ಹುಡುಕಿ

ಸಾರ್ವಜನಿಕ ಭೇಟಿಯಲ್ಲಿ ಪೋಪ್: ಎಲ್ಲದರ ಹೊರತಾಗಿ ಯೇಸು ನಮ್ಮನ್ನು ಮುನ್ನಡೆಸುತ್ತಾರೆ

ಪೋಪ್ ಲಿಯೋ XIV ಅವರು ಇಂದು ತಮ್ಮ ಸಾರ್ವಜನಿಕ ಭೇಟಿಯಲ್ಲಿ ಇಂದು ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಲ್ಲದರ ಹೊರತಾಗಿ ಯೇಸು ನಮ್ಮನ್ನು ಮುನ್ನಡೆಸುತ್ತಾರೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ XIV ಅವರು ಇಂದು ತಮ್ಮ ಸಾರ್ವಜನಿಕ ಭೇಟಿಯಲ್ಲಿ ಇಂದು ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಲ್ಲದರ ಹೊರತಾಗಿ ಯೇಸು ನಮ್ಮನ್ನು ಮುನ್ನಡೆಸುತ್ತಾರೆ ಎಂದು ಹೇಳಿದ್ದಾರೆ.

"ಯೇಸುವಿನೊಂದಿಗೆ ಪಯಣಿಸುವುದೆಂದರೆ ನಮಗೆ ಬೇಕಾದ ಎಲ್ಲವನ್ನು ಪಡೆದುಕೊಳ್ಳುವುದು ಸಂಕಷ್ಟ ಹಾಗೂ ಸವಾಲುಗಳ ನಡುವೆ ನಮ್ಮ ದಾಹವನ್ನು ನೀಗಿಸಿಕೊಳ್ಳುವುದು ಭಾರವಾದ ಕಲ್ಲುಗಳ ನಡುವೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು" ಎಂಬ ಮಾತುಗಳ ಮೂಲಕ ವಿಶ್ವಗುರು ಲಿಯೋ ಅವರು ವ್ಯಾಟಿಕನ್ನಿನ ಸಂತ ಪೇತ್ರರ ಚೌಕದಲ್ಲಿ ನಡೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಾವು ಸಂತೋಷವಾಗಿರಬಹುದು ಅಥವಾ ದುಃಖದಿಂದ ಇರಬಹುದು ಏಕೆಂದರೆ ನಾವು ಸದಾ ಫಲಿತಾಂಶಗಳಿಗಾಗಿ ಕಾಯುತ್ತೇವೆ. ಈ ಫಲಿತಾಂಶಗಳು ಯಶಸ್ವಿಯಾದರೆ ಸಂತೋಷ ಪಡುತ್ತೇವೆ ಇಲ್ಲವಾದಲ್ಲಿ ಮರುಗುತ್ತೇವೆ ಆದರೆ ಏಸುಕ್ರಿಸ್ತರ ಜೊತೆ ನಾವು ಪಯಣಿಸಿದರೆ ನಾವು ಎಲ್ಲಾ ಸಂದರ್ಭಗಳಲ್ಲಿಯೂ ಸಹ ಅವರ ವರದಾನಗಳನ್ನು ಪಡೆಯುತ್ತೇವೆ ಎಂದು ಪೋಪ್ ಹೇಳಿದರು.

ಮುಂದುವರೆದು ಮಾತನಾಡಿದ ಅವರು ಈ ಜಗತ್ತಿನಲ್ಲಿ ಪ್ರಸ್ತುತ ಶಾಂತಿಯ ಅವಶ್ಯಕತೆ ಕುರಿತು ಮಾತನಾಡಿ, ನಾವೆಲ್ಲರೂ ವಿಶ್ವಶಾಂತಿಗಾಗಿ ಪ್ರಾರ್ಥಿಸಬೇಕು. ಜಗತ್ತಿನಲ್ಲಿ ಎಲ್ಲಾ ರೀತಿಯ ಯುದ್ಧಗಳು ಕೊನೆಗೊಂಡು ಎಲ್ಲರೂ ಶಾಂತಿಯಿಂದ ಸೋದರತ್ವದಲ್ಲಿ ಬದುಕಬೇಕು ಎಂಬುದಕ್ಕಾಗಿ ಆಶಿಸಬೇಕು ಎಂದು ಹೇಳಿದರು.

15 ಅಕ್ಟೋಬರ್ 2025, 16:19

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >