ಪೋಪ್: ಬದುಕಿಗೆ ಅರ್ಥವನ್ನು ಹುಡುಕುತ್ತಿದ್ದೀರಾ? ದೇವರೆಡೆಗೆ ಬನ್ನಿ
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ದೇವರು ನಮ್ಮ ಹಿಂದಿರುಗುವಿಕೆಗಾಗಿ ಕರಗಳನ್ನು ಚಾಚಿ ಕಾಯುತ್ತಾ ಇದ್ದಾರೆ ಎಂದು ಹೇಳಿದರು. ನಾವು ಅವರ ಕರೆಗೆ ಎಷ್ಟು ತಡವಾಗಿ ಉತ್ತರಿಸುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಇಂದು ಯುವ ಜನತೆ ಬದುಕಿನ ಅರ್ಥವನ್ನು ಕೇಳಿದರೆ, ಆ ಅರ್ಥವನ್ನು ನೀಡಲು ದೇವರು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
04 ಜೂನ್ 2025, 17:51
