ಹುಡುಕಿ

ಸಾರ್ವಜನಿಕ ಭೇಟಿಯಲ್ಲಿ ಪೋಪ್: ಪುನರುತ್ಥಾನ ನಮ್ಮ ಬದುಕಿನ ಎಲ್ಲಾ ಆಯಾಮಗಳನ್ನು ಪರಿವರ್ತಿಸುತ್ತದೆ

ಇಂದಿನ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಪಾಸ್ಖ ರಹಸ್ಯಗಳ ಕುರಿತು ತಮ್ಮ ಧರ್ಮೋಪದೇಶವನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಪುನರುತ್ಥಾನ ನಮ್ಮ ಬದುಕಿನ ಎಲ್ಲಾ ಆಯಾಮಗಳನ್ನು ಪರಿವರ್ತಿಸುತ್ತದೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಂದಿನ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಪಾಸ್ಖ ರಹಸ್ಯಗಳ ಕುರಿತು ತಮ್ಮ ಧರ್ಮೋಪದೇಶವನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಪುನರುತ್ಥಾನ ನಮ್ಮ ಬದುಕಿನ ಎಲ್ಲಾ ಆಯಾಮಗಳನ್ನು ಪರಿವರ್ತಿಸುತ್ತದೆ ಎಂದು ಹೇಳಿದ್ದಾರೆ.

"ಕ್ರಿಸ್ತರು ಪುನರುತ್ಥಾನಗೊಂಡಾಗ ಅವರು ದೊಡ್ಡ ರೀತಿಯಲ್ಲಿ ದೇವದೂತರೊಡನೆ ಅಥವಾ ಸ್ವರ್ಗೀಯ ಗಣಗಳೊಡನೆ ತಮ್ಮ ಪ್ರೇಷಿತರಿಗೆ ಕಾಣಿಸಿಕೊಳ್ಳಲಿಲ್ಲ. ಬಹಳ ಸರಳತೆಯಿಂದ ಒಬ್ಬ ಸಾಮಾನ್ಯ ದಾರಿಹೋಕನಾಗಿ, ಸಾಮಾನ್ಯ ಮೇಟಿಯಾಗಿ ಹಾಗೂ ಅವರ ಸ್ನೇಹಿತನಾಗಿ ಶಿಷ್ಯರಿಗೆ ಕಾಣಿಸಿಕೊಂಡರು" ಎಂದು ಹೇಳಿದ ಪೋಪ್ ಲಿಯೋ ಅವರು ನಾವೂ ಸಹ ನಮ್ಮ ಬದುಕಿನಲ್ಲಿ ಕ್ರಿಸ್ತರ ಪುನರುತ್ಥಾನದ ಅಂಶಗಳನ್ನು ಹಾಗೂ ಪರಿವರ್ತನೆಯ ಮಜಲುಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಎಮ್ಮಾವುವಿನ ಹಾದಿಯಲ್ಲಿ ನಡೆಯುವಾಗ ಪ್ರಭುವನ್ನು ಕಾಣಲಾಗಲಿಲ್ಲ ಎಂದು ಪ್ರೇಷಿತರು ಬೇಸರ ಹಾಗೂ ನೋವಿಗೆ ತುತ್ತಾಗಿದ್ದರು. ಇದರ ಅರ್ಥ ದೇವರ ವಾಗ್ದಾನಗಳನ್ನು ಕಡೆಗಣಿಸುವುದಲ್ಲ ಅಥವಾ ಅವುಗಳ ಮೇಲೆ ನಾವು ನಂಬಿಕೆ ಕಳೆದುಕೊಳ್ಳುವುದಲ್ಲ. ಬದಲಿಗೆ ಇದೇ ನೋವು ಹಾಗೂ ಕಾತುರತೆಯಲ್ಲಿ ದೇವರು ತಮ್ಮ ವಾಗ್ದಾನಗಳನ್ನು ನಮಗೆ ವ್ಯಕ್ತಪಡಿಸುವುದಾಗಿದೆ ಎಂದು ಪೋಪ್ ಲಿಯೋ ಹೇಳಿದರು.

"ನಾವೆಲ್ಲರೂ ಅವರು ಸರಳ ಹಾಗೂ ದೀನ ಉಪಸ್ಥಿತಿಯನ್ನು ಬೇಡೋಣ" ಎಂದು ಹೇಳುವ ಮೂಲಕ ಪೋಪ್ ತಮ್ಮ ಮಾತುಗಳನ್ನು ಮುಗಿಸಿದರು.

08 ಅಕ್ಟೋಬರ್ 2025, 17:35

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >