾಜಕ ಸಹೋದರತ್ವದ ನಾಯಕರಿಗೆ ಬೆಳಕು ನೀಡಲಿ ಮತ್ತು ಅವರು ತೆಗೆದುಕೊಂಡಿರುವ ಈ ಅತ್ಯಂತ ಗಂಭೀರ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಕೊನೆಯಲ್ಲಿ ಕಾರ್ಡಿನಲ್ ಫೆರ್ನಾಂಡೆಸ್ ರವರು ಹೇಳಿದರು.