ಹುಡುಕಿ

Catholic missionaries and influencers attend a special Jubilee Mass at the Vatican

ಲೆಫೆಬ್ವ್ರಿಸ್ಟ್ ಯಾಜಕರು ಮತ್ತು ಸಾಮಾನ್ಯ ವಿಶ್ವಾಸಿಗಳು: ಕಥೋಲಿಕ ಧರ್ಮ ಸಭೆಯ ಸಂಪೂರ್ಣ ಐಕ್ಯತೆಗೆ ಮರಳುವ ವಿಧಾನ.

ಬಹಿಷ್ಕಾರಕ್ಕೆ ಕಾರಣವಾದ ಭಿನ್ನಮತೀಯ ಕೃತ್ಯದ ಬಳಿಕ, ಸಂತ Xನೇ ಪಿಯಸ್ ರವರ ಯಾಜಕರ ಭ್ರಾತೃತ್ವವನ್ನು ತೊರೆದು ಕಥೋಲಿಕ ಧರ್ಮ ಸಭೆಯ ಸಂಪೂರ್ಣ ಐಕ್ಯತೆಗೆ ಮರಳಲು ನಿರ್ಧರಿಸುವವರನ್ನು ಹೇಗೆ ಸ್ವಾಗತಿಸಬೇಕು ಎಂಬುದರ ಕುರಿತು, ವಿಶ್ವದಾದ್ಯಂತದ ಬಿಷಪ್‌ಗಳಿಗೆ ನಂಬಿಕೆಯ ಸಿದ್ಧಾಂತಗಳ ವಿಭಾಗವು ಮಾರ್ಗಸೂಚಿಗಳನ್ನು ಒಳಗೊಂಡ ಅಧಿಕೃತ ಪತ್ರವನ್ನು ಕಳುಹಿಸಿದೆ.

ವ್ಯಾಟಿಕನ್ ವರದಿ

ಜುಲೈ 1ರಂದು ನಡೆದ ಭಿನ್ನಮತೀಯ ಕೃತ್ಯದ ನಂತರ, ಕಥೋಲಿಕ ಧರ್ಮ ಸಭೆಯೊಂದಿಗೆ ಸಂಪೂರ್ಣ ಐಕ್ಯತೆಗೆ ಮರಳಲು, ಹಿಂದೆ ಇದ್ದ ಎಕ್ಲೇಸಿಯಾ ದೇಯಿ ಆಯೋಗದಂತಹ ವಿಶೇಷ ಆಯೋಗಗಳ ನೆರವಿನ ಅಗತ್ಯವಿರುವುದಿಲ್ಲ. ಏಕೆಂದರೆ ನಂಬಿಕೆಯ ಸಿದ್ಧಾಂತಗಳ ವಿಭಾಗವು, ಯಾಜಕರಿಗೂ ಹಾಗೂ ಸಾಮಾನ್ಯ ವಿಶ್ವಾಸಿಗಳಿಗೂ ಅನ್ವಯಿಸುವ ಸ್ಪಷ್ಟ ಕಾರ್ಯವಿಧಾನವನ್ನು ಈಗಾಗಲೇ ರೂಪಿಸಿದೆ. ಈ ಕಾರ್ಯವಿಧಾನದಲ್ಲಿ ಸ್ಥಳೀಯ ಧರ್ಮಪ್ರಾಂತ್ಯದ ಅಧಿಪತಿಗಳ ಹಾಗೂ ಪುರಾತನ ಆರಾಧನಾ ವಿಧಿಯನ್ನು ಅನುಸರಿಸುತ್ತಾ ರೋಮಿನೊಂದಿಗೆ ಸಂಪೂರ್ಣ ಐಕ್ಯತೆಯಲ್ಲಿ ಇರುವ ಭ್ರಾತೃತ್ವಗಳ ನಾಯಕರನ್ನು ನೇರವಾಗಿ ಒಳಗೊಳ್ಳಲಾಗಿದೆ.

ಈ ಸೂಚನೆಗಳನ್ನು ಪ್ರೇಷಿತರ ರಾಯಭಾರ ಕಚೇರಿಗಳ ಮೂಲಕ ಈ ದಿನಗಳಲ್ಲಿ ವಿಶ್ವದ ಬಿಷಪ್‌ಗಳಿಗೆ ರವಾನಿಸಲಾಗುತ್ತಿದೆ. ಜುಲೈ 2ರಂದು ನಂಬಿಕೆಯ ಸಿದ್ಧಾಂತಗಳ ವಿಭಾಗವು ಪ್ರಕಟಿಸಿದ ವಿವರಣಾತ್ಮಕ ಟಿಪ್ಪಣಿಯಲ್ಲಿ ಇದನ್ನು ಈಗಾಗಲೇ ಘೋಷಿಸಲಾಗಿತ್ತು.

ಯಾಜಕರಿಗಾಗಿ ಐಕ್ಯತೆಯ ಪುನಃಸ್ಥಾಪನೆ

2026ರ ಜುಲೈ 1ರಿಂದ ಜಾರಿಗೆ ಬಂದಿರುವ ಈ ಕಾರ್ಯವಿಧಾನದ ಪ್ರಕಾರ, ಸಂತ Xನೇ ಪಿಯಸ್ ರವರ ಯಾಜಕರ ಭ್ರಾತೃತ್ವವನ್ನು ತೊರೆಯಲು ನಿರ್ಧರಿಸಿದ ಹಾಗೂ ದ್ವಿತೀಯ ವ್ಯಾಟಿಕನ್ ಮಹಾಸಭೆಯನ್ನು ಮತ್ತು ನೋವಸ್ ಆರ್ಡೊ ಪೋಸ್ಟ್ ನ್ಯಾಯಸಮ್ಮತತೆಯನ್ನು ಅಂಗೀಕರಿಸಿ, ಅದೇ ಸಮಯದಲ್ಲಿ ಪುರಾತನ ಆರಾಧನಾ ವಿಧಿಗೆ ಬದ್ಧರಾಗಿರುವ ಯಾಜಕರು, ತಮ್ಮನ್ನು ಪ್ರಾಯೋಗಿಕ ಅವಧಿಗೆ ಸ್ವೀಕರಿಸಲು ಸಿದ್ಧರಾಗಿರುವ ಒಬ್ಬ ‘ಆರ್ಡಿನರಿ’ಯನ್ನು ಅಂದರೆ ಧರ್ಮಪ್ರಾಂತ್ಯದ ಬಿಷಪ್, ಪಾಂಟಿಫಿಕಲ್ ಹಕ್ಕಿನ ಯಾಜಕ ಧಾರ್ಮಿಕ ಸಂಸ್ಥೆಯ ಪ್ರಮುಖ ಮೇಲಧಿಕಾರಿ ಅಥವಾ ಪಾಂಟಿಫಿಕಲ್ ಹಕ್ಕಿನ ಪ್ರೇಷಿತರ ಜೀವನ ಸಂಘದ ಪ್ರಮುಖ ಮೇಲಧಿಕಾರಿ ಇತ್ಯಾದಿ ಹುಡುಕಬೇಕು.

ನಂತರ, ಅವರು ತಮ್ಮ ಕೈಬರಹದಲ್ಲಿ ಜಗದ್ಗುರುಗಳು ಪತ್ರ ಬರೆದು, ತಮ್ಮ ಪರಿಚಯವನ್ನು ನೀಡಿ, ಬಹಿಷ್ಕೃತ ಅಥವಾ ಅನಿಯಮಿತ ಸ್ಥಿತಿಯಲ್ಲಿದ್ದ ಬಿಷಪ್‌ನಿಂದ ತಾವು ಪಡೆದ ಯಾಜಕಾಭಿಷೇಕದ ಕಾರಣದಿಂದಲೋ, ಅಥವಾ ನ್ಯಾಯಸಮ್ಮತವಾಗಿ ಯಾಜಕರಾಗಿ ಅಭಿಷಿಕ್ತರಾದ ಬಳಿಕ ಸಂತ Xನೇ ಪಿಯಸ್ ಯಾಜಕರ ಭ್ರಾತೃತ್ವದ ಸದಸ್ಯರಾದ ಕಾರಣದಿಂದಲೋ ತಮಗೆ ವಿಧಿಸಲ್ಪಟ್ಟಿರುವ ದಂಡನೆಗಳನ್ನು ಮನ್ನಿಸಬೇಕೆಂದು ವಿನಂತಿಸಬೇಕು.

ನಂಬಿಕೆಯ ಘೋಷಣೆ ಮತ್ತು ನಿಷ್ಠೆಯ ಸೂತ್ರ

ಯಾಜಕರು ತಮ್ಮ ಯಾಜಕಾಭಿಷೇಕದ ಪ್ರಮಾಣಪತ್ರವನ್ನು ಕೂಡ ಲಗತ್ತಿಸಬೇಕು. ಜೊತೆಗೆ, ದಿನಾಂಕ ನಮೂದಿಸಿ ಸಹಿ ಮಾಡಿದ ‘ನಂಬಿಕೆಯ ಘೋಷಣೆ' ಮತ್ತು ‘ನಿಷ್ಠೆಯ ಸೂತ್ರ'ಎಂಬ ದಾಖಲೆಗಳನ್ನೂ ಸೇರಿಸಬೇಕು.

