ಹುಡುಕಿ

IRAQ-SYRIAN-KURDS-REFUGEES IRAQ-SYRIAN-KURDS-REFUGEES  (AFP or licensors)

ಓರಿಯಂಟ್ ಸುದ್ದಿ – ಜನವರಿ 9, 2026

ಲುವ್ರ್ ಡಿ ಓರಿಯಂಟ್ (L’Œuvre d’Orient) ಸಹಯೋಗದಲ್ಲಿ ತಯಾರಾದ ಈ ವಾರದ ಪೂರ್ವದ ಧರ್ಮಸಭೆಗಳ ಸುದ್ದಿ ಸಿರಿಯಾ ಕುರಿತಾಗಿದೆ. ಜನವರಿ 6–7ರ ರಾತ್ರಿ ಅಲೆಪ್ಪೊದಲ್ಲಿ ಹಿಂಸಾಚಾರ ಸಂಭವಿಸಿದೆ.

ಜನವರಿ 6–7ರ ರಾತ್ರಿ, ಸಿರಿಯಾದ ಅಲೆಪ್ಪೊ ನಗರವು ಮತ್ತೆ ಪ್ರಾಣಹಾನಿ ಸಂಭವಿಸಿದ ಸಂಘರ್ಷಗಳ ಸ್ಥಳವಾಯಿತು. ಬಹುಪಾಲು ಕುರ್ದಿಶ್ ಪಡೆಗಳಾದ ಸಿರಿಯಾ ಪ್ರಜಾಪ್ರಭುತ್ವ ಪಡೆಗಳು (ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್) ಮತ್ತು ಸಿರಿಯ ಸರ್ಕಾರದ ಪಡೆಗಳ ನಡುವೆ ಹೋರಾಟ ನಡೆಯಿತು.

ಹಾನಿ: ಕನಿಷ್ಠ 9 ಜನರು ಮೃತಪಟ್ಟಿದ್ದಾರೆ. ಇದು ಕಳೆದ ಹಲವು ತಿಂಗಳಲ್ಲಿ ನಡೆದ ಅತ್ಯಂತ ಹಿಂಸಾತ್ಮಕ ಘಟನೆಗಳಲ್ಲಿ ಒಂದಾಗಿದೆ.

ಈ ವೀಡಿಯೊ ತಯಾರಿಸಲಾದ ಸಮಯದಲ್ಲಿ, ಬುಧವಾರ ಮಧ್ಯಾಹ್ನ, ಜನವರಿ 7ರಂದು, ಹೋರಾಟ ಇನ್ನೂ ಮುಂದುವರಿದಿತ್ತು.

ಈ ಹಿಂಸಾಚಾರಗಳು ಮಾತುಕತೆಗಳು ಸ್ಥಗಿತಗೊಂಡಿರುವ ಸಂದರ್ಭದಲ್ಲೇ ನಡೆದಿವೆ. ಕಳೆದ ಮಾರ್ಚ್‌ನಲ್ಲಿ ಸಹಿ ಮಾಡಲಾದ ಒಪ್ಪಂದದ ಪ್ರಕಾರ, 2025ರ ಅಂತ್ಯದೊಳಗೆ ಕುರ್ದಿಶ್ ಪಡೆಗಳನ್ನು ಸಿರಿಯ ಸೇನೆಗೆ ಸೇರಿಸುವ ಉದ್ದೇಶ ಇತ್ತು. ಆದರೆ ಈ ಭಾನುವಾರವೂ ನಡೆದ ಮಾತುಕತೆಗಳು ಮತ್ತೆ ಯಾವುದೇ ಫಲಿತಾಂಶ ನೀಡಲಿಲ್ಲ.

ಪ್ರಸ್ತುತ:

●      ಅಲೆಪ್ಪೊಗೆ ಎಲ್ಲಾ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ

●      ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ

●      ಮುಂಭಾಗದ ಸಮೀಪ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ

ಬಶಾರ್ ಅಲ್-ಅಸ್ಸಾದ್ ಆಡಳಿತ ಪತನಗೊಂಡು ಒಂದು ವರ್ಷವಾದರೂ, ದೇಶದ ಏಕತೆ ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ.

ಕಳೆದ ಜೂನ್‌ನಲ್ಲಿ, ದಮಾಸ್ಕಸ್‌ನ ಮಾರ್ ಎಲಿಯಾಸ್ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ 25 ಜನರು ಮೃತಪಟ್ಟಿದ್ದರು.

ಡಿಸೆಂಬರ್ 31ರಂದು ಅಲೆಪ್ಪೊದಲ್ಲಿ, ಬಾಬ್ ಅಲ್-ಫರಾಜ್‌ನ ಗ್ರೀಕ್ ಆರ್ಥಡಾಕ್ಸ್ ದೇವಾಲಯವನ್ನು ಗುರಿಯಾಗಿಸಿಕೊಂಡ ಆತ್ಮಾಹುತಿ ದಾಳಿಯನ್ನು ಒಬ್ಬ ಪೊಲೀಸ್ ಅಧಿಕಾರಿ ತಡೆಯಲು ಯಶಸ್ವಿಯಾದರು. ಅವರ ಹಸ್ತಕ್ಷೇಪದಿಂದ ಅನೇಕ ಜೀವಗಳು ಉಳಿದರೂ, ಆ ಪೊಲೀಸ್ ಅಧಿಕಾರಿ ತಮ್ಮ ಜೀವವನ್ನು ಕಳೆದುಕೊಂಡರು.

09 ಜನವರಿ 2026, 20:35