ಹುಡುಕಿ

ಜೂನ್ 30 ರಂದು ಕಾನ್ಸ್ಟಾಂಟಿನೋಪಲ್‌ನ ಎಕ್ಯುಮೆನಿಕಲ್ ಪಿತೃಪ್ರಧಾನ ನಿಯೋಗದೊಂದಿಗೆ ಜಗದ್ಗುರು XIVನೇ ಲಿಯೋರವರ ಸಭೆ. ಜೂನ್ 30 ರಂದು ಕಾನ್ಸ್ಟಾಂಟಿನೋಪಲ್‌ನ ಎಕ್ಯುಮೆನಿಕಲ್ ಪಿತೃಪ್ರಧಾನ ನಿಯೋಗದೊಂದಿಗೆ ಜಗದ್ಗುರು XIVನೇ ಲಿಯೋರವರ ಸಭೆ.  (ANSA)

ಕಾನ್‌ಸ್ಟಾಂಟಿನೋಪಲ್‌ನ ಎಕ್ಯುಮೆನಿಕಲ್ ಪಿತೃಪ್ರಧಾನರ ಪ್ರತಿನಿಧಿ ಮಂಡಳಿ ರೋಮಿಗೆ ಭೇಟಿ ನೀಡಿತು.

ಪ್ರತಿ ವರ್ಷದಂತೆ, ಕಾನ್‌ಸ್ಟಾಂಟಿನೋಪಲ್‌ನ ಎಕ್ಯುಮೆನಿಕಲ್ ಪಿತೃಪ್ರಧಾನರ ಪ್ರತಿನಿಧಿ ಮಂಡಳಿಯು ನಗರದ ಪೋಷಕ ಸಂತರಾದ ಪವಿತ್ರ ಪೇತ್ರ ಮತ್ತು ಪೌಲರ ಹಬ್ಬದ ಅಂಗವಾಗಿ ಜೂನ್ 27ರಿಂದ ಜುಲೈ 1ರವರೆಗೆ ರೋಮಿಗೆ ಭೇಟಿ ನೀಡಿತು.

ವ್ಯಾಟಿಕನ್ ವರದಿ

ಜುಲೈ 1ರಂದು ಪ್ರಕಟವಾದ ಪ್ರಕಟಣೆಯಲ್ಲಿ, ಕ್ರೈಸ್ತರ ಏಕತೆಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿಯು, 2026ರ ಜೂನ್ 27ರಿಂದ ಜುಲೈ 1ರವರೆಗೆ ಕಾನ್‌ಸ್ಟಾಂಟಿನೋಪಲ್‌ನ ಎಕ್ಯುಮೆನಿಕಲ್ ಪಿತೃಪ್ರಧಾನರ ಪ್ರತಿನಿಧಿ ಮಂಡಳಿಯು ರೋಮಿಗೆ ಭೇಟಿ ನೀಡಿದೆ ಎಂದು ತಿಳಿಸಿತು.

ಈ ಭೇಟಿ ವಾರ್ಷಿಕ ಸಂಪ್ರದಾಯದ ಭಾಗವಾಗಿದ್ದು, ಉಭಯ ಧರ್ಮ ಸಭೆಗಳು ತಮ್ಮ ತಮ್ಮ ಪೋಷಕ ಸಂತರ ಹಬ್ಬಗಳ ಸಂದರ್ಭದಲ್ಲಿ ಪರಸ್ಪರ ಪ್ರತಿನಿಧಿ ಮಂಡಳಿಗಳನ್ನು ಕಳುಹಿಸಿಕೊಳ್ಳುತ್ತವೆ. ಅದರಂತೆ ಜೂನ್ 29ರಂದು ರೋಮಿನಲ್ಲಿ ಪವಿತ್ರ ಪೇತ್ರ ಮತ್ತು ಪೌಲರ ಹಬ್ಬದ ನಿಮಿತ್ತ ಹಾಗೂ ನವೆಂಬರ್ 30ರಂದು ಇಸ್ತಾಂಬುಲ್‌ನಲ್ಲಿ ಪವಿತ್ರ ಆಂದ್ರೆಯ ಹಬ್ಬದ ನಿಮಿತ್ತ ಪರಸ್ಪರ ಭೇಟಿ ನೀಡುವ ಸಂಪ್ರದಾಯವನ್ನು ಮುಂದುವರಿಸಲಾಗುತ್ತದೆ.

ಈ ಪ್ರತಿನಿಧಿ ಮಂಡಳಿಯ ನೇತೃತ್ವವನ್ನು ಕಥೊಲಿಕ ಧರ್ಮ ಸಭೆಯೊಂದಿಗಿನ ಸಂಬಂಧಗಳಿಗಾಗಿ ಎಕ್ಯುಮೆನಿಕಲ್ ಪಿತೃಪ್ರಧಾನರ ಸಿನೋಡಲ್ ಆಯೋಗದ ಅಧ್ಯಕ್ಷರಾದ ಮೆಟ್ರೋಪಾಲಿಟನ್ ಎಮ್ಮಾನುಯೇಲ್ ಆಫ್ ಚಾಲ್ಸಿಡೋನ್ ವಹಿಸಿದ್ದರು. ಅವರೊಂದಿಗೆ ವಂ.ಸ್ವಾಮಿ ಏಟಿಯೊಸ್ ಹಾಗೂ ಪಿತೃಪ್ರಧಾನರ ಡೀಕನ್ ಅನಟೋಲಿಯೊಸ್ ಸಹ ಆಗಮಿಸಿದ್ದರು.

ಜೂನ್ 29, ಸೋಮವಾರ, ಪಿತೃಪ್ರಧಾನರ ಪ್ರತಿನಿಧಿ ಮಂಡಳಿಯು ಜಗದ್ಗುರು XIVನೇ ಲಿಯೋರವರು ಅಧ್ಯಕ್ಷತೆಯಲ್ಲಿ ನಡೆದ ಪವಿತ್ರ ಯೂಕರಿಸ್ಟಿಕ್ ಬಲಿಪೂಜೆಯಲ್ಲಿ ಭಾಗವಹಿಸಿತು. ಬಳಿಕ ಜೂನ್ 30, ಮಂಗಳವಾರ, ಪ್ರತಿನಿಧಿ ಮಂಡಳಿಯು ಜಗದ್ಗುರುಗಳೊಂದಿಗೆ ನಡೆದ ಅಧಿಕೃತ ಭೇಟಿಯಲ್ಲಿ ಪಾಲ್ಗೊಂಡಿತು. ನಂತರ ಕ್ರೈಸ್ತರ ಏಕತೆಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು.

01 ಜುಲೈ 2026, 17:53