‘ನಂಬಿಕೆಯ ಘೋಷಣೆ’ಯು ಕಥೋಲಿಕ ನಂಬಿಕೆಯ ಮೂಲಭೂತ ಅಂಶಗಳ ಸಾರಾಂಶವನ್ನು ಒಳಗೊಂಡಿದೆ. ‘ನಿಷ್ಠೆಯ ಸೂತ್ರ’ದ ಮೂಲಕ ಯಾಜಕರು ಜಗದ್ಗುರುಗಳಿಗೆ ನಿಷ್ಠರಾಗಿರುವುದಾಗಿ ವಾಗ್ದಾನ ಮಾಡುತ್ತಾರೆ ಹಾಗೂ ಅವರ ವಿರುದ್ಧವಾಗಲಿ ಅಥವಾ ಅವರ ಬೋಧನಾ ಅಧಿಕಾರ ವಿರುದ್ಧವಾಗಲಿ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದು ಬದ್ಧತೆ ವ್ಯಕ್ತಪಡಿಸುತ್ತಾರೆ.

ಅವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಲೂಮೆನ್ ಜೆಂಟಿಯಮ್ ಎಂಬ ಡಾಗ್ಮ್ಯಾಟಿಕ್ ಸಂವಿಧಾನದ 25ನೇ ಸಂಖ್ಯೆಯಲ್ಲಿ ಧರ್ಮ ಸಭೆಯ ಬೋಧನಾ ಅಧಿಕಾರಕ್ಕೆ ಸಲ್ಲಿಸಬೇಕಾದ ವಿಧೇಯತೆಯ ಕುರಿತು ನೀಡಿರುವ ಬೋಧನೆಯನ್ನು ಅಂಗೀಕರಿಸಬೇಕು. ಹಾಗೆಯೇ, ಜಗದ್ಗುರು VIನೇ ಪೌಲ್  ಮತ್ತು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಪ್ರಕಟಿಸಿದ ಆರಾಧನಾ ವಿಧಿಗಳ ಪ್ರಕಾರ ಆಚರಿಸಲ್ಪಡುವ ಪವಿತ್ರ ಬಲಿಪೂಜೆಯು ಮಾನ್ಯವಾಗಿದೆ ಎಂದು ಒಪ್ಪಿಕೊಳ್ಳಬೇಕು ಮತ್ತು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಪ್ರಕಟಿಸಿದ ಕ್ಯಾನನ್ ಕಾನೂನು ಸಂಹಿತೆಯ ನಿಯಮಗಳನ್ನು ತಾವು ಅನುಸರಿಸುತ್ತೇವೆ ಎಂದು ಘೋಷಿಸಬೇಕು.

ಈ ಎಲ್ಲಾ ದಾಖಲೆಗಳನ್ನು  ಅಂದರೆ ಪತ್ರ, ಯಾಜಕಾಭಿಷೇಕದ ಪ್ರಮಾಣಪತ್ರ, ನಂಬಿಕೆಯ ಘೋಷಣೆ ಹಾಗೂ ನಿಷ್ಠೆಯ ಸೂತ್ರ ಸಂಬಂಧಿತ ಆರ್ಡಿನರಿಯ ಮೂಲಕ ಕಳುಹಿಸಬೇಕು. ಜೊತೆಗೆ, ಆರ್ಡಿನರಿಯು ತಮ್ಮ ಧರ್ಮಪ್ರಾಂತ್ಯ ಅಥವಾ ಸಂಸ್ಥೆಯಲ್ಲಿ ಆ ಯಾಜಕರನ್ನು ಪರೀಕ್ಷಾರ್ಥವಾಗಿ ಆಧಾರದ ಮೇಲೆ ಸ್ವೀಕರಿಸಲು ಸಿದ್ಧರಾಗಿರುವುದಾಗಿ ತಮ್ಮ ಪತ್ರದಲ್ಲಿ ತಿಳಿಸಬೇಕು.

ಆರ್ಡಿನರಿಯಿಂದ ಈ ದಾಖಲೆಗಳು ಬಂದ ತಕ್ಷಣ, ನಂಬಿಕೆಯ ಸಿದ್ಧಾಂತಗಳ ವಿಭಾಗವು ವಿಧಿಸಲ್ಪಟ್ಟಿರುವ ದಂಡನೆಗಳನ್ನು ಮನ್ನಿಸುವ ಅಧಿಕೃತ ಆದೇಶ  ಹೊರಡಿಸುತ್ತದೆ. ಜೊತೆಗೆ, ಆ ಯಾಜಕರನ್ನು ಕನಿಷ್ಠ ಒಂದು ವರ್ಷ ಮತ್ತು ಗರಿಷ್ಠ ಮೂರು ವರ್ಷಗಳ ಪರೀಕ್ಷಾತ್ಮಕ ಅವಧಿಗೆ ಸ್ವೀಕರಿಸಲು ಆರ್ಡಿನರಿಗೆ ಅಧಿಕಾರ ನೀಡುತ್ತದೆ. ಆ ಅವಧಿಯ ನಂತರ, ಅವರ ಅಧಿಕೃತ ಧರ್ಮಪ್ರಾಂತ್ಯ ಸೇರ್ಪಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಸಾಮಾನ್ಯ ವಿಶ್ವಾಸಿಗಳಿಗಾಗಿ ಐಕ್ಯತೆಯ ಪುನಃಸ್ಥಾಪನೆ

ನಂಬಿಕೆಯ ಸಿದ್ಧಾಂತಗಳ ವಿಭಾಗವು ವಿವರಿಸುವಂತೆ, ಈ ಕಾರ್ಯವಿಧಾನವು ಸಂತ Xನೇ ಪಿಯಸ್ ರವರ  ಯಾಜಕರ ಭ್ರಾತೃತ್ವಕ್ಕೆ ಅಧಿಕೃತವಾಗಿ ಸೇರಿದ ಅಥವಾ ಅದರ ಆರಾಧನೆಗಳಲ್ಲಿ ಭಾಗವಹಿಸುತ್ತಿದ್ದ ಹಾಗೂ ಈಗ ಕಥೋಲಿಕ ಧರ್ಮ ಸಭೆಯೊಂದಿಗೆ ಸಂಪೂರ್ಣ ಐಕ್ಯತೆಗೆ ಮರಳಲು ಬಯಸುವ ಸಾಮಾನ್ಯ ವಿಶ್ವಾಸಿಗಳ ವೈಯಕ್ತಿಕ ಹೊಣೆಗಾರಿಕೆಯ ಮಟ್ಟವನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿದೆ.

ಈ ಭ್ರಾತೃತ್ವಕ್ಕೆ ಸೇರಿದ ಸಾಮಾನ್ಯ ವಿಶ್ವಾಸಿಗಳಿಗೆ ದಂಡನೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ ಎಂದು ಊಹಿಸಲಾಗುವುದಿಲ್ಲ. ಪ್ರತಿಯೊಂದು ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂದು ಅದು ಸ್ಪಷ್ಟಪಡಿಸುತ್ತದೆ.

ದಂಡನಾತ್ಮಕ ಹೊಣೆಗಾರಿಕೆಗೆ ಪೂರ್ಣ ಅರಿವು ಮತ್ತು ಉದ್ದೇಶಪೂರ್ವಕ ಸಮ್ಮತಿ ಅಗತ್ಯವಾಗಿರುವುದರಿಂದ, ಈ ಕೆಳಗಿನವರು ಹೊಣೆಗಾರರೆಂದು ಪರಿಗಣಿಸಬಹುದು ಸಂತ  Xನೇ ಪಿಯಸ್ ರವರ ಯಾಜಕರ ಭ್ರಾತೃತ್ವದ ತೃತೀಯ ಆದೇಶದ ಸದಸ್ಯರಾಗಿರುವವರು ಆ ಭ್ರಾತೃತ್ವದ ಆರಾಧನೆಗಳಲ್ಲಿ ನಿಯಮಿತವಾಗಿ ಭಾಗವಹಿಸಿ ಅದರ ಸೈದ್ಧಾಂತಿಕ ನಿಲುವುಗಳನ್ನು ಅಧಿಕೃತವಾಗಿ ಸ್ವೀಕರಿಸಿರುವವರು.

ಅನುಸರಿಸಬೇಕಾದ ಕಾರ್ಯವಿಧಾನ

ದಂಡನೆಗೆ ಒಳಗಾಗಿರುವ ಹಾಗೂ ಕಥೋಲಿಕ ಧರ್ಮ ಸಭೆಯೊಂದಿಗೆ ಸಂಪೂರ್ಣ ಐಕ್ಯತೆಗೆ ಮರಳಲು ಬಯಸುವ ಸಾಮಾನ್ಯ ವಿಶ್ವಾಸಿಗಳು, ಕಥೋಲಿಕ ಬೋಧನೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿರುವುದನ್ನೂ ಹಾಗೂ ಕಥೋಲಿಕ ಧರ್ಮ ಸಭೆಯ ಶ್ರೇಣಿಕ್ರಮಕ್ಕೆ ವಿಧೇಯರಾಗಿರುವುದನ್ನೂ ಅಧಿಕೃತವಾಗಿ ಘೋಷಿಸಬೇಕು. ಈ ಪ್ರಕ್ರಿಯೆಯು ಸ್ಥಳೀಯ ಆರ್ಡಿನರಿಯ ಅಧಿಕಾರದಡಿಯಲ್ಲಿ ನಡೆಯುತ್ತದೆ. ಸ್ಥಳೀಯ ಧರ್ಮ ಸಭೆಯ ಏಕತೆಯ ಭದ್ರತೆಯ ಹೊಣೆ ಅವರ ಮೇಲಿದೆ.

ಆದ್ದರಿಂದ, ಸಂತ  Xನೇ ಪಿಯಸ್ ರವರ ಯಾಜಕರ ಭ್ರಾತೃತ್ವವನ್ನು ತೊರೆಯಲು ನಿರ್ಧರಿಸಿದ ಸಾಮಾನ್ಯ ವಿಶ್ವಾಸಿಯು ತನ್ನ ಬಿಷಪ್ ಅವರಿಗೆ ದಿನಾಂಕ ಮತ್ತು ಸಹಿಯೊಂದಿಗೆ ‘ನಂಬಿಕೆಯ ಘೋಷಣೆ’  ಮತ್ತು ‘ನಿಷ್ಠೆಯ ಸೂತ್ರ’ ಸಲ್ಲಿಸಬೇಕು.

ದಾಖಲೆಗಳು ಸಲ್ಲಿಕೆಯಾದ ನಂತರ, ಸ್ಥಳೀಯ ಆರ್ಡಿನರಿಯು ತಮಗೆ ಸೂಕ್ತವೆಂದು ತೋರುವ ಸಮಯದಲ್ಲಿ ಹಾಗೂ ವಿಧಾನದಲ್ಲಿ ಆ ವಿಶ್ವಾಸಿಯನ್ನು ಧರ್ಮ ಸಭೆಯ ಸಂಪೂರ್ಣ ಐಕ್ಯತೆಗೆ ಸ್ವಾಗತಿಸುತ್ತಾರೆ.

ವೈಯಕ್ತಿಕ ಹೊಣೆಗಾರಿಕೆಗೆ ಒಳಪಡದ ಸಾಮಾನ್ಯ ವಿಶ್ವಾಸಿಗಳು

ಈ ಕೆಳಗಿನವರನ್ನು ವೈಯಕ್ತಿಕ ಹೊಣೆಗಾರಿಕೆಗೆ ಒಳಪಡಿಸುವುದಿಲ್ಲ ಎಂದು ದಾಖಲೆ ಸ್ಪಷ್ಟಪಡಿಸುತ್ತದೆ ಕೇವಲ ಆರಾಧನಾ ಅಥವಾ ಆಧ್ಯಾತ್ಮಿಕ ಕಾರಣಗಳಿಗಾಗಿ ಸಂತ  Xನೇ ಪಿಯಸ್ ರವರ ಯಾಜಕರ ಭ್ರಾತೃತ್ವದ ಆರಾಧನೆಗಳಲ್ಲಿ ಭಾಗವಹಿಸಿದ್ದವರು ಜಗದ್ಗುರುಗಳ ಅಧಿಕಾರ ಸ್ಥಳದೊಂದಿಗೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ತಿಳಿದಿದ್ದರೂ, ಧರ್ಮ ಸಭೆಯ ಬೋಧನಾ ಅಧಿಕಾರವನ್ನಾಗಲಿ ಅಥವಾ ರೋಮಿನ ಬಿಷಪ್ ಗಳ ಅಧಿಕಾರವನ್ನಾಗಲಿ ತಿರಸ್ಕರಿಸದವರು.

ಇಂತಹ ಸಂದರ್ಭಗಳಲ್ಲಿ, ಅವರು ಸಂಪೂರ್ಣ ಕಥೋಲಿಕ ಐಕ್ಯತೆಯಲ್ಲಿರುವ ಒಬ್ಬ ಯಾಜಕರನ್ನು ಸಂಪರ್ಕಿಸಿ, ಇನ್ನು ಮುಂದೆ ಸಂತ  Xನೇ ಪಿಯಸ್ ರವರ ಯಾಜಕರ ಭ್ರಾತೃತ್ವದ ಆರಾಧನೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ದೃಢ ನಿರ್ಧಾರವನ್ನು ತಿಳಿಸಿದರೆ ಸಾಕು ಎಂದು ಹೇಳಿದರು.

02 ಜುಲೈ 2026, 21:58